ರಾಷ್ಟ್ರೀಯ

ಸಲಿಂಗ ಕಾಮವನ್ನು ಬೆಂಬಲಿಸಿದ ಅರುಣ್ ಜೇಟ್ಲಿ, ಚಿದಂಬರಂ

Pinterest LinkedIn Tumblr

rajನವದೆಹಲಿ: ಸಲಿಂಗಿ ಹಕ್ಕುಗಳಿಗೆ ಬಿಜೆಪಿ ಮತ್ತು ಕಾಂಗ್ರೆಸ್‌ನ ಇಬ್ಬರು ಉನ್ನತ ನಾಯಕರು ಬೆಂಬಲಿಸಿದ್ದು, ಭಾರತೀಯ ದಂಡ ಸಂಹಿತೆ 377ನೇ ಸೆಕ್ಷನ್  ಎತ್ತಿಹಿಡಿದ ನಿರ್ಧಾರವನ್ನು ಸುಪ್ರೀಂಕೋರ್ಟ್ ಪುನರ್ಪರಿಶೀಲಿಸಬೇಕು ಎಂದು ಹೇಳಿದ್ದಾರೆ. ಸಲಿಂಗಿ ಪ್ರೌಢವಯಸ್ಕರ ನಡುವೆ ಸಮ್ಮತಿಯ ಲೈಂಗಿಕ ಸಂಬಂಧವನ್ನು ಅಪರಾಧಮುಕ್ತಗೊಳಿಸಿದ ದೆಹಲಿ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಬದಲಿಸಬಾರದಿತ್ತು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ಅವರ ಪೂರ್ವಾಧಿಕಾರಿ ಪಿ.ಚಿದಂಬರಂ ತಿಳಿಸಿದರು.

ಜಗತ್ತಿನಾದ್ಯಂತ ಲಕ್ಷಾಂತರ ಜನರು ಪರ್ಯಾಯ ಲೈಂಗಿಕ ಆದ್ಯತೆಗಳನ್ನು ಹೊಂದಿರಬೇಕಾದರೆ ಸಲಿಂಗ ಕಾಮಿಗಳನ್ನು  ಜೈಲಿಗೆ ಕಳಿಸುವ ಪ್ರತಿಪಾದನೆ ಸರಿಯಲ್ಲ. ದೆಹಲಿ ಹೈಕೋರ್ಟ್ ಅಭಿಪ್ರಾಯ ಹೆಚ್ಚು ನ್ಯಾಯಸಮ್ಮತವಾಗಿದೆ ಎಂದು ಎಂದು ಜೇಟ್ಲಿ ಅಭಿಪ್ರಾಯಪಟ್ಟರು.

ಸಲಿಂಗ ಕಾಮಿಗಳಿಗೆ ಸಮ್ಮತಿಯ ಸೆಕ್ಸ್‌ ಅನ್ನು ಅಪರಾಧದಿಂದ ಮುಕ್ತಗೊಳಿಸುವುದಕ್ಕೆ  ಬೆಂಬಲಿಸಿದ್ದರಲ್ಲಿ ಜೇಟ್ಲಿ ಸರ್ಕಾರದ ಮೊದಲ ನಾಯಕರಾಗಿದ್ದಾರೆ.  ಚಿದಂಬರಂ ಕೂಡ ತಮ್ಮ ವೈಯಕ್ತಿಕ ನೆಲೆಯಲ್ಲಿ ಮಾತನಾಡಿ, ಸಲಿಂಗಕಾಮವನ್ನು ಅಪರಾಧದಿಂದ ತೆಗೆದ ಡೆಲ್ಲಿ ಹೈಕೋರ್ಟ್ ತೀರ್ಪು ಸಮರ್ಥನೀಯವಾಗಿದ್ದು, ಸುಪ್ರೀಂಕೋರ್ಟ್ ಅದಕ್ಕೆ ಸಮ್ಮತಿ ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.

Write A Comment