ಗಲ್ಫ್

ದುಬಾಯಿಯಲ್ಲಿ ಕನ್ನಡ ಶಾಲೆ ಆರಂಭ ಕನ್ನಡ ಮಕ್ಕಳ ಸಂಭ್ರಮ

Pinterest LinkedIn Tumblr

dubai Kannada-Jan 17- 2015_010

ಕೊಲ್ಲಿನಾಡಿನಲ್ಲಿ ಕನ್ನಡ ಭಾಷೆಯನ್ನು ಕನ್ನಡಿಗರ ಮಕ್ಕಳೀಗೆ ಕಲಿಸುವ ಸಲುವಾಗಿ ದುಬಾಯಿಯಲ್ಲಿ ನೂತನ ಕನ್ನಡ ಶಾಲೆ ಕಾರ್ಯಾರಂಭಗೊಂಡಿದೆ.

ಸಸಿ ನೆಡುವುದರ ಮೂಲಕ ಕನ್ನಡ ಶಾಲೆ ಉದ್ಘಾಟನೆ

ಕೊಲ್ಲಿ ನಾಡು ಮರುಭೂಮಿಯಾಗಿದ್ದರೂ ಕಣ್ಣು ಹಾಯಿಸಿದಲ್ಲಿ ಪೂರ್ತಿಯಾಗಿ ಹಸಿರು ಮರ ಗಿಡಗಳು, ಹೂ ತೋಟ ಉಧ್ಯಾನವನಗಳಿಂದ ಕಂಗೊಳಿಸುತಿದೆ. ಸುಂದರ ಹಸಿರು ನಗರದ ಮದ್ಯದಲ್ಲಿರುವ ಕನ್ನಡಿಗರದ್ದೆ ಆಗಿರುವ ಜೆ.ಎಸ್.ಎಸ್. ಪ್ರವೈಟ್ ಸ್ಕೂಲ್ ನಲ್ಲಿ 9ನೇ ತಾರೀಕು ಶುಕ್ರವಾರ ಬೆಳಿಗ್ಗೆ 10.00 ಗಂಟೆಗೆ ಜೆ.ಎಸ್.ಎಸ್ ಪ್ರೈವೆಟ್ ಸ್ಕೂಲ್ ನ ಸಿ.ಇ.ಒ. ಶ್ರೀ ಶಿವಕುಮಾರ್ ರವರ ಸಮ್ಮುಖದಲ್ಲಿ ಚಿಲ್ಲಿವಿಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸತೀಶ್ ವೆಂಕಟರಮಣ ರವರು ಶಾಲಾ ಅವರಣದಲ್ಲಿ ಸಸಿ ನೆಟ್ಟು ನೀರು ಚಿಮುಕಿಸುವುದರ ಮೂಲಕ ನೂತನ ಕನ್ನಡ ಶಾಲೆಗೆ ಉದ್ಘಾಟನೆಗೊಂಡು ಕಾರ್ಯಾರಂಭ ಮಾಡಿತು.

dubai Kannada-Jan 17- 2015_034

dubai Kannada-Jan 17- 2015_001

dubai Kannada-Jan 17- 2015_002

dubai Kannada-Jan 17- 2015_003

dubai Kannada-Jan 17- 2015_004

dubai Kannada-Jan 17- 2015_005

dubai Kannada-Jan 17- 2015_006

dubai Kannada-Jan 17- 2015_007

dubai Kannada-Jan 17- 2015_008

dubai Kannada-Jan 17- 2015_009

ಕನ್ನಡ ಶಾಲೆಯಲ್ಲಿ ಕನ್ನಡ ಕಲಿಯಲು ಅತ್ಯಂತ ಉತ್ಸಾಹದಿಂದ ತಮ್ಮ ತಮ್ಮ ಪೋಷಕರೊಂದಿಗೆ ವಿವಿಧ ವಯೋಮಿತಿಯ ಮಕ್ಕಳು ಸಮಯಕ್ಕೆ ಸರಿಯಾಗಿ ಶಾಲಾ ಆವರಣದಲ್ಲಿ ಸೇರಿದ್ದರು.

ದುಬಾಯಿಯಲ್ಲಿ ಕನ್ನಡಪರ ಸಂಘಟನೆಗಳಲ್ಲಿ ಜವಾಬ್ಧಾರಿಯುತ ಸ್ಥಾನದಲ್ಲಿ ಸೇವೆ ಸಲ್ಲಿಸಿರುವ ಸಂಘಟನಾ ಚತುರರು ದುಬಾಯಿಯಲ್ಲಿ ಕನ್ನಡ ಶಾಲೆಯ ಸ್ಥಾಪನೆಯ ರುವಾರಿಗಳು. ಶ್ರೀಯುತರುಗಳಾದ ಶಶಿಧರ್ ನಾಗರಾಜಪ್ಪ, ಚಂದ್ರಶೇಖರ್, ಸಿದ್ದಲಿಂಗೇಶ್, ವೀರೆಂದ್ರ ಬಾಬು, ಸತೀಶ್ ಹೆಗ್ಡೆ, ಅರುಣ್, ಮಲ್ಲಿಕಾರ್ಜುನ ಇವರ ಹಲವು ದಿನಗಳ ಕನಸು ನನಸಾಗಿದೆ.

dubai Kannada-Jan 17- 2015_011

dubai Kannada-Jan 17- 2015_012

dubai Kannada-Jan 17- 2015_013

dubai Kannada-Jan 17- 2015_014

dubai Kannada-Jan 17- 2015_015

dubai Kannada-Jan 17- 2015_016

dubai Kannada-Jan 17- 2015_017

dubai Kannada-Jan 17- 2015_018

dubai Kannada-Jan 17- 2015_020

dubai Kannada-Jan 17- 2015_021

dubai Kannada-Jan 17- 2015_022

dubai Kannada-Jan 17- 2015_023

dubai Kannada-Jan 17- 2015_024

dubai Kannada-Jan 17- 2015_025

ಪ್ರಾರಂಭದ ಹಂತದಲ್ಲೆ ಸುಮಾರು ಐವತ್ತರಿಂದ ಅರುವತ್ತು ಮಕ್ಕಳು ಕನ್ನಡ ಶಾಲೆಗೆ ದಾಖಲಾಗಿರುವುದು. ಕನ್ನಡ ಶಾಲೆ ಯಶಸ್ಸಿನ ಹಾದಿಯಲ್ಲೆ ಮುನ್ನಡೆಯುವ ಸೂಚನೆ ಸಿಕ್ಕಿದಂತಾಗಿದೆ. ಬೆಳಿಗ್ಗೆ 10.30 ರಿಂದ 12.00 ಗಂಟೆಯವರೆಗೆ ತರಗತಿ ನಡೆಯಲಿದ್ದು ಅತಿ ಉತ್ಸಾಹದಿಂದ ಕನ್ನಡ ಪಾಠವನ್ನು ಮಕ್ಕಳಿಗೆ ಕಲಿಸಿಕೊಡುವ ಜವಬ್ಧಾರಿಯನ್ನು ಶ್ರೀಮತಿಯರಾದ ಪ್ರೇಮಲತಾ, ಶ್ವೇತಾ, ಶ್ರೀನಿಧಿ, ರೂಪಾ, ಕಾವ್ಯ, ಹೇಮಾ ಇವರುಗಳು ವಾರಕ್ಕೆ ಸಿಗುವ ಒಂದು ದಿನದ ರಜೆಯನ್ನು ಮಕ್ಕಳ ಕನ್ನಡ ಕಲಿಕೆಗಾಗಿ ಮೀಸಲಾಗಿಟ್ಟಿದ್ದಾರೆ.

ಕನ್ನಡ ಶಾಲೆಗೆ ಭೇಟಿ ನೀಡಿದ್ದ ಶಾರ್ಜಾ ಕರ್ನಾಟಕ ಸಂಘದ ಪೂರ್ವ ಅಧ್ಯಕ್ಷರಾಗಿದ್ದ ಶ್ರೀ ಗಣೇಶ್ ರೈ ಯವರು ಕನ್ನಡ ತರಗತಿಯಲ್ಲಿ ಕನ್ನಡ ಪಾಠವನ್ನು ಕಲಿಯುತಿರುವ ಮಕ್ಕಳ ಉತ್ಸಾಹವನ್ನು ಕಂಡು ಸಂತಸದಿಂದ ಶುಭವನ್ನು ಹಾರೈಸಿದರು. ಇದೇ ಸಂದರ್ಭದಲ್ಲಿ ಮಕ್ಕಳ ಪೊಷಕರಿಗೆ ಅಭಿನಂದನೆಗಳನ್ನು ಸಲ್ಲಿಸಿ ಮುಂದಿನ ಸಾಂಸ್ಕೃತಿಕ ರಾಯಭಾರಿಗಳಾಗಿ ರೂಪುಗೊಳ್ಳಬೇಕಾಗಿರುವ ಮಕ್ಕಳಿಗೆ ಮಾತೃಭಾಷೆಯನ್ನು ಕಲಿಸುವಲ್ಲಿ ಉತ್ಸಾಹ ತೋರಿಸಿದಕ್ಕೆ ತಮ್ಮ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. ಹಲವು ಪೋಷಕರು ತಮ್ಮ ತಮ್ಮ ಸಲಹೆ ಸೂಚನೆಗಳನ್ನು ವಿನಿಮಯ ಮಾಡಿಕೊಂಡರು.

dubai Kannada-Jan 17- 2015_026

dubai Kannada-Jan 17- 2015_027

dubai Kannada-Jan 17- 2015_028

dubai Kannada-Jan 17- 2015_029

dubai Kannada-Jan 17- 2015_030

dubai Kannada-Jan 17- 2015_031

dubai Kannada-Jan 17- 2015_032

dubai Kannada-Jan 17- 2015_033

dubai Kannada-Jan 17- 2015_035

dubai Kannada-Jan 17- 2015_036

dubai Kannada-Jan 17- 2015_037

ಮಕ್ಕಳಿಗೆ “ಕನ್ನಡ ಲಿಪಿ ಪುಸ್ತಕ” ವನ್ನು ಶ್ರೀ ಶಿವಕುಮಾರ್ ರವರು ನೀಡಿ ಶುಭವನ್ನು ಹಾರೈಸಿದರು.

ಕೊನೆಯಲ್ಲಿ ಕನ್ನಡ ಶಾಲೆಯ ರುವಾರಿಗಳಲ್ಲಿ ಒರ್ವರಾದ ಶ್ರೀ ಶಶಿಧರ್ ರವರು ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಸಲ್ಲಿಸಿ ಸರ್ವರಿಗೂ ಎಳ್ಳು ಬೆಲ್ಲವನ್ನು ಹಂಚಿದರು.

ಹೆಚ್ಚಿನ ವಿವರಗಳಿಗಾಗಿ :
ಶ್ರೀ ಶಶಿಧರ್ ನಾಗರಾಜಪ್ಪ : 050-6251366
ಶ್ರೀಮತ್ ವನಿತಾ ಚಂದ್ರಶೇಖರ್ : 050-8531045

3 Comments

  1. ravi shankara lohit

    thumba olle prayathna.kannadada kampu yellellu haradali. ee shathamanadalli kannadambege sallisuthiruva apporva poojege kannadigarellara paravagi hruthpurvaka vandanegalu. sirigannadam gelge… sirigannadam baalge….

    s r s lohit hassan

  2. It’s very nice and good news to have a Kannada shale in Dubai, I wish all the best for this school as well as the people who involved in and out to start it….

Write A Comment