ಕರ್ನಾಟಕ

ಬೇರೆಯಾಗುವ ಭಯದಿಂದ ಆತ್ಮಹತ್ಯೆಗೆತ್ನಿಸಿದ ಕಾಲೇಜು ವಿದ್ಯಾರ್ಥಿನಿಯರು

Pinterest LinkedIn Tumblr

7283overdosing-as-a-suicide-attempt-200x200

ಮಂಡ್ಯ: ಕಳೆದ ಮೂರು ವರ್ಷಗಳಿಂದ ವ್ಯಾಸಂಗ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರಿಬ್ಬರು ಅಂತಿಮ ವರ್ಷದ ಶೈಕ್ಷಣಿಕ ವರ್ಷ ಮುಗಿದ ಬಳಿಕ ದೂರಾಗುತ್ತೇವೆಂಬ ಭಯದಿಂದ ವಿದ್ಯಾರ್ಥಿನಿ ನಿಲಯದಲ್ಲಿಯೇ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಮೈಸೂರು ತಾಲೂಕು ಹಾಗೂ ಹುಣಸೂರು ತಾಲೂಕಿಗೆ ಸೇರಿದ್ದ ಈ ಇಬ್ಬರು ಸ್ನೇಹಿತೆಯರು ಮಂಡ್ಯದ ಎಇಟಿ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರೆಂದು ತಿಳಿದುಬಂದಿದೆ. ಸರ್ಕಾರಿ ವೃತ್ತಿಪರ ಕಾಲೇಜು ಬಾಲಕಿಯರ ವಿದ್ಯಾರ್ಥಿನಿ ನಿಲಯದಲ್ಲಿ ಮೂರು ವರ್ಷಗಳಿಂದ ಇಬ್ಬರು ಒಂದೇ ರೂಮಿನಲ್ಲಿ ವಾಸ್ಯವ್ಯ ಹೂಡಿದ್ದರೆಂದು ಹೇಳಲಾಗಿದೆ.

ಅಂತಿಮ ವರ್ಷದಲ್ಲಿದ್ದ ಕಾರಣ ಮಿಮ್ಸ್ ಆಸ್ಪತ್ರೆಯಲ್ಲಿ ತರಬೇತಿಗೆ ಇವರುಗಳನ್ನು ನಿಯೋಜಿಸಲಾಗಿದ್ದು, ಜೂನ್ 26 ರಂದು ತರಬೇತಿ ಮುಗಿಸಿಕೊಂಡಿದ್ದಾರೆ. ಆಗಸ್ಟ್ 3 ರಿಂದ ಅಂತಿಮ ವರ್ಷದ ಪರೀಕ್ಷೆಗಳು ಆರಂಭಗೊಳ್ಳಲಿದ್ದ ಹಿನ್ನೆಲೆಯಲ್ಲಿ ವ್ಯಾಸಂಗಕ್ಕಾಗಿ ರಜೆ ನೀಡಲಾಗಿತ್ತೆಂದು ಹೇಳಲಾಗಿದೆ.

ಪರೀಕ್ಷೆ ಮುಗಿದ ಬಳಿಕ ತಾವಿಬ್ಬರು ದೂರವಾಗುತ್ತೇವೆಂಬ ಭಯದಿಂದ ಇಬ್ಬರೂ ಅಂಟಿ ಬಯೋಟಿಕ್ ಮಾತ್ರೆಗಳನ್ನು ಸೇವಿಸಿದ್ದು, ತೇಲುಗಣ್ಣು ಮಾಡುತ್ತಿದ್ದ ಇವರುಗಳನ್ನು ಗಮನಿಸಿದ ಹಾಸ್ಟೆಲ್ ನ ಇತರೆ ವಿದ್ಯಾರ್ಥಿನಿಯರು ವಿಷಯವನ್ನು ವಾರ್ಡನ್ ಗೆ ತಿಳಿಸಿದ್ದಾರೆ. ತಕ್ಷಣವೇ ಇಬ್ಬರೂ ವಿದ್ಯಾರ್ಥಿನಿಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

Write A Comment