ಕರಾವಳಿ

ಮಂಗಳೂರು ವಿವಿ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ಎಮ್‌ಎಲ್‌ಸಿ ಐವನ್ ಡಿಸೋಜಾ ನೇಮಕ

Pinterest LinkedIn Tumblr

MLC_press_meet_1

ಮಂಗಳೂರು,ಮೇ.28: ಮಂಗಳೂರು ವಿಶ್ವವಿದ್ಯಾನಿಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರನ್ನಾಗಿ ವಿಧಾನ ಪರಿಷತ್‌ನ ಸದಸ್ಯ  ಐವನ್ ಡಿಸೋಜಾರವರನ್ನು ಮಾನ್ಯ ಸಭಾಪತಿಯವರು ನಾಮನಿರ್ದೇಶನ ಮಾಡಿ ನೇಮಕ ಮಾಡಿ ಆದೇಶ ನೀಡಿರುತ್ತಾರೆ.

ವಿಧಾನ ಪರಿಷತ್‌ನ ಸದಸ್ಯ ಶ್ರೀ ಐವನ್ ಡಿಸೋಜಾರವರು ಈ ಹಿಂದೆ ಮಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್, ಸಿಂಡಿಕೇಟ್, ಮತ್ತು ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದು, ಶ್ರೀಯುತರ ನೇಮಕಾತಿಯು ಮುಂದಿನ ಆದೇಶದವರೆಗೆ ಆಗಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Comments are closed.