ಗಲ್ಫ್

“ಪುಷ್ಪಾಂಜಲಿ”

Pinterest LinkedIn Tumblr

ಸಂಗಮ ಕಲಾವಿದರು ದುಬಾಯಿ 2014 ಅಕ್ಟೊಬರ್ 3ನೇ ತಾರೀಕಿನಂದು ದುಬಾಯಿ ಇಂಡಿಯನ್ ಹೈಸ್ಕೂಲ್ ಶೇಖ್ ರಾಶಿದ್ ಸಭಾಂಗಣದಲ್ಲಿ ಸಂಜೆ 5.30 ಗಂಟೆಗೆ ಅರ್ಪಿಸುವ -“ಪುಷ್ಪಾಂಜಲಿ” ದಿವಂಗತ ಉಮೇಶ್ ನಂತೂರ್. 10ನೇ ವರ್ಷದ ಸ್ಮರಣೆಯಲ್ಲಿ ಅರ್ಪಿಸುವ ವೈವಿದ್ಯಮಯ ಸಂಗೀತ ನೃತ್ಯ, ಹಾಸ್ಯ, ಪ್ರಹಸನ ಕಾರ್ಯಕ್ರಮ.

Umesh nan

ಕೊಲ್ಲಿ ನಾಡಿನಲ್ಲಿ ಮಿಂಚಿ ಹೋದ ಬಹುಮುಖ ಪ್ರತಿಭೆ- ದಿವಂಗತ ಉಮೇಶ್ ನಂತೂರ್

ಅರಬ್ ಸಂಯುಕ್ತ ಸಂಸ್ಥಾನಕ್ಕೆ 1980 ರ ದಶಕದಲ್ಲಿ ಉದ್ಯೋಗ ನಿಮಿತ್ತ ಆಗಮಿಸಿ, ತನ್ನ ಬಿಡುವಿನ ಸಮಯದಲ್ಲಿ ಕನ್ನಡ ಭಾಷೆ ಸಂಸ್ಕೃತಿಯನ್ನು ಕೊಲ್ಲಿ ನಾಡಿನ ಅನಿವಾಸಿ ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದ ಉಮೇಶ ನಂತೂರ್ ಸರ್ವಕಾಲಿಕ ಮಾನ್ಯರು. ಎರಡು ದಶಕಗಳ ಕಾಲ ಕರ್ನಾಟಕದ ಶ್ರೀಮಂತ ಕಲಾಪ್ರಕಾರಗಳನ್ನು ಯು.ಎ.ಇ.ಯಲ್ಲಿ ವೈಭವೀ ಕರಿಸಿದ ಕಲಾವಿದ, ಕಲಾಪೋಷಕ, ಚಿತ್ರಕಾರ, ಬರಹಗಾರ, ನಟ, ನಿರ್ದೇಶಕ, ಸಂಘಟಕ, ಒಟ್ಟಿನಲ್ಲಿ ಅವರೋರ್ವ ಸವ್ಯಸಾಚಿ. ಮಂಗಳೂರು ಮೂಲದ ಉಮೇಶ ನಂತೂರ್ ಕೊಲ್ಲಿ ನಾಡಿನಲ್ಲಿ ಕನ್ನಡ ತುಳು ಭಾಷೆ, ಸಂಸ್ಕೃತಿಯನ್ನು ಜಾಗೃತಿ ಮೂಡಿಸುವಲ್ಲಿ ಅಪಾರ ಶ್ರಮ ಪಟ್ಟವರು.

ಕನ್ನಡ ನಾಡಿನ ಕಲೆ ಸಂಸ್ಕೃತಿಯನ್ನು ಕೊಲ್ಲಿ ನಾಡಿನಲ್ಲಿ ವೈಭವೀಕರಿಸಿದ ಕನ್ನಡಿಗರಲ್ಲಿ ಉಮೇಶ್ ನಂತೂರ್ ಮುಂಚೂಣಿಯಲ್ಲಿದ್ದಾರೆ. ಕೊಲ್ಲಿ ನಾಡಿನ ಬದುಕಿನ ಜಂಜಾಟಗಳ ನಡುವೆಯೂ, ಕರ್ನಾಟಕ ಸಂಘ , ತುಳುಕೂಟ, ಸಂಗಮ ಕಲಾವಿದರು, ಮಂಗಳಾ ಯಕ್ಷಗಾನ ತಂದ ಇನ್ನಿತರ ಸಂಘಟನೆಗಳನ್ನು ಹುಟ್ಟುಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದವರು.

ಸ್ವತ: ನಾಟಕ, ಯಕ್ಷಗಾನ ಕಲಾವಿದರಾಗಿದ್ದ ಉಮೇಶ ನಂತೂರ್, ತಾಯ್ನಡಿನಿಂದ ಬರುತ್ತಿದ್ದ ಕಲಾ ಪ್ರತಿಭೆಗಳನ್ನು ಗುರುತ್ತಿಸಿ, ಮರಳುನಾಡಿನಲ್ಲಿ ಸೂಕ್ತ ವೇದಿಕೆ ಕಲ್ಪಿಸಿದವರು. ಇವರ ಪ್ರೋತ್ಸಾಹದಿಂದ ಕೊಲ್ಲಿ ನಾಡಿನಲ್ಲಿ ಹಲವಾರು ಪ್ರತಿಭೆಗಳು ಅರಳಿದೆ.

ಯು.ಎ.ಇ. ಯಲ್ಲಿಕೋಟ್ಯಾಂತರ ಭಾರತೀಯರಲ್ಲಿ ಕರ್ನಾಟಕದ ಕರಾವಳಿಯ ತುಳುವರು ಉದ್ಯೋಗ , ಉಧ್ಯಮ ನಿಮಿತ್ತ ಬಂದು ನೆಲೆಸಿದ್ದಾರೆ. ತುಳುವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ 1987 ರಲ್ಲಿ ಶ್ರೀಯುತ ಸಿ. ಆರ್. ಶೆಟ್ಟಿ ಮತ್ತು ಉಮೇಶ್ ನಂತೂರ್ ಹಾಗೂ ತಂಡದವರು ಸೇರಿ ತುಳು ಕೂಟ ಕಟ್ಟಿದರು. ತುಳುಪರ್ಬ ದ ಮೂಲಕ ಕೊಲ್ಲಿನಾಡಿನಲ್ಲಿ ನೆಲೆಸಿರುವ ತುಳುವರು ತುಳು ಕಲಾವೈಭವವನ್ನು ಎತ್ತಿ ಹಿಡಿಯುತ್ತ ಬಂದಿದ್ದಾರೆ.

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕನ್ನಡ ತುಳು ಭಾಷೆಯಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸಿದ್ದಾರೆ.

ಕರ್ನಾಟಕ ಸಂಘ ದುಬಾಯಿ – ಸ್ಥಾಪನಾ ಸದಸ್ಯರಾಗಿ, ಕಾರ್ಯದರ್ಶಿಯಾಗಿ ಸೇವೆ ಸಲ್ಲಿಕೆ
1990 ರಲ್ಲಿ ಯು.ಎ.ಇ. ತುಳುಕೂಟ ಸ್ಥಾಪಕರಲ್ಲಿ ಒರ್ವರು, ಸಂಚಾಲಕರಾಗಿ ಸೇವೆ ಸಲ್ಲಿಕೆ
2000 ದಲ್ಲಿ ಸಂಗಮ ಕಲಾವಿದರು ಸ್ಥಾಪಕರು.
2003 ಕರ್ನಾಟಕ ಸಂಘ ಶಾರ್ಜಾ ಸ್ಥಾಪಕ ಅಧ್ಯಕ್ಷರು.

ಸನ್ಮಾನ ಗೌರವ – ಬಿಲ್ಲವ ಬಳಗ ದುಬಾಯಿ, ಯು.ಎ.ಇ. ಬಂಟ್ಸ್, ಯು.ಎ.ಇ. ತುಳುಕೂಟ, ಕರ್ನಾಟಕ ಫ್ರೆಂಡ್ಸ್ ಜೆಬೆಲ್ ಆಲಿ, ಸಂಗಮ ಕಲಾವಿದರು ದುಬಾಯಿ ಸಂಘಟನೆಗಳು ಉಮೇಶ್ ನಂತೂರ್ ರಾವರನ್ನು ಸನ್ಮಾನಿಸಿ ಗೌರವಿಸಿದೆ.

ಯು.ಎ.ಇ.ಯಲ್ಲಿ ನಡೆಸಲ್ಪಟ್ಟ ಕನ್ನಡ ತುಳು ಕಾರ್ಯಕ್ರಮಗಳು – ಸ್ಥಳಿಯ ಕಲಾವಿದರನ್ನು ಒಗ್ಗೂಡಿಸಿಕೊಂಡು ಕನ್ನಡ ನಾಟಕ ಪ್ರದರ್ಶನ, ತುಳು ನಾಟಕ ಪ್ರದರ್ಶನ, ಯಕ್ಷಗಾನ, ಗಾಯನ ಸ್ಪರ್ಧೆ, ಸಾಹಿತ್ಯ ಕೂಟ, ಕಲಾ ಕಮ್ಮಟ, ವ್ಯಕ್ತಿವಿಕಸನ ಶಿಬಿರ ಇತ್ಯಾದಿ ಚಟುವಟಿಕೆಗಳ ಮೂಲಕ ಕೊಲ್ಲಿ ನಾಡಿನಲ್ಲಿ ತಮ್ಮ ಕಲಾ ಸೇವೆಯನ್ನು ಸಲ್ಲಿಸಿದ್ದಾರೆ.

Amar Athul Shyla Umesh

ದಿ. ಉಮೇಶ್ ನಂತೂರ್ ರವರ ಪತ್ನಿ ಶ್ರೀಮತಿ ಶೈಲ ಉಮೇಶ್ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಪುತ್ರ ಅಮರ್ ಉಮೇಶ್, ಅತುಲ್ ಉಮೇಶ್ ಪ್ರಸ್ತುತ ಯು.ಎ.ಇ.ಯಲ್ಲಿ ವೃತ್ತಿಯಲ್ಲಿದ್ದಾರೆ.

ತನ್ನ ಜೀವಿತದ ಅವಧಿಯಲ್ಲಿ ಮನೆಯಲ್ಲಿ ಮಲಯಾಳಂ ಭಾಷಿಗರಾಗಿದ್ದರೂ ತುಳುನಾಡಿನಲ್ಲಿ ಜನಿಸಿದ ಋಣವನ್ನು ತುಳು, ಕನ್ನಡ ಭಾಷೆಯ ರಕ್ಷಣೆಯನ್ನು, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡು 2004 ರಲ್ಲಿ ಹುಟ್ಟೂರಿನಲ್ಲಿ ಹೃದಯಘಾತದಿಂದ ಇಹ ಲೋಕವನು ತ್ಯಜಿಸಿದ ಉಮೇಶ್ ನಂತೂರ್ ಕೊಲ್ಲಿ ನಾಡನಲ್ಲಿ ಕನ್ನಡಿಗರ, ತುಳುವರು ಮರೆಯದ ವ್ಯಕ್ತಿತ್ವ ಪಡೆದಿದ್ದಾರೆ.

pushpanjali_091414-1

“ಪುಷ್ಪಾಂಜಲಿ”

ಕೊಲ್ಲಿನಾಡಿನ ಕನ್ನಡಿಗರು ತುಳುವರು ಸಮಾವೇಶ ಗೊಳ್ಳಲಿರುವ “ಪುಷ್ಪಾಂಜಲಿ” ಕಾರ್ಯಕ್ರಮದಲ್ಲಿ ತುಳುನಾಡಿನ ಪ್ರಸಿದ್ದ ನಾಟಕಕಾರ, ನಿರ್ದೇಶಕರು, ತುಳು ಚಲನಚಿತ್ರ ನಿರ್ಮಾಪಕರಾದ ಶ್ರೀ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಅವರ ನಿರ್ಮಾಣದ “ಮದಿಮೆ” ತುಳು ಚಲನ ಚಿತ್ರದ ಪ್ರೋಮೊ ಬಿಡುಗಡೆಯಾಗಲಿದೆ.

ದೇಶ ವಿದೇಶಗಳಲ್ಲಿ ಪ್ರಸಿದ್ದಿಯನ್ನು ಪಡೆದಿರುವ ಕರ್ನಾಟಕದ ಪ್ರಖ್ಯಾತ ಕಾರ್ಯಕ್ರಮ ನಿರೂಪಕ ಹಾಸ್ಯಕಲಾವಿದ ಶ್ರೀ ನವೀನ್ ಕೊಪ್ಪ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ.

ಸಂಗಮ ಕಲಾವಿದರ ಆಶ್ರಯದಲ್ಲಿ ನಡೆಯಲಿರುವ ವರ್ಣರಂಜಿತ ಕಾರ್ಯಕ್ರಮಕ್ಕೆ ಶ್ರೀ ನೋವೆಲ್ ಡಿ’ಅಲ್ಮೆಡಾ ಮಾಧ್ಯಮದ ಮೂಲಕ ಸ್ವಾಗತಿಸಿದ್ದಾರೆ.

ಗಣೇಶ್ ರೈ – ಯು.ಎ.ಇ.

ಕಾರ್ಯಕ್ರಮದ ಬಗ್ಗೆ ಹೆಚ್ಚಿನ ವಿವರಗಳಿಗೆ :

Amar Umesh 052-9697058
Daya Kirodian 050-6510480
Ganesh Rai 050-5273714
Jayant Shetty 050-6590986
Jeevan Kuckian 050-8052172
Krishna Raj Tantry 050-6599375
Noel D’Almeida 055-5878692
Shantharam Achar 050-6781972
Vittal Shetty 050-7981323

1 Comment

  1. Wishing the function a Grand Success.

    UMESHANNA was also the Founder President of Thiya Samaj, Dubai. It is very much essential to remember such a genuine personalities who worked hard along with others to strengthen Kannada and Tulu language and culture in UAE eventhough his mother tongue is Malayalam.

Write A Comment