ಕರ್ನಾಟಕ

ರಾಘವೇಶ್ವರ ಶ್ರೀಗಳ ‘ಅತ್ಯಾಚಾರ ಪ್ರಕರಣ’: ಎಂಟ್ರಿ ನೀಡಿದ ರಾಜ್ಯಪಾಲರು; ತನಿಖೆ ವಿಳಂಬಕ್ಕೆ ಗರಂ !

Pinterest LinkedIn Tumblr

13BG_RAGHAVESHWARA_2241969f

ಬೆಂಗಳೂರು: ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿ ಎದುರಿಸುತ್ತಿರುವ ರಾಮಚಂದ್ರಾ ಪುರ ಮಠದ ರಾಘವೇಶ್ವರ ಶ್ರೀಗಳ ಪ್ರಕರಣದ ತನಿಖೆ ವಿಳಂಬವಾಗುತ್ತಿರುವುದೇಕೆ ಎಂದು ರಾಜ್ಯಪಾಲರು ಸರ್ಕಾರದಿಂದ ಮಾಹಿತಿ ಕೇಳಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಕರ್ನಾಟಕ ರಾಜ್ಯಪಾಲ ವಜುಭಾಯಿ ವಾಲಾ ಅವರು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಜುಭಾಯಿ ವಾಲ ಅವರಿಗೆ ಗುರುವಾರ ಪತ್ರವೊಂದನ್ನು ಬರೆದಿದ್ದು, ರಾಘವೇಶ್ವರ ಶ್ರೀಗಳ ವಿರುದ್ಧದ ಅತ್ಯಾಚಾರದ ಆರೋಪದ ತನಿಖೆಯ ರೀತಿ ನೀತಿಯ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಬೇಕೆಂದು ತಾಕೀತು ಮಾಡಿದ್ದಾರೆ. ಆ ಮೂಲಕ ತೀವ್ರ ಸುದ್ದಿಗೆ ಗ್ರಾಸವಾಗಿದ್ದ ರಾಘವೇಶ್ವರ ಶ್ರೀಗಳ ಪ್ರಕರಣದಲ್ಲಿ ರಾಜ್ಯಪಾಲರು ಮಧ್ಯ ಪ್ರವೇಶಿಸಿರುವುದು ತೀವ್ರ ಸಂಚಲನ ಉಂಟುಮಾಡಿದೆ.

ಈ ಹಿಂದೆಯೂ ಕೂಡ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಕುಮಾರ ಮಂಗಳಂ ಅವರು ರಾಘವೇಶ್ವರ ಶ್ರೀ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ವಿಳಂಬವಾಗುತ್ತಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಮತ್ತು ರಾಜ್ಯಪಾಲರಿಗೆ ಪತ್ರ ಬರೆದು, ಸ್ವತಃ ಅವರೇ ರಾಜ್ಯಪಾಲರನ್ನು ಕಂಡು ಈ ಬಗ್ಗೆ ಅವರ ಗಮನ ಸೆಳೆದಿದ್ದರು. ಬಳಿಕ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯಪಾಲರು ಕೂಡಲೇ ಕಾರ್ಯೋನ್ಮುಖರಾಗಿ ಸರ್ಕಾರದಿಂದ ಮಾಹಿತಿ ಪಡೆಯಲು ಮುಂದಾಗಿದ್ದಾರೆ. `ತನಿಖೆ ವಿಳಂಬವಾಗಲು ಕಾರಣವೇನು? ಮಹಿಳಾ ದೌರ್ಜನ್ಯದ ವಿಚಾರದಲ್ಲಿ ನಿರ್ಲಕ್ಷ್ಯವೇಕೆ? ದೇಶಾದ್ಯಂತ ಈ ಪ್ರಕರಣ ಮಾರ್ದನಿಗೊಳ್ಳುತ್ತಿದ್ದರೂ ತನಿಖೆಗೆ ವಿಳಂಬ ರೋಗ ತಟ್ಟಿರುವುದು ಅರ್ಥವಾಗದ ಸಂಗತಿ` ಎಂದು ಕಿಡಿ ಕಾರಿದ್ದಾರೆ.

ಇದೇ ವೇಳೆ ರಾಘವೇಶ್ವರ ಶ್ರೀಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಾಜಕೀಯ ಒತ್ತಡಕ್ಕೆ ಮಣಿದು ಪ್ರಕರಣದ ತನಿಖೆಯನ್ನು ವಿಳಂಬ ಮಾಡುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಶ್ರೀಗಳ ವಿರುದ್ಧ ತನಿಖೆದೆ ಮುಂದಾದರೆ ಸಮಾಜದ ಒಂದು ಸಮುದಾಯ ಮತ್ತು ಅವರ ಹಿಂಬಾಲಿಸುವ ರಾಜಕೀಯ ನಾಯಕರು ಸರ್ಕಾರದ ವಿರುದ್ಧ ತಿರುಗಿ ಬೀಳಲಿದ್ದಾರೆ ಎಂಬ ಭಯದಿಂದಾಗಿ ಸರ್ಕಾರ ತನಿಖೆಯನ್ನು ವಿಳಂಬ ಮಾಡುತ್ತಿದೆ ಎಂಬ ವಾದ ಮತ್ತೊಂದೆಡೆಯಿಂದ ಕೇಳಿಬರುತ್ತಿದೆ.

ಇನ್ನು ರಾಜ್ಯಪಾಲರ ಈ ದಿಢೀರ್ ಪ್ರತಿಕಕ್ರಿಯೆಯಿಂದಾಗಿ ಎಚ್ಚೆತ್ತುಕೊಂಡಿರುವ ಸರ್ಕಾರ ತನ್ನ ವಿರುದ್ಧ ಎಲ್ಲ ಆರೋಪಗಳನ್ನು ತಳ್ಳಿಹಾಕಿದೆ. ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ನಡೆಸುತ್ತಿದ್ದಾರೆ ಎಂದು ಹೇಳಿದೆ.

Write A Comment