ಕನ್ನಡ ವಾರ್ತೆಗಳು

ಐಶ್ವರ್ಯ ರೈ ಸೆಕೆಂಡ್ ಇನ್ನಿಂಗ್ಸ್ ಗೆ ಮೂಹುರ್ತ.

Pinterest LinkedIn Tumblr

aishwarya_second_inigns_1

ಮುಂಬಯಿ,ನ.27: ಬಚ್ಚನ್ ಬಹುರಾಣಿ ಐಶ್ವರ್ಯಾ ರೈ ಸೆಕೆಂಡ್ ಇನ್ನಿಂಗ್ಸ್ ಶುರುಮಾಡ್ತಾರೆ ಅನ್ನೋ ಸುದ್ದಿ ಶುರುವಾಗಿ ಎರಡು ವರ್ಷಗಳೇ ಕಳೆದಿವೆ. ಆದ್ರೆ ಇಲ್ಲಿವರೆಗೂ ಐಶೂ ಮಾತ್ರ ಬಣ್ಣ ಹಚ್ಚೂ ಇಲ್ಲ, ತೆರೆಮೇಲೆ ಕಾಣಿಸಿಕೊಂಡೂ ಇಲ್ಲ. ರೀ ಎಂಟ್ರಿ ಮಾತ್ರ ಧೂಮ್ ಧಾಮ್ ತರಾನೇ ಇರ್ಬೇಕು ಅಂತ ದೊಡ್ಡ ದೊಡ್ಡ ಆಫರ್ ಗಳನ್ನೇ ಹುಡುಕ್ತಾಯಿರುವ ಐಶೂ, ಅತ್ತೆ ಜಯಾ ಬಚ್ಚನ್ ಜೊತೆ ನಿರ್ದೇಶಕರ ಮನೆ ಬಾಗಿಲನ್ನ ತಟ್ಟಿದ್ದ ವಿಷಯ ಎಲ್ಲರಿಗೂ ತಿಳಿದಿದೆ.

‘ಜಸ್ಬಾ’ ಸಿನಿಮಾ ಮೂಲಕ ಐಶ್ವರ್ಯಾ ರೈ ಕಮ್ ಬ್ಯಾಕ್ ಮಾಡೋ ವಿಷಯ ಬಚ್ಚನ್ ಕುಟುಂಬದಿಂದಲೇ ಹೊರಬಂದಿತ್ತು, ಆದ್ರೆ ಅಷ್ಟರಲ್ಲೇ ಐಶ್ವರ್ಯಾ ಹೊಸ ಪ್ರಾಜೆಕ್ಟ್ ಮೇಲೆ ಕಣ್ಹಾಕಿದ್ದಾರೆ. ಐಶೂ ಆಪ್ತ ಗೆಳೆಯ ಕರಣ್ ಜೋಹರ್ ಜೊತೆ ಒಂದು ಸಿನಿಮಾ ಮಾಡ್ಬೇಕು ಅಂತ ಮಾತುಕತೆ ನಡೆಸಿದ್ದ ಐಶ್, ಈಗ ಆ ಪ್ರಾಜೆಕ್ಟ್ ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಕರಣ್ ಜೋಹರ್ ನಿರ್ದೇಶಿಸುವ ಈ ಚಿತ್ರಕ್ಕೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಹೀರೋ ಅಂತ ಮೊದಲು ನಿಗದಿಯಾಗಿತ್ತು. ಆದ್ರೆ, ಅಂದು ಪ್ರಾಜೆಕ್ಟ್ ನ ಪೆಂಡಿಂಗ್ ನಲ್ಲಿಟ್ಟಿದ್ದ ಐಶೂ ಈಗ ಏಕ್ದಂ ಓಕೆ ಅಂದಿರುವುದಕ್ಕೆ ಕಾರಣ ಹೀರೋ ಬದಲಾಗಿರುವುದು

aishwarya_second_inigns_2

ಬಾಲಿವುಡ್ ಗಲ್ಲಿಗಲ್ಲಿಗಳಲ್ಲಿ ರೆಕ್ಕೆ ಪುಕ್ಕ ಕಟ್ಟಿಕೊಂಡು ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಅಮೀರ್ ಜಾಗಕ್ಕೆ ಕರಣ್ ಜೋಹರ್ ರಣ್ಬೀರ್ ಕಪೂರ್ ನ ಸೆಲೆಕ್ಟ್ ಮಾಡಿದ್ದಾರೆ. ವಿಷಯ ಗೊತ್ತಾಗಿದ ತಕ್ಷಣ ಐಶ್ವರ್ಯಾ ‘ರೆಡಿ’ ಅಂದುಬಿಟ್ಟಿದ್ದಾರಂತೆ. ಇದನ್ನ ಕೇಳಿದ ತಕ್ಷಣ, ಮೊನ್ನೆಮೊನ್ನೆಯಷ್ಟೇ 41ನೇ ವಸಂತಕ್ಕೆ ಕಾಲಿಟ್ಟ ಐಶ್ವರ್ಯಾ ರೈ ಎಲ್ಲಿ? 32ರ ಹರೆಯದ ರಣ್ಬೀರ್ ಕಪೂರ್ ಎಲ್ಲಿ? ಇಬ್ರೂ ಜೊತೆಯಾಗಿ ಡ್ಯುಯೆಟ್ ಹಾಡೋದುಂಟಾ! ಬಚ್ಚನ್ ಸೊಸೆಗೆ ಇದೆಲ್ಲಾ ಬೇಕಾ? ಅಂತ ಬಾಲಿವುಡ್ ನಲ್ಲಿ ತಲೆಗೊಂದು ಕಮೆಂಟ್ ಬೀಳ್ತಾಯಿದೆ.

aishwarya_second_inigns_3a

ಚಿಕ್ಕವಯಸ್ಸಿನ ಹೀರೋ ಜೊತೆ ನಟಿಸಿದ್ರೆ, ಸ್ಕ್ರೀನ್ ನಲ್ಲಿ ತನ್ನ ಚರೀಶ್ಮಾ ಹೆಚ್ಚಾಗಬಹುದು ಅಂತ್ಲೋ ಏನೋ, ಐಶ್ ಖುಷಿಯಿಂದ ಒಪ್ಪಿಕೊಂಡು ಬಿಟ್ಟಿದ್ದಾರೆ. ಇದರ ಮಧ್ಯೆ ಟ್ವಿಸ್ಟ್ ಕೊಡಬೇಕು ಅಂದ್ರೆ ಚಿತ್ರದಲ್ಲಿ ರಣ್ಬೀರ್, ಐಶ್ ಮಧ್ಯೆ ಅನುಷ್ಕಾ ಶರ್ಮಾ ಕೂಡ ಇದ್ದಾರೆ ಅನ್ನೋ ಸುದ್ದಿ ಕೂಡ ಹೊರಬಿದ್ದಿದೆ. ಸಿನಿಮಾದಲ್ಲಿ ಅದ್ಯಾರ್ಯಾರು ಇದ್ದಾರೋ, ಯಾವ ಸಿನಿಮಾದಿಂದ ಐಶೂ ಸೆಕೆಂಡ್ ಇನ್ನಿಂಗ್ಸ್ ಶುರುಮಾಡ್ತಾರೋ, ಕರಣ್ ಜೋಹರ್ ರೆಡಿ ಮಾಡಿರುವ ಕಥೆ ಇನ್ನೆಂಥದ್ದೋ, ಅದೆಲ್ಲಾ ತೆರೆಮೇಲೆ ಕಾಣುವವರೆಗೂ ಯಾವುದು ಗ್ಯಾರೆಂಟಿ ಇಲ್ಲ.

Write A Comment