ಕರಾವಳಿ

ಹಾಟ್ ಸೀನ್‌ ತಂದ ಪಜೀತಿ.. ಐಶ್ವರ್ಯಾ ರೈ ಬಚ್ಚನ್ ಕುಟುಂದಲ್ಲಿ ಬಿರುಕು..?

Pinterest LinkedIn Tumblr

Aishwarya_Rai_Hot

ಮುಂಬಾಯಿ : ನಾನಾ ಕಾರಣಗಳಿಗಾಗಿ ಕೆಲವೊಂದು ಕುಟುಂಬದಲ್ಲಿ ಕಲಹ ಮೂಡುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಈಗೀಗ ಅದು ತುಂಬಾ ಮಹತ್ವ ಪಡೆಯುವುದಿಲ್ಲ. ಆದರೆ ಪ್ರತಿಷ್ಠಿತ ಕುಟುಂಬವೊಂದರಲ್ಲಿ ಬಿರುಕು ಉಂಟಾದರೆ…

ಇಂಥ ಒಂದು ಸುದ್ಧಿ ಇದೀಗ ಎಲ್ಲಕಡೆ ಹಾಟ್ ಕೇಕ್‌ನಂತೆ ಹರಡಿದೆ. ಹಾಟ್ ಸೀನ್‌ಗಳ ದೃಷ್ಯದಲ್ಲಿ ನಟಿಸಿದ ಕಾರಣದಿಂದ ಪ್ರತಿಷ್ಠಿತ ಪರಿವಾರದ ಪತಿ-ಪತ್ನಿಯ ಮಧ್ಯೆ ಬಿರುಕು ಮೂಡಿದೆ ಎಂಬ ಸುದ್ದಿಯಿಂದ ಚಿತ್ರರಂಗದಲ್ಲೂ ಸಣ್ಣ ತಳಮಳ ಉಂಟಾಗಿದೆ.

ಐಶ್ವರ್ಯಾ ರೈ ಬಚ್ಚನ್ ಅವರು ನಟಿಸಿರುವ ಚಿತ್ರವೊಂದರಲ್ಲಿ ಕೆಲವು ಹಾಟ್ ಸೀನ್ ಗಳಲ್ಲಿ ಅಭಿನಯಿಸಿದ್ದಾರೆ ಎಂಬ ಸುದ್ಧಿಯಿಂದ ಇತ್ತೀಚೆಗೆ ಬಚ್ಚನ್ ಪರಿವಾರದಲ್ಲಿ ಸಣ್ಣ ಬಿರುಕು ಮೂಡಿದೆ ಎನ್ನಲಾಗಿದೆ.

ಐಶ್ವರ್ಯಾ ಅವರು, ಮನೆಯವರಿಗೆ ಅಸಮಾಧಾನ ಕೊಡುವ ಕೆಲಸವನ್ನು ಮಾಡಿದ್ದಾರೆ. ಐಶ್ವರ್ಯಾ ತಮ್ಮ ಮುಂಬರುವ ಚಿತ್ರ ‘ಹೇ ದಿಲ್ ಹೇ ಮುಶ್ಕಿಲ್’ ಚಿತ್ರದಲ್ಲಿ ರಣಬೀರ್ ಕಪೂರ್ ಅವರೊಂದಿಗೆ ಕೆಲ ಹಾಟ್ ಸೀನ್ ಗಳಲ್ಲಿ ಕಾಣಿಸಿಕೊಂಡಿದ್ದಾರಂತೆ. ಈ ಸುದ್ದಿ ಕಿವಿಗೆ ಬೀಳುತ್ತಿದ್ದಂತೆಯೇ ಬಚ್ಚನ್ ಪರಿವಾರ, ಐಶ್ವರ್ಯ ಅವರ ಮೇಲೆ ಕೋಪಗೊಂಡಿದೆ ಎಂಬ ಸುದ್ಧಿ ಹರಡಿದೆ.

ಐಶ್ವರ್ಯಾ ಅವರಿಗೆ, ಸಿನಿ ಪರದೆಯಲ್ಲಿ ಈ ರೀತಿ ಕಾಣಿಸಿಕೊಳ್ಳುವುದು ನಮಗೆ ಶೋಭೆ ತರುವುದಿಲ್ಲ ಎಂದು ತುಸು ಖಾರವಾಗಿಯೇ ನುಡಿದಿದೆಯಂತೆ ಬಚ್ಚನ್ ಪರಿವಾರ. ಇಷ್ಟಾದ ನಂತರ ಐಶ್ವರ್ಯಾ, ನಿರ್ದೇಶಕ ಕರಣ್ ಜೋಹರ್ ಬಳಿ ಆ ಹಾಟ್ ಸೀನ್ ತೆಗೆಯುವಂತೆ ಹೇಳಿದಾಗ ಮೊದಲು ಕರಣ್ ಜೋಹರ್ ಇದಕ್ಕೆ ಒಪ್ಪಲಿಲ್ಲವೆನ್ನಲಾಗಿದೆ. ಬಳಿಕ ಅಮಿತಾಭ್ ಬಚ್ಚನ್ ಅವರ ಮಾತಿನ ಮೇರೆಗೆ ಆ ಸೀನ್ ಗೆ ಕತ್ತರಿ ಹಾಕಲಾಗಿದೆಯಂತೆ. ಒಟ್ಟು ಈ ಅಂತೆಕಂತೆಗಳಿಂದ ಪ್ರತಿಷ್ಠಿತ ಕುಟುಂಬವೊಂದಕ್ಕೆ ನೋವಾಗಿರುವುದಂತು ಸುಳ್ಳಲ್ಲ.

Comments are closed.