ಉಡುಪಿ: ಕೊಲೆಯಾದ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಶವ ಉಡುಪಿಯ ಅತ್ರಾಡಿಯ ಒಂತಿಬೆಟ್ಟು ಮದಗ ಎಂಬಲ್ಲಿ ಸಿಕ್ಕಿದೆ.
ಕೆಮ್ಮಣ್ಣು ನಿವಾಸಿ ಹುಸೇನ್ ಎಂಬವರ ಪುತ್ರ ಮೊಹ್ಮದ್ ತಸ್ಲೀಂ(36) ಎನ್ನುವವರ ಶವ ಪತ್ತೆಯಾಗಿದೆ. ಮೇಲ್ನೋಟಕ್ಕೆ ಬೇರೆಡೆಯಿಂದ ಕೊಲೆಗೈದು,ನಿರ್ಜನ ಪ್ರದೇಶದಲ್ಲಿ ಎಸೆದಿರಬಹುದೆಂದು ಅಂದಾಜಿಸಲಾಗಿದೆ.
ಕಳೆದ ಮೂರು ತಿಂಗಳ ಹಿಂದೆ ಉಡುಪಿ ಆಸುಪಾಸಿನ ಯುವತಿಯೋರ್ವಳೊಂದಿಗೆ ಬೆಂಗಳೂರಿನಲ್ಲಿ ತೆರಳಿದ ತಸ್ಲೀಮ್ ಆಕೆಯನ್ನು ಅಲ್ಲಿ ವಿವಾಹವಾಗಿದ್ದ. ಈ ವಿಚಾರದಲ್ಲಿ ಹಲವರೊಂದಿಗೆ ಮನಸ್ತಾಪವಾಗಿದ್ದ್ದು ಕೆಲ ಸಮಯದ ಬಳಿಕ ಊರಿಗೆ ಆಗಮಿಸಿ ಸಂತೆಕಟ್ಟೆಯ ಬಾಡಿಗೆ ಮನೆಯಲ್ಲಿ ವಾಸವಿದ್ದ. ಗುರುವಾರದಂದು ಅತ್ರಾಡಿ ಒಂತಿಬೆಟ್ಟು ಎಂಬಲ್ಲಿ ತಸ್ಲೀಂ ಅವರ ಕಪ್ಪು ಬಣ್ಣದ ಕಾರು ಪತ್ತೆಯಾಗಿತ್ತು. ಆ ಕಾರಿನಲ್ಲಿ ಹಾಕಿ ಸ್ಟಿಕ್, ಒಂದು ಡೈರಿ, ಕೊಡೆ ಇದ್ದು ಕೊಂಚ ದೂರದಲ್ಲಿ ಮೈಮೇಲೆ ಗಾಯವಾದ ಸ್ಥಿತಿಯಲಿ ಶವ ಪತ್ತೆಯಾಗಿತ್ತು.
ತಸ್ಲೀಮ್ ಕೆಲವು ಕ್ರೈಮ್ ವಿಚಾರದಲ್ಲಿ ಭಾಗಿಯಾಗಿದ್ದಲ್ಲದೇ ಎಲ್ಲರೊಂದಿಗೂ ನಿಷ್ಟುರ ಹೊಂದಿದ್ದ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಡಿವೈಎಸ್ಪಿ ಕುಮಾರಸ್ವಾಮಿ ಮೊದಲಾದವ್ರು ಭೇಟಿ ನೀಡಿದ್ದು ತನಿಖೆ ನಡೆಯುತ್ತಿದೆ.
Comments are closed.