ಕರಾವಳಿ

ಅಂದು ಯೋಗದಲ್ಲಿ ಭಾಗವಹಿಸುವಂತೆ ಮುಸ್ಲಿಂರಿಗೆ ಕರೆ.. ಇಂದು ಗೋವುಗಳನ್ನು ರಕ್ಷಿಸುವಂತೆ ಮುಸ್ಲಿಂರಲ್ಲಿ ಮನವಿ

Pinterest LinkedIn Tumblr

Ajmir_Darga

ಜೈಪುರ: ಗೋವುಗಳನ್ನು ರಕ್ಷಿಸಬೇಕು ಎಂದು ಅಜ್ಮೀರ್ ದರ್ಗಾದ ಮುಖ್ಯಸ್ಥ ಜೈನುಲ್ ಅಬೆದಿನ್ ಅಲಿ ಖಾನ್ ಮುಸ್ಲಿಂರಲ್ಲಿ ಮನವಿ ಮಾಡಿದ್ದಾರೆ.

ಹಿಂದೂಗಳು ಪೂಜಿಲ್ಪಡುವ ಗೋವುಗಳನ್ನು ರಕ್ಷಿಸಬೇಕು.ಗೋವು ಹಿಂದುಗಳಿಗೆ ಪವಿತ್ರವಾಗಿದೆ. ಆದರೆ ಗೋಮಾಂಸ ಭಕ್ಷಣೆ ಈಗ ಧರ್ಮದ ಹೊಸ ಅಸ್ತ್ರವಾಗಿ ಬಳಕೆಯಾಗುತ್ತಿದ್ದು, ಇದು ದೇಶದ ಘನತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದಿದ್ದಾರೆ.

ಗೋಮಾಂಸ ವಿಷಯವನ್ನೇ ಇಟ್ಟುಕೊಂಡು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹಿಂದು-ಮುಸ್ಲಿಂರ ನಡುವಿನ ಸೌಹಾರ್ದತೆಯನ್ನು ಕದಡುತ್ತಿದ್ದಾರೆ. ಹೀಗಾಗಿ ದೇಶದ ಹಿತಾಸಕ್ತಿಗಾಗಿ ಮುಸ್ಲಿಂರು ಗೋವುಗಳನ್ನು ರಕ್ಷಿಸುವ ಮೂಲಕ ಅದನ್ನು ಮಾದರಿಯಾಗಿ ತೋರಿಸಬೇಕು ಎಂದಿದ್ದಾರೆ.

ಇತಿಹಾಸದಲ್ಲಿ ಪ್ರವಾದಿ ಮೊಹಮ್ಮದರು ಕೂಡಾ ಗೋ ಮಾಂಸ ಭಕ್ಷಣೆ ವಿರುದ್ಧ ಉಪದೇಶ ನೀಡಿದ್ದರು. ಇನ್ನು ಸೂಫಿ ಸಂತರು ಮತ್ತು ಧಾರ್ಮಿಕ ಮುಖಂಡರು ಗೋಮಾಂಸ ತಿನ್ನುತ್ತಿದ್ದ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ಜೈನುಲ್ ಅಬೆದಿನ್ ಹೇಳಿದ್ದಾರೆ.

ಯೋಗದಿನಾಚರಣೆಯಲ್ಲಿ ಭಾಗವಹಿಸುವಂತೆ ಕರೆ:

ಜೈನುಲ್ ಅಬೆದಿನ್ ಅಲಿ ಖಾನ್ ಅವರು ಜೂನ್ 21ರಂದು ಅಂತಾರಾಷ್ಟ್ರೀಯ ಯೋಗದಿನಾಚರಣೆಯಲ್ಲಿ ಭಾಗವಹಿಸುವಂತೆ ಮುಸ್ಲಿಂರಿಗೆ ಕರೆ ನೀಡಿದ್ದರು. ಯೋಗವನ್ನು ಒಂದು ಧರ್ಮದೊಂದಿಗೆ ತಳುಕು ಹಾಕುವುದು ತಪ್ಪು, ಮುಸ್ಲಿಂರ ಮನಸ್ಸಲ್ಲಿ ಗೊಂದಲ ಸೃಷ್ಟಿಸುತ್ತಿರುವ ಮೂಲಭೂತವಾದಿಗಳನ್ನು ನಾವು ತಿರಸ್ಕರಿಸಬೇಕಾಗಿದೆ. ಯೋಗ ಸಂಪೂರ್ಣ ದೈಹಿಕ ವ್ಯಾಯಾಮ. ಇದು ಯಾವೂದೇ ಧಾರ್ಮಿಕ ಆಚರಣ ಅಥವಾ ನಮಾಝ್‌ನೊಂದಿಗೆ ಹೋಲಿಕೆಯಾಗಲ್ಲ ಎಂದು ಅಂದು ಅವರು ಹೇಳಿದ್ದರು.

Comments are closed.