ಕರಾವಳಿ

ಅ.9ರಂದು ದುಬೈಯಲ್ಲಿ ನಡೆಯಲಿರುವ ವರ್ಣರಂಜಿತ ‘ತುಳು ಪರ್ಬ’ಕ್ಕೆ ಭರದ ಸಿದ್ಧತೆ

Pinterest LinkedIn Tumblr

tulu parba111

ದುಬೈ, ಅ.6: ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಯುಎಇ ತುಳುಕೂಟ ದುಬೈ ಅ.9ರಂದು ಮಧ್ಯಾಹ್ನ 3 ಗಂಟೆಗೆ ಅಲ್ ನಾಸರ್ ಲೀಸರ್ ಲ್ಯಾಂಡ್ ಐಸ್‌ರಿಂಕ್‌ನಲ್ಲಿ ಅದ್ದೂರಿಯ ‘ತುಳು ಪರ್ಬ’ವನ್ನು ಆಯೋಜಿಸಿದೆ.

211

ದುಬೈಯಲ್ಲಿ ತುಳು ಭಾಷೆಯ ಪೋಷಣೆಯಲ್ಲಿ ತೊಡಗಿರುವ ತುಳಕೂಟ ಈ ಬಾರಿ ಅದ್ದೂರಿ ಕಾರ್ಯಕ್ರಮ ಆಯೋಜಿಸಿದ್ದು, ತುಳುನಾಡಿನ ಹಾಸ್ಯದಿಗ್ಗಜರು , ವಿಶ್ವವಿಖ್ಯಾತಿಯ ಜಾದೂ ಪ್ರದರ್ಶನ ಸೇರಿದಂತೆ ಹತ್ತಲವು ಬಗೆಯ ಮನೋರಂಜನಾ ಕಾರ್ಯಕ್ರಮವನ್ನು ಆಯೋಜಿಸಿದೆ.

devdas

ತುಳುರಂಗಭೂಮಿಯ ಹಾಸ್ಯ ದಿಗ್ಗಜರೆಂದೇ ಖ್ಯಾತರಾಗಿರುವ ದೇವದಾಸ್ ಕಾಪಿಕಾಡ್, ಭೋಜರಾಜ್ ವಾಮಂಜೂರು, ಅರವಿಂದ್ ಬೋಳಾರ್, ಸತೀಶ್ ಬಂದಲೆಯವರಿಂದ ಹಾಸ್ಯಮಯ ಪ್ರಹಸನ, ಹಾಸ್ಯ ಚಟಾಕಿ ಪ್ರದರ್ಶನಗೊಳ್ಳಲಿದೆ. ಜೊತೆಗೆ ವಿಶ್ವವಿಖ್ಯಾತಿಗಳಿಸಿರುವ ಕುದ್ರೋಳಿ ಗಣೇಶ್‌ರಿಂದ ರೋಮಂಚನಗೊಳಿಸುವ ವಿಸ್ಮಯ ಜಾದೂ ಪ್ರದರ್ಶನ ಕೂಡಾ ನಡೆಯಲಿದೆ.

kudroli ganesh

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೆಂದ್ರ ಹೆಗ್ಗಡೆಯವರು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿರುವುದು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತರಲಿದೆ. ಗೌರವ ಅತಿಥಿಗಳಾಗಿ ದುಬೈಯ ಖ್ಯಾತ ಉದ್ಯಮಿಗಳಾದ ಡಾ.ಬಿ. ಆರ್. ಶೆಟ್ಟಿ, ರೋನಾಲ್ಡ್ ಕೊಲಾಸೋ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ಜಾನಕಿ ಬ್ರಹ್ಮಾವರ ಪಾಲ್ಗೊಳ್ಳಲಿದ್ದಾರೆ.

tulu parba

ಪ್ರಶಾಂತ್ ದೇವಾಡಿಗ ತಂಡದವರ ಸ್ಯಾಕ್ಸೊಫೋನ್ ವಾದನ, ಜಸ್ಮಿತಾ ವಿವೇಕ್ ತಂಡದ ತುಳುನಾಡ ವೈಭವ ನೃತ್ಯ ರೂಪಕ ತುಳು ಪರ್ಬಕ್ಕೆ ಇನ್ನಷ್ಟು ಮೆರೆಗು ತರಲಿದೆ.

ದಯಾನಂದ್ ಕತ್ತಲ್ಸರ್‌ರವರು ನಿರೂಪಣೆ ಮಾಡಲಿದ್ದು, ವಿವಿಧ ಬಗೆಯ ಸ್ಪರ್ಧೆಗಳು ಕೂಡಾ ನಡೆಯಲಿದೆ.

ಕಾರ್ಯಕ್ರಮದ ಟಿಕೆಟ್‌ಗಳು ದುಬೈ ಕರಾಮದ ದಾಸ್ ಪ್ರಕಾಶ್ ರೆಸ್ಟೋರೆಂಟ್, ಕರಾಮ ಹಾಗೂ ಕಿಸೆಸ್‌ನಲ್ಲಿರುವ ವೀನಸ್ ರೆಸ್ಟೋರೆಂಟ್, ಕರಾಮದಲ್ಲಿರುವ ಕೆನರಾ ಹಾಗೂ ವಿನ್ನಿಸ್ ರೆಸ್ಟೋರೆಂಟ್, ಬರ್‌ದುಬೈ, ಶಾರ್ಜಾ, ಅಬುಧಾಬಿಯಲ್ಲಿರುವ ಅರಬ್ ಉಡುಪಿ ರೆಸ್ಟೋರೆಂಟ್, ಶೆಟ್ಟಿ ಲಂಚ್ ಹೋಮ್ ಕರಾಮ, ಸುಭೀಕ್ಷ ರೆಸ್ಟೋರೆಂಟ್ ಅಬುಧಾಬಿ ಹಾಗೂ ಅಲ್‌ನಾಸರ್ ಲೀಸರ್‌ಲ್ಯಾಂಡ್‌ನ ಬಾಕ್ಸ್ ಆಫೀಸ್‌ನಲ್ಲಿ ಲಭ್ಯವಿದೆ.

Write A Comment