ರಾಷ್ಟ್ರೀಯ

ಮಗಳಿಗೆ ತಾಳಿ ಕಟ್ಟಿ ಅತ್ಯಾಚಾರವೆಸಗುತ್ತಿದ್ದ ಅಪ್ಪ !

Pinterest LinkedIn Tumblr

5897girl-crying-rapeಹೆತ್ತ ಮಗಳಿಗಾಗಿ ಜೀವನವನ್ನೇ ಪಣವಾಗಿಟ್ಟ ತಂದೆತಾಯಿಯರನ್ನು ನೋಡಿದ್ದೀರಿ. ಆದರೆ ಇಲ್ಲೊಬ್ಬ ಕಾಮುಕ ಅಪ್ಪ ತನ್ನ ಮಗಳಿಗೇ ತಾಳಿ ಕಟ್ಟಿ ತನ್ನ ಕಾಮ ತೃಷೆ ತೀರಿಸಿಕೊಳ್ಳುತ್ತಿದ್ದ ಹೇಯ ಘಟನೆ ಬೆಳಕಿಗೆ ಬಂದಿದೆ.

ಹೌದು. ಮಧುರೈನಲ್ಲಿ ಈ ಘಟನೆ ನಡೆದಿದ್ದು ಖಾಸಗಿ ವಾಹನವೊಂದರ ಚಾಲಕನಾಗಿದ್ದ ಬಿ. ಗಣೇಶ್ ಮೂರ್ತಿ ಎಂಬ ಕಾಮುಕನಿಗೆ ಮೂವರು ಮಕ್ಕಳಿದ್ದರು. ಅದರಲ್ಲಿ ದೊಡ್ಡವಳಾದ 13 ವರ್ಷದ ಬಾಲಕಿಯನ್ನು ಸತತ ಒಂದು ವರ್ಷದಿಂದ ಅತ್ಯಾಚಾರ ಮಾಡುತ್ತಿದ್ದಲ್ಲದೇ ಈ ಸಮಯದಲ್ಲಿ ಆಕೆಗೆ ತಾಳಿ ಕಟ್ಟಿ ತನ್ನ ಸಮಯಪ್ರಜ್ಞೆ ಮೆರೆಯುತ್ತಿದ್ದ.

ಅಷ್ಟೇ ಅಲ್ಲ, ಗಾಂಜಾದ ದಾಸನಾಗಿದ್ದ ಈತ ತನ್ನಿಬ್ಬರು ಮಕ್ಕಳ ಎದುರಿಗೇ ಈ ಕೃತ್ಯ ಎಸಗುತ್ತಿದ್ದ ಎನ್ನಲಾಗಿದ್ದು, ಒಂದೊಮ್ಮೆ ಯಾರಿಗಾದರೂ ಈ ವಿಷಯ ಬಾಯ್ಬಿಟ್ಟರೆ ಕೊಲ್ಲುವುದಾಗಿ ಬೆದರಿಕೆಯನ್ನೂ ಒಡ್ಡುತ್ತಿದ್ದ ಎನ್ನಲಾಗಿದೆ.

ತಂದೆಯ ಈ ಕಾಮುಕತನದ ಕುರಿತು ಬಾಲಕಿ ಸಂಬಂಧಿಕರಲ್ಲಿ ತಿಳಿಸಿದ್ದು ಅವರು ನೀಡಿದ ದೂರಿನ ಆಧಾರದಲ್ಲಿ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment