ಗಲ್ಫ್

ದುಬೈನಲ್ಲಿ ಹೈಟೆಕ್ ಭಿಕ್ಷುಕನ ಬಂಧನ ! ಪಂಚತಾರಾ ಹೋಟಲ್‌ನಲ್ಲಿ ವಾಸ; ರಾತ್ರಿಯ ವೇಳೆ ದುಬಾರಿ ಸೂಟ್‌ ಧರಿಸಿ, ಐಷಾರಾಮಿ ಜೀವನ ನಡೆಸುತ್ತಿದ್ದ…

Pinterest LinkedIn Tumblr

begger

ದುಬೈ, ಜು.4: ಭಿಕ್ಷಾಟನೆ ಇಂದು ಬಡತನ ಮತ್ತು ನಿರ್ಗತಿಕತೆಯ ಸಂಕೇತವಾಗಿ ಉಳಿದಿಲ್ಲ. ಅದೊಂದು ಲಾಭದಾಯಕ `ವೃತ್ತಿಯಾಗಿ` ಮಾರ್ಪಟ್ಟು ದಶಕಗಳೆ ಉರುಳಿವೆ. ಇದಕ್ಕೆ ಸಾಕ್ಷಿಯೆಂಬಂತೆ ಇತ್ತೀಚೆಗೆ ದುಬೈನ ಮಸೀದಿಯೊಂದರ ಬಳಿ ವ್ಯಾಪಾರಿ ವೀಸಾವನ್ನು ಹೊಂದಿದ್ದ ಭಿಕ್ಷುಕನೊಬ್ಬನ್ನು ದುಬೈ ಪೋಲೀಸರು ಬಂಧಿಸಿದ್ದಾರೆ.

ಈ ಭಿಕ್ಷುಕ ದುಬೈನ ಡೇರಾ ಎಂಬ ಪಂಚತಾರಾ ಹೋಟಲ್‌ನಲ್ಲಿ ಉಳಿದುಕೊಂಡಿದ್ದ ಎಂಬ ಮಾಹಿತಿಯನ್ನು ಪೋಲೀಸರು ತಿಳಿಸಿದ್ದಾರೆ. ಬಂಧನಕ್ಕೊಳಗಾದ ಭಿಕ್ಷುಕ ವಿಶಿಷ್ಟ ಡಿಸೈನ್ ಬಟ್ಟೆ ಹಾಗೂ ದುಬಾರಿ ಕೈಗಡಿಯಾರವನ್ನುಹೊಂದಿದ್ದ. ಈತ ಮಸೀದಿಯೊಂದರಲ್ಲಿ ಕೆಲ ದಿನಗಳಿಂದ ವಾಸವಾಗಿದ್ದ. ಮೂವತ್ತರ ಹರೆಯದ ಈ ಭಿಕ್ಷುಕ ಅತ್ಯಾಧುನಿಕ ವಿಸ್ಯಾಸದ ಸೂಟ್‌ಗಳನ್ನು ಹೊಂದಿದ್ದಾನೆ ಎಂದು ಪೋಲೀಸರು ತಿಳಿಸಿದ್ದಾರೆ.

ಕಳೆದ 7 ದಿನಗಳಿಂದ ಈ ಭಿಕ್ಷುಕ ರಾತ್ರಿಯ ವೇಳೆಯಲ್ಲಿ ದುಬಾರಿ ಸೂಟ್‌ಗಳನ್ನು ಧರಿಸಿ, ಐಷಾರಾಮಿ ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದ. ದಿನವೊಂದಕ್ಕೆಸುಮಾರು 10,000 ರೂ.ಭಿಕ್ಷಾಟನೆ ಮೂಲಕವೇ ಈತ ಗಳಿಸುತ್ತಿದ್ದ ಎಂದು ದುಬೈ ಪೋಲೀಸ್ ನಿರ್ದೇಶಕರಾದ ಕರ್ನಲ್ ಅಲಿ ಸಲೀಂ ಆಲ್ಷಮ್ಸಿ ತಿಳಿಸಿದ್ದಾರೆ.

ಕಳೆದ ರಂಜಾನ್‌ನಿಂದ ಸರಿ ಸುಮಾರು 70 ಭಿಕ್ಷುಕರನ್ನು ಬಂಧಿಸಲಾಗಿದೆ. ಅದರಲ್ಲಿ ನಾಲ್ಕು ಜನ ಏಷ್ಯನ್ ಮಹಿಳಾ ಭಿಕ್ಷುಕರನ್ನು ಬಂಧಿಸಲಾಗಿದೆ. ಅದರಲ್ಲಿ ಒಬ್ಬ ಮಹಿಳೆ ಒಂದು ಚಿಕ್ಕ ಮಗುವನ್ನು ಹೊಂದಿದ್ದಾಳೆ. ಆಶ್ಚರ್ಯವೆಂದರೆ ಅದು ಅವಳ ಮಗುವಲ್ಲ. ಭಿಕ್ಷಾಟನೆ ಮಾಡಲೇಂದೆ ತನ್ನ ಸ್ನೇಹಿತರೊಬ್ಬರಿಂದ ಈ ಮಗುವನ್ನು ಪಡೆದಿದ್ದಾಳೆ. ರಂಜಾನ್‌ನಿಂದ ಈಚೇಗೆ ಬಂಧಿಸಲ್ಪಟ್ಟ ಭಿಕ್ಷುಕರಲ್ಲಿ, ತನ್ನ ಮೂವರು ಮಕ್ಕಳೊಂದಿಗೆ ಅತ್ಯಾಧುನಿಕ ಹೋಟೆಲ್‌ವೊಂದರಲ್ಲಿ ಉಳಿದುಕೊಂಡಿದ್ದ ಶ್ರೀಮಂತ ಭಿಕ್ಷುಕ ಹೆಂಗಸನ್ನು ಕಳೆದ ವಾರ ಬಂಧಿಸಲಾಗಿತ್ತು. ಆಕೆಗೆ ಒಂದು ತಿಂಗಳು ಜೈಲುಶಿಕ್ಷೆ ಮತ್ತು ಗಡೀಪಾರು ಶಿಕ್ಷೆಯನ್ನು ನೀಡುವುದರ ಮೂಲಕ ದುಬೈ ಪೋಲೀಸ್ ಭಿಕ್ಷಾಟನೆ ಮೇಲೆ ಕಠಿಣ ಕಾನೂನುಗಳನ್ನು ಜಾರಿಗೆ ತಂದಿದ್ದಾರೆ.

ಇಂದಿಗೂ ಸಹ ಭಿಕ್ಷುಕರನ್ನು ಕಂಡರೆ ಮೂಗು ಮುರಿಯುವವರು ಇದ್ದಾರೆ. ಆದೇ ರೀತಿ ಕನಿಕರಪಡುವವರು ಇದ್ದಾರೆ. ಭಿಕ್ಷಾಟನೆ ಮಾಡುವವರು ಕೇವಲ ದುಬೈನಲ್ಲಿ ಮಾತ್ರವಲ್ಲ, ನಮ್ಮಲ್ಲಿಯೂ ಇದ್ದಾರೆ. ಆದರೆ ದುಬೈನ ಹೈಟೆಕ್ ಭಿಕ್ಷುಕರಂತೆ ಶ್ರೀಮಂತರಲ್ಲ ಎಂಬುದೇ ವ್ಯತ್ಯಾಸ.

Write A Comment