ರಾಷ್ಟ್ರೀಯ

ಓಡಿ ಹೋಗಿದ್ದ ಪ್ರೇಮಿಗಳಿಗೆ ಸಿಕ್ಕ ಶಿಕ್ಷೆಯೇನೂ ಗೊತ್ತಾ..?

Pinterest LinkedIn Tumblr

8499girl-boy-trends-759

ಮನೆ ಬಿಟ್ಟು ಹೋಗಿ ವಿವಾಹವಾಗಲು ಯೋಚಿಸುವ ಪ್ರೇಮಿಗಳು ಸಿಕ್ಕಿ ಬಿದ್ದ ವೇಳೆ ಉತ್ತರ ಭಾರತದ ಪಂಚಾಯಿತಿಗಳಲ್ಲಿ ನಾನಾ ರೀತಿಯ ಶಿಕ್ಷೆ ವಿಧಿಸಲಾಗುತ್ತದೆ. ಅದರಲ್ಲಿ ಸಾರ್ವಜನಿಕವಾಗಿ ಅವಮಾನಿಸುವುದೂ ಕೂಡಾ ಒಂದು.

ಈ ಹಿಂದೆ ಪರಾರಿಯಾಗಿದ್ದ ಅಪ್ರಾಪ್ತ ಪ್ರೇಮಿಗಳಿಗೆ ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದಲ್ಲದೇ ಅವರುಗಳನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಕೂರಿಸಿ ಅವಮಾನಿಸಿದ್ದ ಘಟನೆ ನಡೆದಿದ್ದ ಬೆನ್ನಲ್ಲೇ ಮತ್ತೊಂದು ಅಂತಹುದೇ ಪ್ರಕರಣ ಬೆಳಕಿಗೆ ಬಂದಿದೆ.

ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಪ್ರಾಥಮಿಕ ಹಂತದಲ್ಲೇ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದ ಯುವಕನೊಂದಿಗೆ ಮನೆ ಬಿಟ್ಟು ಹೋಗಿದ್ದ ತಪ್ಪಿಗೆ ಗ್ರಾಮದ ಮುಖಂಡರು ಒಬ್ಬರ ಕಿವಿ ಒಬ್ಬರು ಹಿಡಿದುಕೊಂಡು ಸಾರ್ವಜನಿಕವಾಗಿಯೆ ಉಠ್ ಬೈಸ್ ಮಾಡುವ ಶಿಕ್ಷೆ ವಿಧಿಸಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುವ ಮೂಲಕ ಪಂಚಾಯಿತಿಯವರ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

1 Comment

  1. I really don’t understand how humiliating some minor kids mistake could be considered as news. This just represents how low the media can think just to get attention. In this case an actual news would be something that informs what exactly happened to those kids education or their future, but obviously no one cares because it’s not entertaining. Sad!

Write A Comment