ಕರಾವಳಿ

ಬ್ರೇಕಿಂಗ್ ನ್ಯೂಸ್… ಬಿಸಿ ನೀರು ಪತ್ತೆಯಾಗಿರುವುದು ಪೊಳಲಿ ದೇಗುಲದ ಬಾವಿಯಲ್ಲಿ ಅಲ್ಲ..

Pinterest LinkedIn Tumblr

Polali-Hot_water

__ ಸತೀಶ್ ಕಾಪಿಕಾಡ್

ಮಂಗಳೂರು :ಮಂಗಳೂರಿನ ಹೊರವಲಯದ “ಪೊಳಲಿ ದೇಗುಲದ ಬಾವಿಯಲ್ಲಿ ಬಿಸಿ ನೀರು” ಎಂಬ ಟೈಟಲ್‌ನೊಂದಿಗೆ ಕೆಲವು ಸುದ್ಧಿ ವಾಹಿನಿಯಲ್ಲಿ ಸುದ್ಧಿ ಪ್ರಸಾರವಾಗುತ್ತಿದ್ದು, ಬಿಸಿ ನೀರು ಕಂಡು ಬಂದಿರುವ ಈ ಬಾವಿ ಕ್ಷೇತ್ರಕ್ಕೆ ಸಂಬಂಧ ಪಟ್ಟದ್ದಲ್ಲ ಎಂದು ಕ್ಷೇತ್ರದ ಪ್ರಧಾನ ಅರ್ಚಕರಾದ ರಾಮ್ ಭಟ್ ಅವರು ಸೃಷ್ಟಣೆ ನೀಡಿದ್ದಾರೆ.

“ಪೊಳಲಿ ದೇಗುಲದಿಂದ ಅನತಿ ದೂರದಲ್ಲಿರುವ ( ದೇಗುಲದ ಹಿಂದಿನ ಮನೆ) ಶ್ರೀ ಕ್ಷೇತ್ರದ ಬ್ಯಾಂಡ್ ವಾದಕರಾಗಿದ್ದ ಮೋಹನ್ ದೇವಾಡಿಗ ಎಂಬವರ ಮನೆಯ ಬಾವಿಯಲ್ಲಿ ಬಿಸಿ ನೀರು ಕಂಡು ಬಂದಿದ್ದೇನೋ ನಿಜ, ಆದರೆ ಈ ಬಾವಿಗೂ ದೇಗುಲಕ್ಕೂ ಯಾವೂದೇ ಸಂಬಂಧವಿಲ್ಲ. ಹಾಗೂ ಈ ಬಾವಿಯ ನೀರನ್ನು ದೇವಾಳಯದ ನಿತ್ಯ ಕಾರ್ಯಗಳಿಗೆ ಬಳಸುತ್ತಿಲ್ಲ. ಶ್ರೀ ಕ್ಷೇತ್ರದ ಪ್ರಾಂಗಣದೊಳಗೆ ಕ್ಷೇತ್ರಕ್ಕೆ ಸಂಬಂಧ ಪಟ್ಟ ಬಾವಿ ಇದ್ದು. ದಿನನಿತ್ಯದ ಪೂಜಾ ಕಾರ್ಯಗಳಿಗೆ ಕ್ಷೇತ್ರದಲ್ಲಿರುವ ಈ ಬಾವಿಯ ನೀರನ್ನೇ ಬಳಕೆ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

Polali-Hot_water_2 Polali-Hot_water_3

Polali-Hot_water_4

ಅತಿಯಾದ ಗಂದಕದ ಪ್ರಭಾವದಿಂದ ಈ ರೀತಿ ನೀರು ಬಿಸಿಯಾಗುವುದು ಸಹಜ. ಆದರೆ ಈ ಘಟನೆಯನ್ನು ವಾಹಿನಿಯವರು ವೈಭವೀಕರಿಸಿ ತಪ್ಪು ಮಾಹಿತಿ ನೀಡುವ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಸ್ಥಳೀಯರು ದೂರಿದ್ದಾರೆ.

ದೈವದ ಕೆಲಸಕ್ಕೆ ನೀರು :

ನಾಗೇಶ್ ಎಂಬ ಸ್ಥಳೀಯ ವ್ಯಕ್ತಿಯೊಬ್ಬರು ತಮ್ಮ ಮನೆಯಲ್ಲಿ ದೈವವನ್ನು ಅರಾಧನೆ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಮೋಹನ್ ದೇವಾಡಿಗರ ಮನೆಯ ಬಾವಿಯಿಂದ ದಿನನಿತ್ಯ ಪೂಜೆಗಾಗಿ ನೀರು ಕೊಂಡೊಯ್ಯುವುದು ನಿತ್ಯದ ವಾಡಿಕೆ. ಇಂದು ಕೂಡ ಎಂದಿನಂತೆ ಈ ಬಾವಿಯಿಂದ ನೀರು ತೆಗೆದಾಗ ಅದು ಬಿಸಿಯಾಗಿರುವುದು ಕಂಡು ಬಂದಿದೆ. ಇದನ್ನು ಕೆಲವು ವಾಹಿನಿಯವರು ಪೊಳಲಿ ದೇಗುಲಕ್ಕೆ ಕೂಡ ಇಲ್ಲಿಂದಲೇ ನೀರುಕೊಂಡು ಹೋಗುವುದು. ಪೊಳಲಿ ದೇಗುಲದ ಬಾವಿಯಲ್ಲಿ ಬಿಸಿ ನೀರು ಕಂಡು ಬಂದಿದೆ ಎಂದು ಸುದ್ಧಿ ಪ್ರಕಟಿಸಿದ್ದಾರೆ. ಕೂಡಲೇ ಈ ಸುದ್ದಿ ಎಲ್ಲೆಡೆ ಹಬ್ಬಿದ್ದು, ಪ್ರಾಕೃತಿಕ ವಿಸ್ಮಯವನ್ನು ನೋಡಲು ಜನ ಸಾಗರದಂತೆ ಹರಿದು ಬಂದಿದ್ದಾರೆ.


 

ಕೆಲವು ವೆಬ್ ಸೈಟ್ ಗಳಲ್ಲಿ ಪ್ರಕಟವಾದ ವರದಿ :

ಮಂಗಳೂರು: ಬಾವಿಯಲ್ಲಿ ಉಪ್ಪು ನೀರು, ಸಹಿ ನೀರು ಸಿಗೋದನ್ನ ಕೇಳಿದ್ದೇವೆ.. ನೋಡಿದ್ದೇವೆ, ಅಷ್ಟೆ ಯಾಕೆ ಕುಡಿದು ರುಚಿಯನ್ನು ನೋಡಿರುತ್ತೇವೆ. ಆದರೆ ಮಂಗಳೂರಿನ ಹೊರವಲಯದ ಪೊಳಲಿ ದೇವಸ್ಥಾನದ ಸಮೀಪದ ಮನೆಯೊಂದರಲ್ಲಿರುವ ಬಾವಿ ವಿಸ್ಮಯಕ್ಕೆ ಕಾರಣವಾಗಿದೆ. ಈ ಬಾವಿಯಿಂದ ನೀರು ಸೇದಿದರೆ ಬಿಸಿ ನೀರು ಸಿಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ನಾಗೇಶ್ಎಂ ದಿನಂತೆ ಇವತ್ತು ಕೂಡ ನೀರು ಸೇದಲು ಬಾವಿ ಬಳಿ ತೆರಳಿದ್ದಾರೆ. ಬಾವಿಯಿಂದ ನೀರನ್ನು ಸೇದಿದ್ದಾರೆ. ಈ ವೇಳೆ ನೀರು ಬಿಸಿ ಇರುವುದನ್ನು ನೋಡಿದ ನಾಗೇಶ್ ಅಚ್ಚರಿಯಾಗಿದೆ. ಕೂಡಲೇ ಈ ವಿಷಯವನ್ನು ಮನೆಯವರಿಗೆ ತಿಳಿಸಿದ್ದಾರೆ.

ಮೊದ ಮೊದಲು ಮನೆಯವರು ಈ ವಿಷಯವನ್ನು ನಂಬಿರಲಿಲ್ಲ. ಬಳಿಕ ಸ್ವತಃ ಬಾವಿಯಿಂದ ನೀರು ಸೇದಿದಾಗ ಅವರಿಗೂ ಬಿಸಿ ನೀರಿನ ಅನುಭವವಾಗಿದೆ. ಕೂಡಲೇ ಈ ಸುದ್ದಿ ಎಲ್ಲೆಡೆ ಹಬ್ಬಿದ್ದು, ಪ್ರಾಕೃತಿಕ ವಿಸ್ಮಯವನ್ನು ನೋಡಲು ಜನ ಸಾಗರದಂತೆ ಹರಿದುಬರುತ್ತಿದ್ದಾರೆ.


ಮಂಗಳೂರು: ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಸಮೀಪವಿರುವ ಮನೆಯೊಂದರ ಬಾವಿಯ ಸಿಹಿ ನೀರು ಬಿಸಿ ನೀರಾಗಿ ಮಾರ್ಪಟ್ಟಿದೆ. ಹಾಗಾಗಿ ಇದನ್ನ ನೋಡುವ ಕುತೂಹಲದಿಂದ ಜನ ಬಾವಿಯತ್ತ ಮುಗಿಬೀಳುತ್ತಿದ್ದಾರೆ.

ಬ್ಯಾಂಡ್ ವಾದಕರಾಗಿದ್ದ ಮೋಹನ್ ದೇವಾಡಿಗ ಎಂಬವರ ಮನೆಯ ಬಾವಿಯಲ್ಲಿ ಇದ್ದಕ್ಕಿದ್ದಂತೆ ಬಿಸಿ ನೀರು ಉತ್ಪತ್ತಿಯಾಗಿದೆ. ಮೋಹನ್‌ರವರಿಗೆ ತಮ್ಮ ಮನೆಯ ಅಂಗಳದಲ್ಲಿ ವರ್ಷ ಪೂರ್ತಿ ಸಿಹಿ ನೀರು ದೊರೆಯುವ ಬಾವಿಯಲ್ಲಿ ಅಚ್ಚರಿ ಕಾದಿತ್ತು.

ಬಾವಿಯಲ್ಲಿನ ನೀರು ಯದ್ವಾತದ್ವಾ ಬಿಸಿಯಾಗಿದ್ದು, ಈ ಕುತೂಹಲದ ಸುದ್ದಿ ಪೊಳಲಿ ಗ್ರಾಮವಲ್ಲದೆ, ಪಕ್ಕದ ಗ್ರಾಮಗಳಾದ ತೇವುಗುಡ್ಡೆ, ಕರಿಯಂಗಳ, ಕೈಕಂಬ, ಕಾಜಿಲ, ಅಡ್ಡೂರು, ಬಡಕಬೈಲು ಎಂಬಲ್ಲಿಗೂ ತಲುಪಿ ಕುತೂಹಲಿಗರ ದಂಡೇ ಬಾವಿಯತ್ತ ಸಾಗಿತ್ತು. ತಾವೇ ನೀರು ಸೇದಿ ಮಾಹಿತಿ ದೃಢಪಡಿಸಿಕೊಂಡರು. ಬಿಸಿ ತಾಳಲಾರದೆ ಜಲಚರಗಳೂ ಕೂಡ ದಂಡೆ ಹತ್ತಿ ಮೇಲಕ್ಕೆ ಬರುವ ಪ್ರಯತ್ನ ಮಾಡಿವೆ ಎನ್ನಲಾಗಿದೆ.

ಇದು ದೇವಸ್ಥಾನದ ಪಕ್ಕದಲ್ಲಿರುವುದರಿಂದ ಇದೇ ನೀರು ದೇವಸ್ಥಾನಕ್ಕೂ ಬಳಕೆಯಾಗುತ್ತಿದೆಯೇ ಎಂಬ ಆತಂಕ ಕೆಲವರದ್ದು. ಆದರೆ, ಈ ಆತಂಕ ಬೇಡ ಎನ್ನುತ್ತಾರೆ ಸ್ಥಳೀಯ ಮುಖಂಡರು.

ಬಾವಿಯು ಮೋಹನ್ ದೇವಾಡಿಗ ಎಂಬ ಖಾಸಗಿ ವ್ಯಕ್ತಿಗೆ ಸೇರಿರುವುದರಿಂದ ಇಲ್ಲಿನ ನೀರನ್ನು ದೇವಸ್ಥಾನದ ಯಾವುದೇ ಕೆಲಸಕ್ಕೂ ಬಳಸುವುದಿಲ್ಲ ಎಂದು ದೃಢಪಡಿಸಿದ್ದಾರೆ.

Comments are closed.