ಕನ್ನಡ ವಾರ್ತೆಗಳು

ರಸ್ತೆ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಿ : ದುಬೈಯ ಪ್ರಸಿದ್ಧ ಉದ್ಯಮಿ ಹರೀಶ್ ಶೇರಿಗಾರ್ ಕರೆ

Pinterest LinkedIn Tumblr

ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್

Rx_Photo_Prize_1

ಸ್ವಸ್ತಿ ಆರ್‌ ಎಕ್ಸ್ ಲೈಫ್ ಹರ್‌ಕ್ಯುಲಸ್ ಸೈಕಲ್ ರ್‍ಯಾಲಿಯ ಛಾಯಚಿತ್ರ ಸ್ಪರ್ಧೇಯ ವಿಜೇತರ ಬಹುಮಾನ ವಿತರಣಾ ಸಮಾರಂಭದಲ್ಲಿ ಹರೀಶ್ ಶೇರಿಗಾರ್ ಅವರು ವಿಜೇತರಿಗೆ ನಗದು ಬಹುಮಾನ ವಿತರಿಸಿದರು.

ಮಂಗಳೂರು,ಡಿ.20: ಸೈಕಲ್ ಸವಾರಿ ಸಂದರ್ಭದಲ್ಲಿ ಪ್ರತಿಯೊಬ್ಬ ಸವಾರರಲ್ಲಿ ರಸ್ತೆ ಸುರಕ್ಷತಾ ಕ್ರಮವನ್ನು ಅನುಸರಿಸುವ ಬಗ್ಗೆ ಅರಿವು ಮೂಡಿಸುವ ಮೂಲಕ ರ್‍ಯಾಲಿ ಸಂಘಟಕರು ಇತರರಿಗೆ ಮಾದರಿಯಾಗಬೇಕು. ಮಾತ್ರವಲ್ಲದೇ ವಾಹನ ಸವಾರಿ ಸಂಧರ್ಭದಲ್ಲಿ ತಮ್ಮ ಸುರಕ್ಷತೆಗಾಗಿ ಪ್ರತಿಯೊಬ್ಬರು ಕಡ್ಡಾಯವಾಗಿ ಹೈಲ್ಮಟ್ ಧರಿಸುವ ಮೂಲಕ ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ದುಬೈಯ ಖ್ಯಾತ ಉದ್ಯಮಿ ಹಾಗೂ ಹೆಸರಾಂತ ಸಂಗೀತಗಾರ ಶ್ರೀ ಹರೀಶ್ ಶೇರಿಗಾರ್ ಅವರು ಕರೆ ನೀಡಿದರು.

ಇತ್ತೀಚಿಗೆ ಮಂಗಳೂರಿನಲ್ಲಿ ಸ್ವಸ್ತಿ ಆರ್ ಎಕ್ಸ್ ಲೈಫ್ ಟ್ರಸ್ಟ್‌ ಅಶ್ರಯದಲ್ಲಿ ನಡೆದ 8ನೇ ವರ್ಷದ ಆರ್‌ ಎಕ್ಸ್ ಲೈಫ್ ಹರ್‌ಕ್ಯುಲಸ್ ಸೈಕಲ್ ರ್‍ಯಾಲಿಯ ಸಂದರ್ಭ ಅಯೋಜಿಸಲಾದ ಛಾಯಚಿತ್ರ ಸ್ಪರ್ಧೇಯ ವಿಜೇತರಿಗೆ ಶನಿವಾರ ನಗರದ ಪ್ರತಿಷ್ಟಿತ ಹೊಟೇಲ್ ಮಹಾರಾಜದಲ್ಲಿ ಏರ್ಪಡಿಸಲಾದ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

Rx_Photo_Prize_2 Rx_Photo_Prize_3 Rx_Photo_Prize_4 Rx_Photo_Prize_5

ಸೈಕಲ್ ಸವಾರಿಗಾಗಿ ಮಂಗಳೂರಿನಲ್ಲಿ ಕೂಡ ಸೈಕಲ್ ಟ್ರ್ಯಾಕ್ ನಿರ್ಮಿಸಲು ಮಂಗಳೂರು ಮಹಾನಗರ ಪಾಲಿಕೆ ಅಯುಕ್ತರಲ್ಲಿ ಮನವಿ ಮಾಡುವಂತೆ ಕಾರ್ಯಕ್ರಮದ ಸಂಘಟಕರಿಗೆ ಸೂಚನೆ ನೀಡಿದ ಸೇರಿಗಾರ್ ಅವರು, ಅರ್.ಎಕ್ಸ್ ಲೈಫ್‌ನ ಕಾರ್ಯಚಟುವಟಿಕೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಸೈಕಲ್ ರ್‍ಯಾಲಿಯ ಪ್ರಥಮ ವಿಜೇತರಾದ ಕಲ್ಪಿತ ಸ್ಟೂಡೀಯೋ ಮಾಲಕ ಕರುಣಾಕರ್ ಕಾನಾಂಗಿ, ದ್ವಿತೀಯ ಬಹುಮಾನ ವಿಜೇತ ದಯಾ ಕುಕ್ಕಾಜೆ ಹಾಗೂ ತೃತೀಯ ಬಹುಮಾನ ವಿಜೇತ ಎಂ.ಆರ್.ಪಿಎಲ್‌ನ  ಅವಿನಾಶ್ ಅವರಿಗೆ ಹರೀಶ್ ಶೇರಿಗಾರ್ ಅವರು ನಗದು ಬಹುಮಾನ ಹಾಗೂ ಸ್ಮರಣಿಕೆ ವಿತರಿಸಿದರು.

ಸ್ವಸ್ತಿ ಆರ್ ಎಕ್ಸ್ ಲೈಫ್ ಟ್ರಸ್ಟ್‌ನ ಟ್ರಸ್ಠಿ ಡಾ. ಗಾಯತ್ರಿ ಭಟ್ ಅವರು ಸ್ವಸ್ತಿ ಆರ್ ಎಕ್ಸ್ ಲೈಫ್ ಟ್ರಸ್ಟ್‌ನ ಕಾರ್ಯಚಟುವಟಿಕೆಗಳ ಬಗ್ಗೆ ಹಾಗೂ ಸೈಕಲ್ ರ್‍ಯಾಲಿ ಕುರಿತ ಮಾಹಿತಿ ನೀಡಿದರು. ಸ್ವಸ್ತಿ ಆರ್ ಎಕ್ಸ್ ಲೈಫ್ ಟ್ರಸ್ಟ್‌ನ ಸಂಯೋಜಕ ಗಿರಿಧರ್ ಕಾಮಾತ್ ಪ್ರಸ್ತಾವನೆಗೈದರು. ಸಂಸ್ಥೆಯ ಪಾಲುದಾರರಾದ ವಂದನಾ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುನೀಲ್ ದತ್ತ್ ಪೈ ಸ್ವಾಗತಿಸಿದರು. ಇನ್ನೋರ್ವ ಸಂಯೋಜಕ ನರೇಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Rx_Photo_Prize_6 Rx_Photo_Prize_7 Rx_Photo_Prize_8 Rx_Photo_Prize_9 Rx_Photo_Prize_10

ಹರೀಶ್ ಶೇರಿಗಾರ್ ಅವರಿಂದ ಸುಮಧುರ ಗಾಯನ….

ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹರೀಶ್ ಶೇರಿಗಾರ್ ಅವರು ಪ್ರೇಕ್ಷಕರ ಒತ್ತಾಯದ ಮೇರೆಗೆ ತುಳು, ಕನ್ನಡ ಹಾಗೂ ಹಿಂದಿ ಭಾಷೆಯ ಮೂರು ಹಾಡುಗಳನ್ನು ಹಾಡುವ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂಗೀತಾ ಪ್ರೇಮಿಗಳ ಮನ ರಂಜಿಸಿದರು.

Rx_Photo_Prize_11 Rx_Photo_Prize_16

ಫೋಟೊ ಸ್ಪರ್ಧೇ : ವಿಜೇತರಿಗೆ ನಗದು ಬಹುಮಾನ

ಈ ಬಾರಿಯ ರ್‍ಯಾಲಿಯ ಸಂದರ್ಭ ಫೋಟೊ ಸ್ಪರ್ಧೇಯನ್ನು ಅಯೋಜಿಸಲಾಗಿದ್ದು, ರ್‍ಯಾಲಿಯ ಅತ್ಯೂತ್ತಮ ಮೂರು ಛಾಯಚಿತ್ರಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ (ನಗದು) ಬಹುಮಾನ ವಿತರಿಸಲಾಯಿತು.  ಒಬ್ಬರಿಗೆ ಮೂರು ಚಿತ್ರಗಳನ್ನು ಕಳಿಸಲು ಅವಕಾಶ ನೀಡಲಾಗಿದ್ದು, ಈ ಫೋಟೊ ಸ್ಪರ್ಧೇಯಲ್ಲಿ ಎಲ್ಲರೂ ಮುಕ್ತವಾಗಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಆದರೆ ಮೊಬೈಲ್ ನಲ್ಲಿ ತೆಗೆದ ಚಿತ್ರಗಳಿಗೆ ಅವಕಾಶವಿರಲಿಲ್ಲ. ಸ್ಫರ್ಧೆಗೆ ಯಾವೂದೇ ಪ್ರವೇಶ ಶುಲ್ಕ ಕೂಡ ಇರಲಿಲ್ಲ. ದುಬೈಯ ಪ್ರಸಿದ್ಧ ಅಂತಾರ್ಜಾಲ ತಾಣ ಕನ್ನಡಿಗ ವರ್ಲ್ಡ್ ಡಾಟ್ ಕಾಮ್ (www.kannadigaworld.com) ಈ ನಗದು ಬಹುಮಾನದ ಪ್ರಾಯೋಜಕತ್ವವನ್ನು ವಹಿಸಿಕೊಂಡಿತ್ತು. 

Rx_Photo_Prize_12 Rx_Photo_Prize_13 Rx_Photo_Prize_14 Rx_Photo_Prize_15 Rx_Photo_Prize_17 Rx_Photo_Prize_18 Rx_Photo_Prize_19 Rx_Photo_Prize_20 Rx_Photo_Prize_21 Rx_Photo_Prize_22 Rx_Photo_Prize_23

ರ್‍ಯಾಲಿಯ ಮುಖ್ಯ ಉದ್ದೇಶ :

ಸ್ವಸ್ತಿ ಆರ್ ಎಕ್ಸ್ ಲೈಫ್ ಟ್ರಸ್ಟ್‌ ಅಶ್ರಯದಲ್ಲಿ ೮ನೇ ವರ್ಷದ ಆರ್‌ ಎಕ್ಸ್ ಲೈಫ್ ಹರ್‌ಕ್ಯುಲಸ್ ಸೈಕಲ್ ರ್‍ಯಾಲಿ ಡಿಸೆಂಬರ್ 7 ರಂದು ಮುಂಜಾನೆ ಮಂಗಳೂರಿನಲ್ಲಿ ನಡೆಯಿತು. ನಗರದ ಲೇಡಿಹಿಲ್ ವೃತ್ತದಿಂದ ಆರಂಭಗೊಂಡ ಸುಮಾರು 18 ಕಿ.ಮೀ ದೂರದ ಈ ಸೈಕಲ್ ರ್‍ಯಾಲಿಗೆ ಮಂಗಳೂರು ನಗರ ಪೊಲೀಸ್ ಅಯುಕ್ತಕ ಆರ್. ಹಿತೇಂದ್ರರವರು ಹಸಿರು ನಿಶಾನೆ ತೋರಿಸಿದ್ದರು.

ರ್‍ಯಾಲಿಯು ಕೊಟ್ಟಾರ – ಕೂಳೂರು- ತಣ್ಣೀರುಬಾವಿ- ಕೊಟ್ಟಾರ-ಉರ್ವಸ್ಟೋರ್, ಅಶೋಕನಗರ – ಹ್ಯೊಗೈಬೈಲ್- ಸುಲ್ತಾನ್ ಬತ್ತೇರಿ ಮಾರ್ಗವಾಗಿ ಸಾಗಿ ಬೋಳೂರಿನ ಅಮೃತ ವಿದ್ಯಾಲಯಂ ಮೈದಾನದಲ್ಲಿ ಸಮಾರೋಪಗೊಂಡಿತ್ತು. 10 ವರ್ಷದಿಂದ 83 ವರ್ಷದವರೆಗಿನವರೆಗಿನ ಸುಮಾರು 2200 ಮಂದಿ ಈ ರ್‍ಯಾಲಿಯಲ್ಲಿ ಭಾಗವಹಿಸಿದ್ದರು.

Rx_Photo_Prize_24 Rx_Photo_Prize_25 Rx_Photo_Prize_26 Rx_Photo_Prize_27 Rx_Photo_Prize_28 Rx_Photo_Prize_29 Rx_Photo_Prize_30 Rx_Photo_Prize_31

ರಸ್ತೆ ಸುರಕ್ಷತೆ ಈ ಸಲದ ರ್‍ಯಾಲಿಯ ಉದ್ದೇಶವಾಗಿದ್ದು ” ಸುರಕ್ಷಿತ ರಸ್ತೆ – ಸುರಕ್ಷಿತ ಸವಾರಿ” ಧ್ಯೇಯವಾಕ್ಯ . ನಗರದ ರಸ್ತೆಗಳು ದ್ವಿಚಕ್ರ ವಾಹನ ಸವಾರಿಗೆ ಸುರಕ್ಷಿತವಾಗಿರುವಂತೆ ಸಂಬಂಧ ಪಟ್ಟವರಲ್ಲಿ ಅಗ್ರಹಿಸಲು ಹಾಗೂ ಚತುಷ್ಟಕ್ರ ವಾಹನ ಚಾಲಕರು ಸೈಕಲ್ ಸವಾರರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಪ್ರೇರೇಪಿಸಲು ಈ ರ್‍ಯಾಲಿಯನ್ನು ಅಯೋಜಿಸಲಾಗಿತ್ತು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್

1 Comment

  1. I am very happy to associate with Rx lfe trust bcoz one can really enjoy his lfe. I am thankfull to Mrharish sherigar of kannadiga world .com for sponsoring the event and also for gracing the ocassion.
    Great work by Dr.gayathri bhat, Smt. vanadana nayak, Mrgiridhar kamath and offcourse young coordinator Narendra nayak for success of rx cycle rally held on 7th dec 2014. Three cheers to Rx hiphip hurray, hiphip hurray,hiphip hurray.

    sunil dath pai(volunteer of Rx life)

Write A Comment