ಅಂತರಾಷ್ಟ್ರೀಯ

ಟ್ವಿಟರ್‌ನಲ್ಲಿ ಅವಹೇಳನಕಾರಿ ಭಾಷೆ ನಿಷೇಧ

Pinterest LinkedIn Tumblr

twter_notic_phot

ನ್ಯೂಯಾರ್ಕ್,ಫೆ.27: ಸಾಮಾಜಿಕ ಜಾಲತಾಣ ಟ್ವಿಟರ್ ಅವಹೇಳನಾಕರಿ ಭಾಷೆ ಮತ್ತು ಪ್ರಚೋದನೆ ನೀಡುವಂತಹ ಭಾಷಣಗಳಿಗೆ ನಿಷೇಧವೇರಲಾಗಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪದ ಬಳಕೆ, ಧರ್ಮದ ವಿರುದ್ಧ ಭಾಷಣಗಳು ಸೇರಿದಂತೆ ಇತರೆ ಗಲಭೆ ಪ್ರಚೋದನೆ ನೀಡುವಂತಹ ಹೇಳಿಕೆಗಳು ಹೆಚ್ಚಾಗುತ್ತಿವೆ. ಈ ಹಿನ್ನಲೆಯಲ್ಲಿ ಇದಕ್ಕೆ ಕಡಿವಾಣ ಹಾಕಲು ನಿರ್ಧರಿಸಿರುವ ಟ್ವಿಟರ್, ಅವಹೇಳನಾಕರಿ ಭಾಷೆ ಮತ್ತು ಪ್ರಚೋದನೆ ನೀಡುವಂತಹ ಭಾಷಣಗಳಿಗೆ ನಿಷೇಧವೇರಿದ್ದು, ಇದನ್ನು ತಡೆಯಲು ನೂತನ ಟೂಲ್ಸ್ ಅನ್ನು ಸೇರ್ಪಡೆ ಮಾಡಿದೆ.

ಇನ್ನು ಮುಂದೆ ಅವಹೇಳನಕಾರಿ ಭಾಷಣ ಸೇರಿದಂತೆ ಗಲಭೆಗೆ ಕಾರಣವಾಗುವಂತಹ ಯಾವುದೇ ಹೇಳಿಕೆಗಳನ್ನು ಟ್ಟಿಟರ್ ಖಾತೆದಾರರು ನೀಡುವಂತಿಲ್ಲ. ಒಂದು ವೇಳೆ ನಿಯಮಗಳನ್ನು ಮೀರಿದರೆ ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಟ್ವಿಟರ್ ಹೇಳಿದೆ. ಅಲ್ಲದೇ, ಬೆದರಿಕೆ ಸಂದೇಶಗಳಿಗೆ ನಿಷೇಧವೇರಲಾಗಿದ್ದು, ಇನ್ನೂ ಮುಂದೆ ಈ ರೀತಿ ಹೇಳಿಕೆಗಳು, ಸಂದೇಶಗಳನ್ನು ಟ್ವಿಟರ್‌ನಲ್ಲಿ ಪ್ರಕಟವಾಗುವುದಿಲ್ಲ ಎಂದು ಟ್ವಿಟರ್ ಸ್ಪಷ್ಟಪಡಿಸಿದೆ.

Write A Comment