ಕರಾವಳಿ

ರಂಝಾನ್ ಮಾಸಕ್ಕೆ ಅಗೌರವವಾಗುವ ಚಟುವಟಿಕೆಯ ಮೂಲಕ ಅಲ್ಲಾಹನ ಶಾಪಕ್ಕೆ ಗುರಿಯಾಗ ಬೇಡಿ

Pinterest LinkedIn Tumblr

bayar_sawalath_pic_1

ಬಾಯರ್,ಜೂನ್.29: ಪರಿಶುದ್ಧ ರಂಝಾನ್ ಮಾಸಕ್ಕೆ ಅಗೌರವವಾಗುವ ಚಟುವಟಿಕೆಯಲ್ಲಿ ತೊಡಗಿರುವರಿಗೆ ಅಲ್ಲಾಹನ ಡೊಡ್ಡ ಶಾಪ ವಿದೆ ಎಂದು ಮುಜಮ್ಮ‌ಉ ಸ್ಸಖಾಫತಿ ಸುನ್ನಿಯ್ಯಾದ ಅದ್ಯಕ್ಷ ಅಬ್ದುರ್ರಹ್ಮಾನ್ ಇಂಬಿಚ್ಚಿ ಕೋಯ ತಂಙಳ್ ಹೇಳಿದರು.

ಅವರು ಸೋಮವಾರ ಬಾಯಾರ್ ಮುಜಮ್ಮ‌ಉ ಸ್ಸಖಾಫತಿ ಸುನ್ನಿಯ್ಯಾದಲ್ಲಿ ನಡೆದ ಪ್ರಾರ್ಥನಾ ಸಮ್ಮೇಳನದ ನೇತೃತ್ವವಹಿಸಿ ಮಾತನಾಡಿದರು.
ಮುಸ್ಲಿಂ ಮಹಿಳೆಯರು ರಂಝಾನ್, ಈದುಲ್ ಫ್ರಿತರ್ ಹೆಸರಿನಲ್ಲಿ ಬಜಾರ್ ಪೇಟೆಗಳಲ್ಲಿ ಖರೀದಿಗೆ ತೆರಲಿ ಇಸ್ಲಾಂ ಧರ್ಮದ ಸಿದ್ದಾಂತಗಳಿಗೆ ವಿರುದ್ದವಾಗಿ ನಡೆದು ಇಸ್ಲಾಂ ಧರ್ಮ ನಾಶವಾದಲ್ಲಿ ಮುಸ್ಲಿಂ ಮಹಿಳೆಯರೇ ಕಾರಣ. ಮುಸ್ಲಿಂ ಮಹಿಳೆಯರು ಇಸ್ಲಾಂ ಧರ್ಮದ ಸಿದ್ದಾಂತಗಳಿಗೆ ಬದ್ದವಾಗಿ ಬಾಳಬೇಕೆಂದು ಕರೆ ನೀಡಿದರು.

bayar_sawalath_pic_2 bayar_sawalath_pic_3 bayar_sawalath_pic_4 bayar_sawalath_pic_5 bayar_sawalath_pic_6 bayar_sawalath_pic_7 bayar_sawalath_pic_8

ಮಹ್‌ಸೀನ್ ತಂಙಳ್ ಕಲ್ಲೇರಿ ಪ್ರಾರ್ಥನಾ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮತನಾಡಿದರು.ಅಲ್-ಮದೀನಾ ಮಂಜನಾಡಿಯ ಶಿಲ್ಪಿ ಅಬ್ಬಾಸ್ ಮುಸ್ಲಿಯರ್ ಉದ್ಘಾಟಿಸಿದರು.
ಎಸ್‌ವೈ‌ಎಸ್ ಮುಖಂಡ ಅಬ್ದುಲ್ ಖಾದರ್ ಮದನಿ ಪಲ್ಲಂಗೋಡು, ಎಸ್ಸೆಸ್ಸೆಫ್ ರಾಜ್ಯ ಮುಖಂಡ ಕೆ.ಎಂ ಅಬೂಬಕ್ಕರ್ ಸಿದ್ದೀಕ್, ಸುನ್ನೀ ಫೈಝಿ ಉಸ್ತಾದ್, ಅಬ್ದುಲ್ ಅತೀಫ್ ಬನಾನ, ಸಿ.ಎಲ್ ಹಮೀದ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.

ಸಂಸ್ಥೆಯ ಮಾನ್ಯಜೇರ್ ಸಿದ್ದೀಕ್ ಸಖಾಫಿ ಬಾಯಾರ್ ಸ್ವಾಗತಿಸಿದರು. ಪೋಯ್ಯತ್ತಬೈಲ್ ಖತೀಬ್ ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರು ವಂದಿಸಿದರು.

Comments are closed.