ಕರ್ನಾಟಕ

ಡಿ.ಕೆ.ರವಿ ಸಾವಿನ ಪ್ರಕರಣ: ಮಾಧ್ಯಮಗಳೂ ಕೋರ್ಟಿಗೆ !

Pinterest LinkedIn Tumblr

Ravi-NN

ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ನಿಗೂಢ ಸಾವಿಗೆ ಸಂಬಂಧಿಸಿದ ದಾಖಲೆಯನ್ನು ಬಿಡುಗಡೆ ಮಾಡಿರುವ ಮಾಧ್ಯಮಗಳಿಗೆ ಕಾನೂನಿನ ತೂಗುಗತ್ತಿ ಎದುರಾಗಿದೆ.

ಸಾವಿನ ಪ್ರಕರಣದ ಕುರಿತು ಸಿಐಡಿ ಹಾಗೂ ಸರ್ಕಾರಕ್ಕೆ ಸಾರ್ವಜನಿಕವಾಗಿ ಹೇಳಿಕೆ ನೀಡದಂತೆ ಹಾಗೂ ವರದಿ ಬಹಿರಂಗ ಪಡಿಸದಂತೆ ಹೈಕೋರ್ಟ್ ಮಾರ್ಚ್ 22ರಂದು ಮಧ್ಯಂತರ ಆದೇಶ ನೀಡಿತ್ತು. ಆದರೆ ಈ ನಡುವೆ ರವಿ ಅವರ ಸಾವಿನ ಮಾಹಿತಿ ಎನ್ನಲಾಗುವ ವಾಟ್ಸ್ ಆ್ಯಪ್ ಮತ್ತು ಇತರೆ ಮಾಹಿತಿಯನ್ನು ಸಿಐಡಿ ಅಧಿಕಾರಿಗಳು ಮಾಧ್ಯಮಕ್ಕೆ ಸೋರಿಕೆ ಮಾಡಿದ್ದಾರೆಂದು ಆರೋಪಿಸಿ ಮಹಿಳಾ ಐಎಎಸ್ ಅಧಿಕಾರಿಯ ಪತಿ ಸುಧೀರ್ ರೆಡ್ಡಿ ನ್ಯಾಯಾಂಗ ನಿಂದನೆ ದೂರು ದಾಖಲಿಸಿದ್ದರು.

ಅಲ್ಲದೇ ತಮ್ಮ ಈ ಅರ್ಜಿಯಲ್ಲಿ  ಸರ್ಕಾರ, ಸಿಐಡಿ ಅಧಿಕಾರಿಗಳು ಹೈಕೋರ್ಟ್ ನ ಆದೇಶ ಉಲ್ಲಂಘಿಸಿ ಮಾಹಿತಿ ಸೋರಿಕೆ ಮಾಡಿದ್ದಾರೆ. ಆದ್ದರಿಂದ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದು ರಾಜ್ಯ ಸರ್ಕಾರ, ಸಿಐಡಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳ ಬಗೆಗೆ ವರದಿ ಪ್ರಕಟಿಸಿದ ಕನ್ನಡ ಹಾಗೂ ಇಂಗ್ಲಿಷ್ ದಿನಪತ್ರಿಕೆ ಹಾಗೂ ಪತ್ರಿಕೆಯ ಮುದ್ರಕ ಹಾಗೂ ಸಂಪಾದಕರನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದ್ದು ಅವರ ಮೇಲೆಯೂ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

Write A Comment