ಅಂತರಾಷ್ಟ್ರೀಯ

ಅಮೆರಿಕದೊಂದಿಗೆ ಯುದ್ಧಕ್ಕೆ ಸೈ ಎಂದ ಉತ್ತರ ಕೊರಿಯಾ

Pinterest LinkedIn Tumblr

Kim-Jong-unಉತ್ತರ ಕೊರಿಯಾ: ವಿಶ್ವದ ದೊಡ್ಡಣ್ಣ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಅಮೆರಿಕ ಜೊತೆ ಯುದ್ಧ ಮಾಡಲು ಸಿದ್ಧರಿದ್ದೇವೆ ಎಂದು ಹೇಳುವ ಮೂಲಕ ಉತ್ತರ ಕೊರಿಯಾ ಹೊಸ ಬಾಂಬ್ ವೊಂದನ್ನು ಶನಿವಾರ ಸಿಡಿಸಿದೆ.

ಉತ್ತರ ಕೊರಿಯಾದ ಕಾರ್ಮಿಕ ಪಕ್ಷ ಅಧಿಕಾರಕ್ಕೆ ಬಂದು 70 ವರ್ಷವದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಉತ್ತರ ಕೊರಿಯಾದ ಮುಖಂಡ ಕಿಮ್ ಜಾಂಗ್ ಈ ಬಗ್ಗೆ ಮಾತನಾಡಿದ್ದು, ಅಮೆರಿಕ ದೇಶ ಯುದ್ಧಕ್ಕೆ ಬಂದರೆ ಅದನ್ನು ನಾವು ಎದರಿಸಲು ನಾವು ಸಿದ್ಧರಿದ್ದೇವೆ ಎಂದು ಹೇಳುವ ಮೂಲಕ ದೊಡ್ಡಣ್ಣನಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

ಈ ಹಿಂದೆ ಅಮೆರಿದ ರಕ್ಷಣಾ ಅಧಿಕಾರಿಗಳು ಉತ್ತರ ಕೊರಿಯಾ ವಿರುದ್ಧ ಆರೋಪವನ್ನು ಮಾಡಿದ್ದರು. ಅಮೆರಿಕ ವಿರುದ್ಧ ಅಣ್ವಸ್ತ್ರ ದಾಳಿ ನಡೆಸಲು ಉತ್ತರ ಕೊರಿಯಾ ಸಿದ್ಧತೆ ನಡೆಸುತ್ತಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಹೇಳಿದ್ದರು. ಅಮೆರಿಕ ರಕ್ಷಣಾ ಅಧಿಕಾರಿಗಳು ನೀಡಿದ ಹೇಳಿಕೆಯ ಬೆನ್ನಲ್ಲೇ ಇದೀಗ ಉತ್ತರ ಕೊರಿಯಾ ಈ ರೀತಿಯ ಹೇಳಿಕೆ ನೀಡಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

Write A Comment