ಅಂತರಾಷ್ಟ್ರೀಯ

ವೈದ್ಯ ಲೋಕದ ಅಚ್ಚರಿ: ಬೇರ್ಪಟ್ಟ ಮಗುವಿನ ರುಂಡ ಜೋಡಿಸಿ ದಾಖಲೆ ಬರೆದ ವೈದ್ಯರು..!

Pinterest LinkedIn Tumblr

child-head-decapitated-reatಬ್ರಿಸ್ಬೇನ್: ಭೀಕರ ಕಾರು ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡು ರುಂಡ ಮುಂಡ ಬೇರ್ಪಟ್ಟ ಪುಟ್ಟ ಪೋರನೊಬ್ಬನನ್ನು ಸತತ ಆರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ವೈದ್ಯರು  ಬದುಕುಳಿಸಿದ ಘಟನೆ ನಡೆದಿದೆ.

ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿ ಈ ವೈದ್ಯಲೋಕದ ಅಚ್ಚರಿ ಸಂಭವಿಸಿದ್ದು, ಕಳೆದ ಸೆಪ್ಟೆಂಬರ್‌ನಲ್ಲಿ ಜಾಕ್ಸನ್ ಟೇಲರ್ ಎಂಬ ಒಂದು ವರ್ಷದ ಪುಟ್ಟ ಬಾಲಕ ತನ್ನ ತಾಯಿ ಹಾಗೂ ಒಂಬತ್ತು  ವರ್ಷದ ತನ್ನ ಸಹೋದರಿ ಶ್ಯಾನೆ ಜೊತೆ ಕಾರಿನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಕಾರು ಜಾಕ್ಸನ್ ಇದ್ದ ಕಾರಿಗೆ ಅಪ್ಪಳಿಸಿದೆ. ಅಪಘಾತದಲ್ಲಿ ಜಾಕ್ಸನ್ ನ ತಾಯಿ ಹಾಗೂ  ಸಹೋದರಿ ಶ್ಯಾನೆ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಜಾಕ್ಸನ್ ನ ಪರಿಸ್ಥಿತಿ ಮಾತ್ರ ಬೇರೆಯೇ ಆಗಿತ್ತು. ಅಪಘಾತದ ತೀವ್ರತೆಗೆ  ಜಾಕ್ಸನ್ ನ ರುಂಡ ಮತ್ತು ಮುಂಡ ಬೇರೆಯಾಗಿತ್ತು.

ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸರು ಮತ್ತು ರಕ್ಷಣಾ ತಂಡದವರು ಮಗು ಉಳಿಯುವುದಿಲ್ಲ ಎಂದೇ ಭಾವಿಸಿದ್ದರು. ಅದಾಗ್ಯೂ ಜಾಕ್ಸನ್ ನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ  ಮಗುವಿನ ಪರಿಸ್ಥಿತಿ ಕಂಡ ಹಲವು ನುರಿತ ವೈದ್ಯರು ಮಗುವಿನ ಜೀವಕ್ಕೆ ಯಾವುದೇ ರೀತಿಯ ಭರವಸೆ ನೀಡಲಿಲ್ಲ. ಆದರೆ ಓಈ ಪುಟ್ಟ ಮಗುವನ್ನು ಉಳಿಸಲೇಬೇಕು ಎಂದು ಡಾ. ಆಸ್ಕಿನ್  ಎಂಬುವವರು ಪಣತೊಟ್ಟರು. ಕೂಡಲೇ ತುರ್ತು ಶಸ್ತ್ರ ಚಿಕಿತ್ಸೆಗೆ ತಯಾರಿ ಮಾಡಿಕೊಂಡ ವೈದ್ಯರು ಸತತ ಆರು ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ ಬೇರ್ಪಟ್ಟ ಜಾಕ್ಸನ್ ರುಂಡವನ್ನು ಆತನ  ದೇಹದೊಂದಿಗೆ ಸೇರಿಸಿ ವೈದ್ಯಲೋಕದಲ್ಲಿ ಹೊಸ ಸಾಧನೆ ಮಾಡಿದರು.

ಇನ್ನು ತಮ್ಮ ಸಾಧನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಡಾ.ಆಸ್ಕಿನ್, ಇದು ತಮ್ಮ ಗೆಲುವಲ್ಲ. ಬದಲಿಗೆ ಅಷ್ಟು ಗಂಭೀರ ಪರಿಸ್ಥಿತಿಯಲ್ಲಿಯೂ ಧೈರ್ಯದಿಂದ ಇದ್ದ ಪುಟ್ಟ ಪೋರ  ಜಾಕ್ಸನ್ ನದ್ದು. “ಒಂದು ವರ್ಷದ ಪೋರ ಜಾಕ್ಸನ್‌‌ನ್ನು ನಿಜವಾಗಲೂ ಗಟ್ಟಿಹೃದಯ. ಇಷ್ಟೊಂದು ಗಂಭಿರ ಸ್ಥೀತಿಯಲ್ಲಿ ಬೇರೆ ಯಾರೇ ಆಗಿದ್ದರೂ ಬದುಕುವ ಆಸೆಯನ್ನೇ ತ್ಯಜಿಸುತ್ತಿದ್ದರು. ಆದರೆ  ಜಾಕ್ಸನ್ ನಿಜವಾಗಲೂ ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸಿ ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ದೇಹದಿಂದ ತನ್ನ ರುಂಡ ಬೇರ್ಪಟ್ಟರೂ ಬದುಕುಳಿದ ಜಾಕ್ಸನ್, ಇದೀಗ ತನ್ನ ಅಮ್ಮನ ತೋಳಿನಲ್ಲಿ ಆಟವಾಡುತ್ತಾ ಏನೂ ಆಗಿಯೇ ಇಲ್ಲ ಎಂಬಂತೆ ನಗು ಬೀರುತ್ತಿದ್ದಾನೆ.

Write A Comment