ಕರ್ನಾಟಕ

ರಾಜ್ಯ ಮಟ್ಟದ 9ನೇ ಕದಳಿ ಮಹಿಳಾ ಸಮಾವೇಶ: ಒಡೆದು ಆಳುವ ಸಾಮಾಜಿಕ ನ್ಯಾಯಕ್ಕೆ ಟೀಕೆ

Pinterest LinkedIn Tumblr

koppa

ಕೊಪ್ಪಳ: ‘ಸಾಮಾಜಿಕ ನ್ಯಾಯದ ನಿಜ ಅರ್ಥ ತಿಳಿಯದ ಕೆಲವು ಸ್ವಾರ್ಥಿಗಳು ಕೆಳಜಾತಿ­ಯವರನ್ನು ಮೇಲ್ಜಾತಿಯವರ ವಿರುದ್ಧ ಎತ್ತಿ ಕಟ್ಟಿ ತಮ್ಮ ಬೇಳೆ ಬೇಯಿಸಿಕೊ­ಳ್ಳುವುದು ಅಪಾಯಕಾರಿ ಬೆಳವಣಿಗೆ’ ಎಂದು ವಿಜಯಪುರದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಪ್ರಾಧ್ಯಾ­ಪಕಿ ಡಾ.ವಿಜಯಶ್ರೀ ಸಬರದ ಹೇಳಿದರು.

ನಗರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌, ಜಿಲ್ಲಾ ಕದಳಿ ವೇದಿಕೆ ಆಶ್ರಯದಲ್ಲಿ ಭಾನುವಾರ ಆರಂಭಗೊಂಡ ರಾಜ್ಯ ಮಟ್ಟದ 9ನೇ ಕದಳಿ ಮಹಿಳಾ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಸಾಮಾಜಿಕ ನ್ಯಾಯದಲ್ಲಿ ನಿಜವಾದ ಸಮಾನತೆಯಿದೆ. ವೈಜ್ಞಾನಿಕ ದೃಷ್ಟಿ­ಕೋನ­­ವಿದೆ. ಕೇವಲ ಮತ ಬ್ಯಾಂಕ್‌ಗಾಗಿ ನಡೆಸುವ ಸಾಮಾಜಿಕ ನ್ಯಾಯದಲ್ಲಿ ಒಡೆದು ಆಳುವ ನೀತಿಯಿದೆ’ ಎಂದು ಎಚ್ಚರಿಸಿದರು.

ಮಹಿಳೆಯರು ಮೀಸಲಾತಿಗಾಗಿ ಹೋರಾಟ ಮಾಡಬೇಕಾಗಿರುವುದು ದುರಂತ. 800 ವರ್ಷಗಳ ಹಿಂದೆ ಮಹಿಳೆಯರಿಗೆ ಸಮಾನ ಅವಕಾಶ ನೀಡಿದ ಶರಣರ ನೀತಿಯನ್ನು ಮುಂದಾ­ದರೂ ಅನುಸರಿಸಬೇಕಿದೆ ಎಂದು ಹೇಳಿದರು.

ಸಂಕೀರ್ಣವಾಗುತ್ತಿರುವ ಬದುಕಿನ ಕುರಿತು ವಿಶ್ಲೇಷಿಸಿದ ಅವರು, ಆಧುನಿಕ ಬದುಕಿನಲ್ಲಿ ಅನೇಕ ದಂಪತಿ ವಿಚ್ಛೇದನ ಪಡೆಯುತ್ತಿರುವುದು ಶೋಚನೀಯ. ಅದಕ್ಕೆ ಸ್ವಾರ್ಥ, ಅಹಂಭಾವ, ಅಸಹನೆ, ಮೌಢ್ಯತೆ, ಅಸಮಾನತೆ ಕಾರಣ. ನಿಸ್ವಾರ್ಥ ಪ್ರೀತಿ, ಸಂಯಮ ಇದ್ದರೆ ದಾಂಪತ್ಯ ಸಾಮರಸ್ಯದಿಂದ ಕೂಡಿರು­ತ್ತದೆ. ಕಾಮವು ನೈತಿಕ ನೆಲೆಯಲ್ಲಿ ಗಂಡ– ಹೆಂಡತಿ ನಡುವೆ ಅರಳಬೇಕೇ ಹೊರತು ಅನೈತಿಕ ನೆಲೆಯಲ್ಲಿ ಸ್ಫೋಟ­ಗೊಳ್ಳಬಾರದು. ಧರ್ಮ ಬಾಹಿರ ಕಾಮವನ್ನು ಶರಣರು ಒಪ್ಪುವುದಿಲ್ಲ. ಲೈಂಗಿಕ ಅತ್ಯಾಚಾ ರಗಳನ್ನು ಸಹಿಸು­ವುದಿಲ್ಲ. ಇಂಥ ದುರಂತಗಳನ್ನು ತಡೆಗಟ್ಟುವುದ ಕ್ಕಾಗಿಯೇ ಶರಣರು ಪರಸತಿ ಸಂಗವನ್ನು ವಿರೋಧಿಸಿ, ಸತಿಪತಿಗಳೊಂದಾದ ಭಕ್ತಿಯನ್ನು ಸ್ವಾಗತಿಸಿದ್ದಾರೆ. ಇಂಥ ವಿಚಾರಗಳನ್ನು ಅರ್ಥ ಮಾಡಿಕೊಂಡಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರಗಳು ನಡೆ ಯುತ್ತಿರಲಿಲ್ಲ ಎಂದು ಹೇಳಿದರು.

ಮಾಧ್ಯಮಗಳಿಗೆ ಚಾಟಿ: ‘ಉಪಗ್ರಹ ವಾಹಿನಿಗಳ ಮೂಲಕ ಹರಿದು ಬರುತ್ತಿರುವ ಮುಕ್ತಕಾಮ ಯುವಪೀಳಿಗೆಯನ್ನು ದಾರಿ ತಪ್ಪಿಸ­ತೊಡಗಿದೆ. ಎಂದು ಹೇಳಿದರು.

Write A Comment