ಕರಾವಳಿ

ಹರ್ಯಾಣ, ಮಹಾರಾಷ್ಟ್ರದ ಗೆಲುವು, ದೇಶದಲ್ಲಿ ಬಿಜೆಪಿಗಿರುವ ಜನಾಭಿಪ್ರಾಯಕ್ಕೆ ಸಾಕ್ಷಿ : ಪ್ರಹ್ಲಾದ್ ಜೋಶಿ

Pinterest LinkedIn Tumblr

BJP_Prahald_khushi_1

ಮಂಗಳೂರು, ಅ.20: ಬಿಜೆಪಿ ಹರ್ಯಾಣ ಹಾಗೂ ಮಹಾರಾಷ್ಟ್ರದಲ್ಲಿ ಅತ್ಯಂತ ಹೆಚ್ಚು ಸ್ಥಾನ ಗಳಿಸಿರುವುದು ದೇಶದಲ್ಲಿ ಬಿಜೆಪಿ ಪರವಾದ ಜನಾಭಿಪ್ರಾಯವಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ರಾಜ್ಯಾ ಧ್ಯಕ್ಷ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ಅವರು ಬಾನುವಾರ ನಗರದ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದರು.

ಚರ್ಚ್ ದಾಳಿಗೆ ಸಂಬಂಧಿಸಿದಂತೆ ನ್ಯಾ.ಸೋಮ ಶೇಖರ ಆಯೋಗದ ವರದಿಯನ್ನು ರಾಜ್ಯ ಸರಕಾರ ತಿರಸ್ಕರಿಸಿರುವುದು ಕಾಂಗ್ರೆಸ್‌ನ ದ್ವೇಷ ರಾಜಕಾರಣದ ತಂತ್ರದ ಭಾಗವಾಗಿದೆ ಎಂದು ಇದೇ ಸಂದರ್ಭದಲ್ಲಿ ಜೋಶಿ ಟೀಕಿಸಿದ್ದಾರೆ. ಸೋಮಶೇಖರ ಆಯೋಗವು ಚರ್ಚ್‌ದಾಳಿಯಲ್ಲಿ ಸಂಘ ಪರಿವಾರದ ಪಾತ್ರವಿಲ್ಲ ಎಂದು ವರದಿ ನೀಡಿದ್ದರೂ ರಾಜ್ಯ ಸರಕಾರವು ಬಿಜೆಪಿ ಹಾಗೂ ಸಂಘ ಪರಿವಾರದ ವಿರುದ್ಧ ದ್ವೇಷದ ರಾಜಕಾರಣದಲ್ಲಿ ತೊಡಗಿದೆ ಎಂದು ಪ್ರಹ್ಲಾದ ಜೋಶಿ ಟೀಕಿಸಿದರು.

BJP_Prahald_khushi_2

ಕಾವೂರಿನ ಸಂಘಟನೆಯ ಕಾರ್ಯಕರ್ತನ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿರುವ ಜೋಶಿ, ಈ ಬಗ್ಗೆ ನಗರದ ಪೊಲೀಸ್ ಕಮಿಷನರ್ ತಕ್ಷಣ ಕ್ರಮ ಕೈಗೊಳ್ಳಬೇಕು ಸಂಬಂಧ ಪಟ್ಟ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿಯಿಂದ ಸಂಭ್ರಮಾಚರಣೆ:

ಮುಂಬೈ ಹಾಗೂ ಹರ್ಯಾಣದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿ ಹೆಚ್ಚಿನ ವಿಧಾನ ಸಭಾ ಕ್ಷೇತ್ರಗಳಲ್ಲಿ ಜಯಗಳಿಸಿ ರುವ ಬಗ್ಗೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪ್ರಹ್ಲಾದ್ ಜೋಶಿ, ಸಂಸದ ನಳಿನ್‌ಕುಮಾರ್ ಕಟೀಲ್, ಮಾಜಿ ಶಾಸಕ ಯೋಗೀಶ್ ಭಟ್ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು ಸಿಹಿ ಹಂಚಿ ಸಂಭ್ರಮಿಸಿದರು.

Write A Comment