ಕರಾವಳಿ

ಬಿಜೆಪಿ ಮಂ.ನ.ದ. ಮಹಿಳಾ ಮೋರ್ಚಾದಿಂದ ಭಗಿನಿ ನಿವೇದಿತಾ ಜಯಂತಿ

Pinterest LinkedIn Tumblr

bjp_bagini_saba_1

ಮಂಗಳೂರು,ಅ:29: ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ವತಿಯಿಂದ ಅ.೨೮ರಂದು ಅಪರಾಹ್ನ ಜಿಲ್ಲಾ ಬಿಜೆಪಿ ಕಚೇರಿಯ ಅಕ್ಷಯ ಸಭಾಂಗಣದಲ್ಲಿ ಭಗಿನಿ ನಿವೇದಿತಾ ಜಯಂತಿಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿಜೆಪಿ ಮಂ.ನ.ದ.ಮಂಡಲ ಅಧ್ಯಕ್ಷ ರವಿಶಂಕರ ಮಿಜಾರ್, ಡಾ| ಜ್ಯೋತಿ ಜಿ.ಕಾರ್ಣಿಕ್, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯೆ ಶ್ರೀಮತಿ ಪ್ರಭಾಮಾಲಿನಿ, ಬಿಜೆಪಿ ರಾಜ್ಯ ಪರಿಷತ್ ಸದಸ್ಯೆ ಶ್ರೀಮತಿ ಉಮಾವತಿ ಆರ್. ಸುವರ್ಣ, ಶ್ರೀಮತಿ ಅರುಣಾ ನಾಗರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ಕಾತ್ಯಾಯನಿ ರಾವ್ ಪ್ರಸ್ತಾವಣೆಯೊಂದಿಗೆ ಸರ್ವರನ್ನೂ ಸ್ವಾಗತಿಸಿದರು.

ಯುವ ವಕೀಲೆ ಕು| ಅಕ್ಷತಾ ಶೆಟ್ಟಿಯವರು ವಂದೇ ಮಾತರಂ ಗೀತೆಯೊಂದಿಗೆ ಪ್ರಾರಂಭಗೊಂಡ ಸೋದರಿ ನಿವೇದಿತಾ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉಪಾಧ್ಯಕ್ಷೆ ಶ್ರೀಮತಿ ರಂಜಿನಿ ಹಾಗೂ ಪ್ರ.ಕಾರ್ಯದರ್ಶಿ ಸಂಧ್ಯಾ ವೆಂಕಟೇಶ್ ಜಂಟಿಯಾಗಿ ನಿರೂಪಿಸಿದರು. ಹಿರಿಯ ಕಾರ್ಯಕರ್ತೆ ಶ್ರೀಮತಿ ಅರುಣಾ ನಾಗರಾಜ್, ಸೋದರಿ ನಿವೇದಿತಾರವರ ಜಯಂತಿ ಆಚರಣೆಯ ಪ್ರಸ್ತುತತೆಯ ಬಗ್ಗೆ ಮಾತನಾಡುತ್ತಾ, ಭಾರತೀಯ ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಸಾರಿದ ಸ್ವಾಮಿ ವಿವೇಕಾನಂದರ ಅದ್ವಿತೀಯ ಮಾತುಗಳಿಂದ ಪ್ರಭಾವಿತಳಾದ ಐರ್ಲೆಂಡ್‌ನ ಮಾರ್ಗರೆಟ್ ಎಲಿಜಬೆತ್ ನೋಬಲ್ ೧೮೯೫ರಲ್ಲಿ ಸ್ವಾಮಿ ವಿವೇಕಾನಂದರನ್ನು ಲಂಡನ್‌ನಲ್ಲಿ ಭೇಟಿಯಾಗಿ ಶಿಷ್ಯತ್ವ ಸ್ವೀಕರಿಸಿ, ೧೮೯೮ರಲ್ಲಿ ತವರನ್ನು ತೊರೆದು ಭಾರತಕ್ಕೆ ಬಂದು ಬ್ರಹ್ಮಚರ್ಯ ದೀಕ್ಷೆ ಸ್ವೀಕರಿಸಿ, ‘ಸೋದರಿ ನಿವೇದಿತಾ’ರಾದ ಬಗ್ಗೆ, ಅವರಿಂದ ಮಹಿಳೆಯರಿಗೆ ಶಿಕ್ಷಣದ ಅರಿವನ್ನು ಮೂಡಿಸಲು ಭಾರತದಾದ್ಯಂತ ಕೈಗೊಂಡ ಶಿಕ್ಷಣ ಅಭಿಯಾನ ಇತ್ಯಾದಿ ಸವಿವರಗಳನ್ನು ನೀಡುವ ಮೂಲಕ ಅವರ ಜನ್ಮದಿನ ಆಚರಣೆಯನ್ನು ಸ್ಮರಣೀಯಗೊಳಿಸಲಾಯಿತು. ಶ್ರೀಮತಿ ಪೂರ್ಣಿಮಾ ರಾವ್ ವಂದಿಸಿದರು.

1 Comment

  1. ನೀವ್ ಎಲ್ಲರ ಜಯಂತಿ ಆಚರಿಸಿ ಬೇರೆಯವರು ತಮ್ಮ ಜಯಂತಿ ಆಚರಿಸಿದರೆ ಪಬ್ ಅಟ್ಯಾಕ್ ಗಲಾಟೆ ಕೊಲೆ ದರೋಡೆ ಲೂಟಿ ….
    ಅದು ಕೂಡ ಗಾಂಧಿ ಜಯಂತಿ ಗಿಂತ ಗೋಡ್ಸೆ ಜಯಂತಿ ಮೇಲೂ ಎಂದು ಹೇಳುವ ನಿಮ್ಮಂತಹವರಿಂದ ಒಳ್ಳೆಯ ದೆನಾದರೂ ನಿರೀಕ್ಷಿಸ ಬಹುದಾ….

Write A Comment