ಅಂತರಾಷ್ಟ್ರೀಯ

ಅಪ್ರಾಪ್ತ ವಿದ್ಯಾರ್ಥಿಗಳ ಜತೆ ಹಾಸಿಗೆ ಹಂಚಿಕೊಂಡ ಶಿಕ್ಷಕಿ !

Pinterest LinkedIn Tumblr

3487o-ASHLEY-BLUMENSHINE-facebook

ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ ಶಿಕ್ಷಕಿಯೊಬ್ಬಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಅಮೆರಿಕದ ಅಲಾಬಾಮಾದ ಹೈಸ್ಕೂಲ್‌ ನಲ್ಲಿ ಇಂಗ್ಲಿಷ್‌ ಭಾಷಾ ಶಿಕ್ಷಕಿಯಾಗಿರುವ 33 ವರ್ಷ ಪ್ರಾಯದ ಆಶ್ಲೇ ಹಾಲ್‌ ಎಂಬಾಕೆ ತನ್ನ ಇಬ್ಬರು ವಿದ್ಯಾರ್ಥಿಗಳನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಿದ್ದಳು ಎನ್ನಲಾಗಿದೆ. ಅಲ್ಲದೇ ಈ ಇಬ್ಬರೂ ಸಹ 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು ಇವರನ್ನು ಪುಸಲಾಯಿಸಿ ಹಲವು ದಿನಗಳಿಂದ ಈ ರೀತಿ ಬಳಸಿಕೊಂಡಿದ್ದಾರೆ ಎನ್ನಲಾಗಿದೆ.

ಪ್ರಕರಣದ ಸಂಬಂಧ ಈಗಾಗಲೇ ಶಿಕ್ಷಕಿಯನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಸಿ  ಏಳು ಲಕ್ಷ ಡಾಲರ್‌ ಭದ್ರತೆಯ ಮೇಲೆ ಜಾಮೀನು ನೀಡಲಾಗಿದೆ. ಅಲ್ಲದೇ ತನ್ನ ವಿದ್ಯಾರ್ಥಿಗಳ ಜತೆಗೇ ಹಾಸಿಗೆ ಹಂಚಿಕೊಂಡ ಈಕೆಯನ್ನು ಶಿಕ್ಷಕಿ ಹುದ್ದೆಯಿಂದ ಅಮಾನತು ಮಾಡಿ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.

1 Comment

  1. ಕನ್ನಡಿಗಾ ವಲ್ಡ್ ತುಂಬಾ ಚನ್ನಾಗಿದೆ ನಿಮಗೆ ಶುಭವಾಗಲಿ ಜರೂರ ಸುದ್ದಿಗಳು ನಿಮ್ಮಿಂದ ಬೇಗ ಬೇಗನೆ ಬಿತ್ತರವಾಗುತ್ತಿರಲಿ

Write A Comment