ಅಂತರಾಷ್ಟ್ರೀಯ

ಭಾರತದಲ್ಲಿ 3 ರೆಕ್ಕೆಗಳಿರುವ ಫ್ಯಾನ್‍ಗಳನ್ನೇ ಹೆಚ್ಚು ಬಳಸ್ತಾರೆ ಯಾಕೆ ಗೊತ್ತಾ?

Pinterest LinkedIn Tumblr

Fan

ಯಾವುದೇ ಘಟನೆ ಆದ್ರೂ ನಾವು ಎರಡು ರೀತಿ ಯೋಚನೆ ಮಾಡ್ತೀವಿ. ಕೆಲವೊಂದು ಬಾರಿ ಯಾವುದೇ ಕಾರಣವಿಲ್ಲದೇ ಇರಬಹುದು ಅಂದುಕೊಳ್ತೀವಿ. ಇನ್ನೊಂದು ಕಾರಣವಿದ್ದರೂ ನಾವು ಅದರ ಬಗ್ಗೆ ಯೋಚನೆ ಮಾಡದೇ ಇರ್ತೀವಿ. ಇದೇ ರೀತಿ ಹಲವಾರು ವಿಚಾರಗಳು ನಮ್ಮ ಜೀವನಶೈಲಿಯಲ್ಲಿ ಬಂದು ಹೋಗುತ್ತವೆ. ಅದರಲ್ಲಿ ಒಂದು ಭಾರತದಲ್ಲಿ 3 ಬ್ಲೇಡ್‍ಗಳಿರುವ ಫ್ಯಾನ್‍ಗಳೇ ಬಳಕೆಯಲ್ಲಿರುವುದು.

ಹೌದು ಈ ವಿಚಾರದ ಬಗ್ಗೆ ಯಾರು ಹೆಚ್ಚು ತಲೆ ಕಡಿಸಿಕೊಂಡಿರುವುದಿಲ್ಲ ಬಿಡಿ. ಆದರೆ ಇದರ ಹಿಂದೆ ಒಂದು ಕಾರಣವಿದೆ. ಅಮೆರಿಕದಲ್ಲಿ 4 ರೆಕ್ಕೆಗಳಿರುವ ಫ್ಯಾನ್ ಬಳಕೆಯಾಗುತ್ತದೆ. ಇದನ್ನು ಹೋಲಿಕೆ ಮಾಡಿದರೆ ಭಾರತದಲ್ಲಿ 3 ಬ್ಲೇಡ್‍ಗಳಿರುವ ಫ್ಯಾನ್‍ಗಳ ಬಳಕೆಯೇ ಹೆಚ್ಚು.

ಹಿಂದಿರುವ ಕಾರಣವೇನು?: ಸಾಮಾನ್ಯವಾಗಿ 4 ಬ್ಲೇಡ್‍ಗಳಿರುವ ಫ್ಯಾನ್‍ಗಳನ್ನು ಶೀತ ಪ್ರದೇಶದಲ್ಲಿ ಬಳಸುತ್ತಾರೆ. ಈ ರೀತಿಯ ಫ್ಯಾನ್‍ಗಳಿಂದ ಕಡಿಮೆ ಗಾಳಿ ಬೀಸುತ್ತದೆ. ಹೀಗಾಗಿ ಅಮೆರಿಕದಂತಹ ಪ್ರದೇಶಗಳಲ್ಲಿ 4 ಬ್ಲೇಡ್‍ಗಳಿರುವ ಫ್ಯಾನ್‍ಗಳೇ ಹೆಚ್ಚು ಬಳಸುತ್ತಾರೆ.

ಇತ್ತ ಭಾರತದಲ್ಲಿ ಹೆಚ್ಚು ಬಿಸಿಲು ಇರುವುದರಿಂದ 3 ಬ್ಲೇಡ್‍ಗಳ ಫ್ಯಾನ್ ಬಳಕೆ ಹೆಚ್ಚು. ಈ ರೀತಿಯ ಫ್ಯಾನ್‍ಗಳಲ್ಲಿ ಹೆಚ್ಚು ಗಾಳಿ ಬೀಸುತ್ತದೆ. ಹೀಗಾಗಿಯೇ ನಮ್ಮಲ್ಲಿ ಹೆಚ್ಚು ಬಳಕೆಯಲ್ಲಿದೆ. ಆದರೆ ಈ ವಿಷಯ ಎಷ್ಟೋ ಜನರಿಗೆ ಗೊತ್ತೇ ಇಲ್ಲ. ಎಲ್ಲರೂ ಮನೆಯ ಒಳಾಂಗಣ ಸೌಂದರ್ಯಕ್ಕೆ ತಕ್ಕಂತೆ ಫ್ಯಾನ್ ಬಳಸುತ್ತಾರೆ ಎಂದು ಕೊಂಡಿರುತ್ತಾರೆ.

Write A Comment