ರಾಷ್ಟ್ರೀಯ

ಗುಜರಾತ್‌ನಲ್ಲಿ ಇಂಟರ್ನೆಟ್ ನಿಷೇಧ: ವ್ಯಾಪಾರ-ವ್ಯವಹಾರ ಅಸ್ತವ್ಯಸ್ತ

Pinterest LinkedIn Tumblr

internet-usersಅಹ್ಮದಾಬಾದ್, ಸೆ.1: ಪಟೇಲ್ ಸಮು ದಾಯದ ಮೀಸಲಾತಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಅಹ್ಮದಾಬಾದ್‌ನಲ್ಲಿ ಕಳೆದೊಂದು ವಾರದಿಂದ ಮೊಬೈಲ್ ಆಧಾರಿತ ಇಂಟ ರ್ನೆಟ್ ಸೇವೆಗಳ ಮೇಲೆ ನಿಷೇಧ ಹೇರಲಾಗಿದ್ದು, ಜನತೆಯನ್ನು ಕೆರಳಿಸಿದೆ. ಇದರಿಂದಾಗಿ ವ್ಯಾಪಾರ-ವ್ಯವಹಾರಗಳು ಅಸ್ತವ್ಯಸ್ತಗೊಂಡಿವೆ.

ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧ ಅರ್ಥಹೀನವಾದುದು. ನಾಗರಿಕರ ವಾಕ್ ಸ್ವಾತಂತ್ರದ ಮೇಲಿನ ಹಲ್ಲೆ ಇದಾಗಿದೆ ಎಂದು ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರವಷ್ಟೇ ರಾಜ್ಯ ಸರಕಾರವು ರಾಜ್ಯಾದ್ಯಂತ ಮೊಬೈಲ್ ಇಂಟರ್ನೆಟ್ ಸೇವೆ ಗಳ ಮೇಲಿನ ನಿಷೇಧವನ್ನು ವಾಪಸ್ ತೆಗೆದು ಕೊಂಡಿದೆ. ಆದರೆ ರಾಜ್ಯದ ಎರಡು ಪ್ರಮುಖ ನಗರಗಳಾದ ಅಹ್ಮದಾಬಾದ್ ಮತ್ತು ಸೂರತ್‌ಗಳಲ್ಲಿ ಈಗಲೂ ನಿಷೇಧ ಜಾರಿಯಲ್ಲಿದೆ.

ಎರಡು ದಿನಗಳ ಹಿಂಸಾಚಾರಕ್ಕೆ ಸಂಬಂಧಿ ಸಿದ ವೀಡಿಯೊ ಕ್ಲಿಪ್‌ಗಳನ್ನು ಪ್ರಸಾರ ಮಾಡು ವ ಮೂಲಕ ಕೆಲವು ದುಷ್ಕರ್ಮಿಗಳು ಮತ್ತೆ ಸಮಸ್ಯೆ ಸೃಷ್ಟಿಸುವ ಸಾಧ್ಯತೆಗಳಿವೆ ಎಂದು ಹೇಳುವ ಪೊಲೀಸರು ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧವನ್ನು ಸಮರ್ಥಿಸಿಕೊಳ್ಳುತ್ತಾರೆ.

ಸೂರತ್ ಮತ್ತು ಅಹ್ಮದಾಬಾದ್‌ಗಳಲ್ಲಿ ಇನ್ನೂ ಎರಡು ದಿನಗಳ ಕಾಲ ಮೊಬೈಲ್ ಆಧಾರಿತ ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧ ಮುಂದುವರಿಯುತ್ತದೆ ಎಂದು ಸೋಮವಾರ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದರೆ, ಸರಕಾರದ ಈ ಕ್ರಮ ಜನಸಾಮಾನ್ಯರನ್ನು ಕೆರಳಿಸಿದೆ. ಜೊತೆಗೆ ಹತಾಶರನ್ನಾಗಿ ಮಾಡಿದೆ. ವ್ಯಾಪಾರಿಗಳು, ವಿದ್ಯಾರ್ಥಿಗಳು ಹಾಗೂ ಇತರ ಎಲ್ಲರಿಗೂ ತೊಂದರೆಯನ್ನುಂಟು ಮಾಡಿದೆ.

ಗುಜರಾತ್‌ನಲ್ಲಿ ಸಾಮಾನ್ಯ ಜನಜೀವನ ಸಹಜಸ್ಥಿತಿಗೆ ಬಂದಿದೆ ಎಂದು ಹೇಳಿಕೊಳ್ಳುವ ರಾಜ್ಯ ಸರಕಾರವು ಮೊಬೈಲ್ ಇಂಟರ್ನೆಟ್ ಸೇವೆಗಳಿಗೆ ತಡೆಯೊಡ್ಡಿದೆ. ಇಂತಹ ಶೋಚನೀಯ ಪರಿಸ್ಥಿತಿ ಎಲ್ಲೂ ಕಾಣಸಿಗದು ಎಂದು ಅಹ್ಮದಾಬಾದ್‌ನ ನವರಂಗಪುರದ ವ್ಯಾಪಾರಿಯೊಬ್ಬರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ವಾಟ್ಸ್‌ಆ್ಯಪ್, ಫೇಸ್‌ಬುಕ್, ಎಸ್‌ಎಂಎಸ್, ಎಂಎಂಎಸ್, ಟ್ವಿಟ್ಟರ್ ಯಾವುದೂ ಇಲ್ಲ. ಎಲ್ಲವನ್ನೂ ಪೊಲೀಸರು ಬಂದ್ ಮಾಡಿದ್ದಾರೆ. ಗುಜರಾತ್‌ನಂತಹ ರಾಜ್ಯದಲ್ಲಿ ಈ ಬಗೆಯ ಪರಿಸ್ಥಿತಿಯನ್ನು ನಾನು ಕನಸು-ಮನಸಿನಲ್ಲೂ ಎಣಿಸಿಕೊಳ್ಳಲಾರೆ ಎಂದು ಗುಜರಾತ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ನೇಹಾ ಶಾ ಹೇಳುತ್ತಾರೆ. ಒಂದು ವಾರದ ಇಂಟರ್ನೆಟ್ ನಿಷೇಧದಿಂದಾಗಿ ಆನ್‌ಲೈನ್ ವ್ಯವಹಾರಗಳು ಮತ್ತು ಬ್ಯಾಂಕಿಂಗ್ ಚಟುವಟಿಕೆಗಳಿಗೆ ಭಾರೀ ಹಾನಿ ಮಾಡಿದೆ. ಇಲ್ಲಿನ ಬಹುತೇಕ ವ್ಯವಹಾರಗಳು ಸ್ಮಾರ್ಟ್‌ಫೋನ್‌ಗಳು ಮತ್ತು ಮೊಬೈಲ್ ಆಧಾರಿತ ಸೌಲಭ್ಯಗಳನ್ನು ಅವಲಂಬಿಸಿದೆ. ಮೊಬೈಲ್‌ನಲ್ಲಿ ಇಂಟರ್ನೆಟ್ ಸೌಲಭ್ಯವಿಲ್ಲದೆ ಕಳೆದೊಂದು ವಾರದಿಂದ ಕೆಲಸ ಮಾಡುವುದು ಬಹಳ ಕಷ್ಟವಾಗಿದೆ. ನಮ್ಮ ಆನ್‌ಲೈನ್ ವ್ಯವಹಾರಗಳಿಗೆ ಭಾರೀ ಹೊಡೆತ ಬಿದ್ದಿದೆ ಎಂದು ಖಾಸಗಿ ಬ್ಯಾಂಕ್‌ವೊಂದರ ಅಧಿಕಾರಿ ಆಕ್ರೋಶದಿಂದ ಹೇಳುತ್ತಾರೆ.

Write A Comment