ಅಂತರಾಷ್ಟ್ರೀಯ

ನಿಮ್ಮ ಹೇರ್‌ಸ್ಟೈಲ್‌ ಸಾಫ್ಟ್ವೇರ್‌ ಕೈಯಲ್ಲಿ!

Pinterest LinkedIn Tumblr

hairಒಂದರ್ಧ ಗಂಟೆ ಕನ್ನಡಿ ಎದುರು ನಿಂತ್ಕೊಂಡ್ರೂ ಪ್ರಯೋಜನವಾಗಿಲ್ಲ! ತಲೆಗೂದಲು ಹೇಗೆ ಬಾಚಿದ್ರೂ ಊಹುಂ! ಇದು ಚೆನ್ನಾಗಿಲ್ಲ ಅದೂ ಚೆನ್ನಾಗಿಲ್ಲ ಎಂಬ ಭಾವನೆ ಇದೆಯೇ..? ಹಾಗಾದರೆ ಇಲ್ಲಿ ಕೇಳಿ ಇದೀಗ ವಿಜ್ಞಾನಿಗಳು ಹೊಸ ಸಾಫ್ಟವೇರ್‌ ಒಂದನ್ನು ಆವಿಷ್ಕರಿಸಿದ್ದು ನಿಮಗೆ ಯಾವ ರೀತಿಯ ಹೇರ್‌ಸ್ಟೈಲ್‌ ಬೆಸ್ಟ್‌ ಎಂಬುದನ್ನು ಹೇಳುವಂತೆ ಮಾಡಿದ್ದಾರೆ.

ಭಿನ್ನ ಭಿನ್ನ ಬಣ್ಣದ, ಬೇರೆ ಬೇರೆ ರೀತಿಯ ತಲೆಗೂದಲು ಇರುವವರಿಗೆ ಬೇಕಾದಂತೆ ಹೇಗೆ ಬಾಚಿಕೊಳ್ಳಬೇಕು? ಯಾವ ಸ್ಟೈಲ್‌ ಚೆನ್ನಾಗಿ ಕಾಣುತ್ತದೆ ಎಂಬುದನ್ನು ಈ ಸಾಫ್ಟವೇರ್‌ ಹೇಳುತ್ತದೆ. ಸಾಫ್ಟವೇರ್‌ ವ್ಯಕ್ತಿಯ ಫೋಟೋ ಆಧಾರಿತವಾಗಿ ಇಂಟರ್ನೆಟ್‌ನಲ್ಲಿ ಪ್ರತ್ಯೇಕ ಫೋಟೋಗಳನ್ನು ಹುಡುಕುತ್ತದೆ. ಅದನ್ನಿಟ್ಟುಕೊಂಡು ಮುಖಕ್ಕೆ ಹೊಂದುವ ರೀತಿ ಹೇರ್‌ಸ್ಟೈಲ್‌ ಚಿತ್ರವನ್ನು ಬಿಡಿಸಿ ಯಾವುದು ಉತ್ತಮ ಎಂದು ಹೇಳುತ್ತದೆ. ವಾಷಿಂಗ್ಟನ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ “ಡ್ರೀಮ್‌ಬಿಟ್‌’ ಹೆಸರಿನ ಈ ಸಾಫ್ಟವೇರ್‌ ಆವಿಷ್ಕರಿಸಿದ್ದಾರೆ.

ಮನುಷ್ಯನ ತಲೆಗೂದಲು, ತಲೆಯ ರೂಪುರೇಷೆ ಬಗ್ಗೆ ಮೂರು ಆಯಾಮದಲ್ಲಿ ಇದು ಅಧ್ಯಯನ ಮಾಡಿಯೇ ಹೇರ್‌ಸ್ಟೈಲ್‌ ಅನ್ನು ನಿರ್ಧರಿಸುತ್ತದೆ. ವ್ಯಕ್ತಿಯ ಹಾವಭಾವ ಬದಲಾದಾಗ ಹೇರ್‌ಸ್ಟೈಲ್‌ ಚೆನ್ನಾಗಿ ಕಾಣುತ್ತದೋ ಇಲ್ಲವೋ ಎಂಬುದನ್ನೂ ಇದು ಪರಿಶೀಲಿಸುವುದು ವಿಶೇಷ. ಹೇರ್‌ಸ್ಟೈಲ್‌ ಚೆನ್ನಾಗಿಲ್ಲ ಎಂದು ಕೊರಗುವವರಿಗೆ,ಅಥವಾ ತಲೆಗೂದಲು ಇಲ್ಲದೇ ಕೃತಕ ತಲೆಗೂದಲ ಮೊರೆ ಹೋದವರಿಗೆ ಈ ಸಾಫ್ಟವೇರ್‌ ವರದಾನವಾಗಿದೆ ಎಂದು ತಜ್ಞರು ಹೇಳಿದ್ದಾರೆ. ಸದ್ಯ ಸಾಫ್ಟವೇರ್‌ ಪರೀಕ್ಷಾ ಹಂತದಲ್ಲಿದ್ದು ಇನ್ನಷ್ಟೇ ಜಗತ್ತಿಗೆ ಕಾಲಿಡಬೇಕಿದೆ. ಭಾರತಕ್ಕೂ ಇದು ಬರುವ ದಿನಗಳು ದೂರವಿಲ್ಲ. ಒಂದು ವೇಳೆ ಬಂದರೆ ಸಾಫ್ಟವೇರ್‌ ಅಳವಡಿಸಿ ಹೇರ್‌ ಸ್ಟೈಲ್‌ ಬದಲಿಸುವ ದಿನ ಬಂದೇ ಬಂದೀತು!

– ಉದಯವಾಣಿ

Comments are closed.