ಕನ್ನಡ ವಾರ್ತೆಗಳು

ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಉದ್ಘಾಟನೆ

Pinterest LinkedIn Tumblr

ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಗುರುವಾರ ಆರ್. ಕೆ. ಸಂಜೀವರಾವ್ ವೇದಿಕೆ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ, ನಾಗೂರು, ಕುಂದಾಪುರ ತಾಲೂಕು ಇಲ್ಲಿ ಡಾ.ಯು.ಪಿ. ಉಪಾಧ್ಯಾಯ ಇವರು ಉದ್ಘಾಟಿಸಿದರು.

ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾಜಿ ಅಧ್ಯಕ್ಷರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಇವರು ನಾಟಕಕಾರ ಉದ್ಯಾವರ ಮಾಧವ ಆಚಾರ್ಯರ ಎದೆಯೊಳಗಿನ ದೀಪ ಮತ್ತು ಇತರ ರಂಗ ಕೃತಿಗಳು ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮ ನೆರವೇರಿಸಿದರು.

????????????????????????????????????

????????????????????????????????????

????????????????????????????????????

????????????????????????????????????

????????????????????????????????????

????????????????????????????????????

????????????????????????????????????

????????????????????????????????????

????????????????????????????????????

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೀಲಾವರ ಸುರೇಂದ್ರ ಅಡಿಗ ಇವರು ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಶ್ರಿ.ಕೆ.ಎಸ್. ಪ್ರಕಾಶ್ ರಾವ್ ನಿವೃತ್ತ ಮಹಾಪ್ರಬಂಧಕರು ಸಿಂಡಿಕೇಟ್ ಬ್ಯಾಂಕ್, ಶ್ರೀ. ಎಸ್. ಜನಾರ್ದನ್ ಮರವಂತೆ, ಶ್ರೀ. ವಿಶ್ವೇಶ್ವರ ಅಡಿಗ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶ್ರೀ. ರಭೀಂದ್ರ ನಾಯಕ್ ಉಡುಪಿ, ಡಾ. ಎಚ್. ಶಾಂತಾರಾಮ ಮಣಿಪಾಲ, ಶ್ರೀ. ಅಪ್ಪಣ್ಣ ಹೆಗ್ಡೆ ಬಸ್ರೂರು, ಡಾ. ವಿಷ್ಣುಮೂರ್ತಿ ಐತಾಳ್, ಶ್ರೀಮತಿ ಗೌರಿ ಉಪ್ಪಿನಕುದ್ರು, ಡಾ. ನಾ. ಮೊಗಸಾಲೆ ಕಾಂತಾವರ, ಶ್ರೀ. ಉಡುಪಿ ವಾಸುದೇವ್ ಭಟ್, ಶ್ರೀ. ರಿಚರ್ಡ್ ರೆಬೆಲ್ಲೋ ಮರವಂತೆ, ಶ್ರೀ. ಐರೋಡಿ ಗೋವಿಂದಪ್ಪ, ಶ್ರೀ. ಇಬ್ರಾಹಿಂ ಸಾಹೇಬ್ ಹಂಗಾರಕಟ್ಟೆ ಇವರಿಗೆ ಶತಮಾನೋತ್ಸವದ ಪ್ರಯುಕ್ತ ಸನ್ಮಾನಿಸಿ ಗೌರವಿಸಲಾಯಿತು.

ಕುಂದಾಪುರ ನಾರಾಯಣ ಖಾರ್ವಿ ಸ್ವಾಗತಿಸಿ, ಆರೂರು ತಿಮ್ಮಪ್ಪ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುರಾಲು ನಾರಾಯಣ ಮಡಿ ವಂದಿಸಿದರು. ರಾಜೇಶ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

 

Write A Comment