ರಾಷ್ಟ್ರೀಯ

ಮಲೆನಾಡು ಮಿತ್ರ ಒಕ್ಕೂಟದ ಅಧ್ಯಕ್ಷರಾಗಿ ಅನಿಲ್ ಹೊಸಕೊಪ್ಪ

Pinterest LinkedIn Tumblr

maleಬೆಂಗಳೂರು,ಅ.8- ಮಲೆನಾಡು ಮಿತ್ರ ಒಕ್ಕೂಟದ ನೂತನ ಅಧ್ಯಕ್ಷರಾಗಿ ಅನಿಲ್ ಹೊಸಕೊಪ್ಪ ಆಯ್ಕೆಯಾಗಿದ್ದಾರೆ. ಅ.6ರಂದು ನಡೆದ ಒಕ್ಕೂಟದ ಸಭೆಯಲ್ಲಿ ಅನಿಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಲೆನಾಡು ಮಿತ್ರವೃಂದದ ಕಾರ್ಯದರ್ಶಿ ಸಂದೇಶ್‌ಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಕ್ಕೂಟದ ಕಾರ್ಯದರ್ಶಿಯಾಗಿ ವನಮಾಲಯ್ಯ, ಉಮೇಶ್ ಇಳಿಮನೆ, ಉಪಾಧ್ಯಕ್ಷರಾಗಿ ಸಿದ್ದಪ್ಪ ಹುಕ್ಕಳ್ಳಿ, ಸಹ ಕಾರ್ಯದರ್ಶಿಯಾಗಿ ನಾಗೇಶ್ ಕೇಳೂರು, ಖಜಾಂಚಿಯಾಗಿ ರಾಜ್‌ಕುಮಾರ್ ಯಡದಹಳ್ಳಿ, ಸಂಘಟನಾ ಕಾರ್ಯದರ್ಶಿಯಾಗಿ ನವೀನ್ ಕಾನೋಳ್ಳಿ ಅವರು ಆಯ್ಕೆಯಾಗಿದ್ದಾರೆ ಎಂದು   ತಿಳಿಸಿದ್ದಾರೆ.

ಹಲವಾರು ಸಂಘಟನೆಗಳಲ್ಲಿ ಸಕ್ರಿಯರಾಗಿರುವ ಅನಿಲ್ ಅವರು ಮಲೆನಾಡಿನ ಸಮಸ್ಯೆಗಳ ಬಗ್ಗೆ ಹಾಗೂ ರೈತಪರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದು, ಶಿಕ್ಷಣ ಸ್ನೇಹಿ ಕಾರ್ಯಕ್ರಮದ ಮೂಲಕ ಕಳೆದ 11 ವರ್ಷಗಳಿಂದ ಪ್ರತಿ ವರ್ಷ 7ಸಾವಿರ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ನೀಡುತ್ತಾ ಬಂದಿದ್ದಾರೆ.

Write A Comment