ಕರ್ನಾಟಕ

ನನ್ನದು ಚಿಕ್ಕ ವಯಸ್ಸು,ಮತ್ತೆ ಲಂಡನ್ನಿಗೆ ಹೋಗುವೆ;ರಮ್ಯಾ, ಕೃಷ್ಣ ಭೇಟಿ

Pinterest LinkedIn Tumblr

ramya-mediumಬೆಂಗಳೂರು: ನಟಿ, ಮಾಜಿ ಸಂಸದೆ ರಮ್ಯಾ ಎಲ್ಲಿದ್ದರು, ಎಲ್ಲಿಗೆ ಹೋಗಿದ್ದರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ಮಾಡಿದ್ದ ರಮ್ಯಾ ಶನಿವಾರ ಕಾಂಗ್ರೆಸ್ ಹಿರಿಯ ಧುರೀಣ, ಮಾಜಿ ಕೇಂದ್ರ ಸಚಿವ ಎಸ್.ಎಂ.ಕೃಷ್ಣ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಮೂಲಕ ಕುತೂಲಹಲ ಮೂಡಿಸಿದ್ದಾರೆ.

ಹೌದು ರಮ್ಯಾ ರಾಜಕೀಯದಲ್ಲಿ ಸಕ್ರಿಯವಾಗುವ ಎಲ್ಲಾ ಲಕ್ಷಣಗಳು ಕಾಣಿಸತೊಡಗಿದೆ. ಇಂದು ಸದಾಶಿವ ನಗರದಲ್ಲಿರುವ ಎಸ್.ಎಂ.ಕೃಷ್ಣ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಮಂಡ್ಯದಲ್ಲಿ ನಡೆದ ರೈತರ ಸರಣಿ ಆತ್ಮಹತ್ಯೆ ಕುರಿತಂತೆ ಚರ್ಚಿಸಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ನನಗೆ ಓದೋದು ತುಂಬಾ ಇಷ್ಟ ಹಾಗಾಗಿ ವಿದೇಶಕ್ಕೆ ತೆರಳಿದ್ದೆ. ವಿದೇಶದಿಂದ ಬಂದ ಮೇಲೆ ಮಂಡ್ಯಕ್ಕೆ ಭೇಟಿ ನೀಡಿದ್ದೆ. ರೈತರ ಭೇಟಿ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡೋದು ಸರಿಯಲ್ಲ. ರೈತರಿಗೆ ಸಾಂತ್ವನ ಹೇಳುವುದು ನನ್ನ ಉದ್ದೇಶವಾಗಿತ್ತು. ಬಳಿಕ ಸಿಎಂ, ರಾಹುಲ್ ಗೂ ರೈತರ ಆತ್ಮಹತ್ಯೆ ಕುರಿತು ಮಾಹಿತಿ ನೀಡಿದ್ದೆ. ಆದರೆ ಹಾಲಿ ಸಂಸದ ಪುಟ್ಟರಾಜು ಇದುವರೆಗೂ ರೈತರನ್ನು ಭೇಟಿ ಮಾಡಿಲ್ಲ. ನೀವು ಅವರನ್ನು ಪ್ರಶ್ನಿಸಿ ಎಲ್ಲಿಗೆ ಹೋಗಿದ್ದೀರಿ ಎಂಬುದಾಗಿ ರಮ್ಯಾ ಮರು ಪ್ರಶ್ನಿಸಿದರು. ಆಗಸ್ಟ್ 15ಕ್ಕೆ ಮತ್ತೆ ಲಂಡನ್ ಗೆ ತೆರುವುದಾಗಿ ಹೇಳಿದರು. ನನಗಿನ್ನೂ ಚಿಕ್ಕ ವಯಸ್ಸು ಅಧ್ಯಯನ, ಜನರ ಸೇವೆಯಲ್ಲಿ ತೊಡಗುವೆ ಎಂದು ರಮ್ಯಾ ತಿಳಿಸಿದರು.

ನಾನು ಎಲ್ಲಾ ವಿಚಾರವನ್ನು ಎಸ್.ಎಂ. ಸರ್ ಬಳಿ ಹೇಳಿಕೊಳ್ಳುತ್ತೇನೆ. ನನ್ನ ಸ್ಟಡೀಸ್, ರಾಜಕೀಯ ಹೀಗೆ ಎಲ್ಲದರ ಬಗ್ಗೆಯೂ ಚರ್ಚಿಸಿದ್ದೇವೆ. ಮಂಡ್ಯದಲ್ಲಿ ನಡೆದ ರೈತರ ಸರಣಿ ಆತ್ಮಹತ್ಯೆ ಬಗ್ಗೆ ಮಾತುಕತೆ ನಡೆಸಿದೆವು ಎಂದು ಎಸ್.ಎಂ.ಕೃಷ್ಣ ಜೊತೆಗಿನ ಮಾತುಕತೆ ಬಳಿಕ ರಮ್ಯಾ ಸುದ್ದಿಗಾರರ ಬಳಿ ಮಾತನಾಡುತ್ತ ಹೇಳಿದರು.

ಮೊನ್ನೆಯಷ್ಟೇ ದಿಢೀರ್ ಆಗಿ ಮಂಡ್ಯ ರೈತರ ಮನೆಯಲ್ಲಿ ರಮ್ಯಾ ಕಾಣಿಸಿಕೊಂಡಿದ್ದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಶುಕ್ರವಾರ ಎಫ್ ಟಿಐಐ ವಿವಾದ ಸಂಬಂಧ ರಾಹುಲ್ ಗಾಂಧಿ ನೇತೃತ್ವದಲ್ಲಿ ಪುಣೆಯಲ್ಲಿ ಪ್ರತಿಭಟನೆ ನಡೆದಿತ್ತು. ಈ ಸಂದರ್ಭದಲ್ಲಿ ರಮ್ಯಾ ಕೂಡಾ ರಾಹುಲ್ ಗೆ ಸಾಥ್ ನೀಡಿದ್ದರು.
-ಉದಯವಾಣಿ

1 Comment

  1. One thing I have say
    In Kannada film industry
    Need need required dubbing
    To save Kannada
    Other than …
    Kannada bashe…we have to save..
    So please allow them to dubbing the movie ……
    Jai Kannada.

Write A Comment