ಕನ್ನಡ ವಾರ್ತೆಗಳು

ಮುಡಿಪುವಿನಲ್ಲಿ ಮಹಿಳಾ ಕಾಲೇಜು ಆರಂಭಿಸಿರುವುದು ಸ್ವಾಗತಾರ್ಹ: ಅಬ್ದುಲ್ ರಶೀದ್ ಝೈನಿ.

Pinterest LinkedIn Tumblr

mudipu_muslm_photo_1

ಉಳ್ಳಾಲ,ಜುಲೈ.28 : ಶಿಕ್ಷಣದಲ್ಲಿ ಹಿಂದುಳಿದ ಹೆಣ್ಣು ಮಕ್ಕಳಿಗೆ ಶಿಕ್ಷಣ ಒದಗಿಸಿ ಕೊಡುವ ದೃಷ್ಟಿಯಿಂದ ಮಹಿಳಾ ಶರೀ‌ಅತ್ ಕಾಲೇಜ್‌ನ್ನು ಆರಂಭಿಸಲಾಗಿದೆ. ಶಿಕ್ಷಣದಲ್ಲಿ ಹೆಣ್ಣು ಮಕ್ಕಳು ಮುಂದಿದ್ದಾರೆ ಎನ್ನುವುದನ್ನು ಫಲಿತಾಂಶ ಸಾಬೀತುಪಡಿಸುತ್ತದೆ. ಆದರೆ ಸೌಕರ್ಯಗಳ ಕೊರತೆಯಿಂದ ಹೆಣ್ಣು ಮಕ್ಕಳ ಶಿಕ್ಷಣ ಕುಂಠಿತಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ತಾಜುಲ್ ಉಲಮಾ ಫೌಂಡೇಶನ್ ಮಹಿಳಾ ಶರೀ‌ಅತ್ ಕಾಲೇಜು ಮುಡಿಪುವಿನಲ್ಲಿ ಆರಂಭಿಸಿರುವುದು ಸ್ವಾಗತಾರ್ಹ ಎಂದು ಅಖಿಲ ಭಾರತ ಎಸ್‌ಎಸ್‌ಎಫ್ ಉಪಾಧ್ಯಕ್ಷ ಅಬ್ದುಲ್ ರಶೀದ್ ಝೈನಿ ಹೇಳಿದರು.

ಅವರು ಸೋಮವಾರ ಮುಡಿಪು ಎಬಿ ಕಾಂಪ್ಲೆಕ್ಸ್‌ನಲ್ಲಿ ನಡೆದ ತಾಜುಲ್ ಉಲಮಾ ಫೌಂಡೇಶನ್ ಮಹಿಳಾ ಶರೀಯತ್ ಕಾಲೇಜು ಮುಡಿಪು ಇದರ ಪ್ರಥಮ ವಾರ್ಷಿಕ ಸಮಾರಂಭದಲ್ಲಿ ಮುಖ್ಯ ಭಾಷಣಗಾರರಾಗಿ ಭಾಗವಹಿಸಿ ಮಾತನಾಡಿದರು.

mudipu_muslm_photo_2 mudipu_muslm_photo_3

ಹೆಣ್ಣು ಮಕ್ಕಳಿಗೆ ಪ್ರಸಕ್ತ ಕಾಲದಲ್ಲಿ ಬೇಕಾದಷ್ಟು ತರಬೇತಿ ಕೇಂಧ್ರಗಳಿವೆ. ಎಲ್ಲದಕ್ಕೂ ತರಬೇತಿಯನ್ನು ವಿವಿಧ ಕಡೆ ಕೊಡಲಾಗುತ್ತಿದೆ. ರಾಷ್ಟ್ರೀಯ ಮಟ್ಟದಲ್ಲೂ ಕೂಡಾ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಉಚಿತ ಶಿಕ್ಷಣದ ವ್ಯವಸ್ಥೆಯನ್ನು ಕೂಡಾ ಸರಕಾರ ಹಮ್ಮಿಕೊಳ್ಳುತಿದೆ. ಇದಕ್ಕೆ ಕಾರಣ ಮಹಿಳೇಯರು ಶಿಕ್ಷಣದಿಂದ ಹಿಂದುಳಿಯಬಾರದು ಎನ್ನುವ ಏಕೈಕ ಕಾರಣದಿಂದ ಮಾತ್ರ ಎಂದು ಹೇಳಿದರು.

ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ದುವಾ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಹಮ್ಮದ್ ಅಲೀಫೈಝಿ ಬಾಳೆಪುಣಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಿಹಾಬುದ್ದೀನ್ ಅಲ್ ಮಶ್‌ಹೂರ್ ತಂಙಳ್ ತಲಕ್ಕಿ ಹಿತವಚನ ನೀಡಿದರು. ಮುಹಮ್ಮದ್ ಮದನಿ ಸಾಮನಿಗೆ ಅತಿಥಿಗಳನ್ನು ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಹಂಝ ಮದನಿ ಮಿತ್ತೂರು, ಅಬ್ದುಲ್ ರಹ್ಮಾನ್ ಮದನಿ ಮಧ್ಯನಡ್ಕ, ಅಬ್ದುಲ್ ಲತೀಫ್ ಸಖಾಫಿ, ಅಬೂಬಕರ್ ಲತೀಫಿ ಎನ್ಮೂರು, ಸಿದ್ದೀಕ್ ಸಖಾಫಿ, ಅಬೂಬಕರ್ ಸಿದ್ದೀಕ್ ಸಖಾಫಿ, ಉಸ್ಮಾನ್ ಸ‌ಅದಿ ಪಟ್ಟೋರಿ, ಕೆ.ಇ. ಅಬ್ದುಲ್ ಖಾದರ್ ರಝ್ವಿ, ಕುಂಞಿ ಬಾವ ಹಾಜಿ ಮುಡಿಪು, ಪುತ್ತು ಬಾವ ಹಾಜಿ , ಹಸನ್ ಹಾಜಿ, ಮೊಯಿದಿನ್ ಹಾಜಿ ತೋಟಾಲ್, ಹಮೀದ್ ಹಾಜಿ ದೇರಳಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

Write A Comment