ಮುಂಬೈ

ಕಾಮಾಟಿಪುರ ವೇಶ್ಯೆಯರಿಗೀಗ ಬಂದೊದಗಿದೆ ಸಂಕಷ್ಟ..!

Pinterest LinkedIn Tumblr

6255kamathipura

ದೇಶದ ಅತಿ ದೊಡ್ಡ ರೆಡ್ ಲೈಟ್ ಏರಿಯಾ ಎಂಬ ಕುಖ್ಯಾತಿ ಪಡೆದಿರುವ ಮುಂಬೈನ ಕಾಮಾಟಿಪುರ ವೇಶ್ಯೆಯರಿಗೆ ಈ ಸಂಕಷ್ಟ ಬಂದೊದಗಿದೆ. ಅಲ್ಲಿನ ನಿವಾಸಿಗಳು ವೇಶ್ಯೆಯರನ್ನು ನಿಯಂತ್ರಿಸಬೇಕೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಒತ್ತಾಯಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಈಗ ಕ್ರಮಕ್ಕೆ ಮುಂದಾಗಿದ್ದಾರೆ.

ಆದರೆ ಬ್ರಿಟಿಷ್ ಆಡಳಿತದ ಕಾಲದಿಂದಲೂ ಕಾಮಾಟಿಪುರದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಕಾರಣ ಇದನ್ನು ತಕ್ಷಣಕ್ಕೆ ನಿಲ್ಲಿಸುವುದು ಕಷ್ಟಸಾಧ್ಯವೆಂಬ ಅರಿವು ಪೊಲೀಸರಿಗೂ ಇದ್ದು, ಈ ಹಿನ್ನೆಲೆಯಲ್ಲಿ ಕಾಮಾಟಿಪುರದ ಲೇನ್ ನಂಬರ್ 11 ರಲ್ಲಿ ಮಾತ್ರ ಈ ದಂಧೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಇತರೆ ಪ್ರದೇಶಗಳಲ್ಲಿ ಇದನ್ನು ಮುಂದುವರೆಸಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಕಾಮಾಟಿಪುರದಲ್ಲಿ ನೆಲೆಸಿರುವ ನಿವಾಸಿಗಳು ಈ ಪ್ರದೇಶದಲ್ಲಿ ವೇಶ್ಯೆಯರೇ ಬಹು ಸಂಖ್ಯೆಯಲ್ಲಿರುವ ಕಾರಣ ಸಂಜೆ ಬಳಿಕ ಹೆಣ್ಣು ಮಕ್ಕಳು ಹೊರ ಹೋಗುವುದೇ ದುಸ್ತರವಾಗುತ್ತಿದೆ. ಎಲ್ಲರನ್ನೂ ಒಂದೇ ದೃಷ್ಟಿಕೋನದಿಂದ ನೋಡಲಾಗುತ್ತಿದೆ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಿದ್ದರೆ ಇಲ್ಲಿನ ವ್ಯಾಪಾರಸ್ಥರು ಕೂಡಾ ಕಾಮಾಟಿಪುರದ ಕುಖ್ಯಾತಿಯಿಂದಾಗಿ ಗ್ರಾಹಕರು ವ್ಯಾಪಾರಕ್ಕೆ ಬರುತ್ತಿಲ್ಲವೆಂಬ ಸಂಕಷ್ಟ ತೋಡಿಕೊಂಡಿದ್ದಾರೆ.

ಆದರೆ ಇದಕ್ಕೆ ಕಾಮಾಟಿಪುರದ ವೇಶ್ಯೆಯರು ಬೇರೆಯದ್ದೇ ಕಾರಣ ಹೇಳುತ್ತಾರೆ. ತಾವಿರುವ ಪ್ರದೇಶದ ಮೇಲೆ ಮುಂಬೈನ ಕೆಲ ಬಿಲ್ಡರ್ ಗಳ ಕಣ್ಣು ಬಿದ್ದಿದ್ದು, ಇವರುಗಳೇ ಕೆಲ ಸ್ಥಳೀಯರನ್ನು ತಮ್ಮ ವಿರುದ್ದ ಎತ್ತಿ ಕಟ್ಟುವ ಮೂಲಕ ಜಾಗ ಕಬಳಿಸಲು ಯತ್ನಿಸುತ್ತಿದ್ದಾರೆಂದು ಆರೋಪಿಸಿದ್ದಾರೆ. ತಾವು ಲೇನ್ ಸಂಖ್ಯೆ 11 ರಲ್ಲಿ ಮಾತ್ರ ದಂಧೆ ನಡೆಸುತ್ತಿದ್ದರೂ ಪೊಲೀಸರು ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ. ಇದರಿಂದಾಗಿ ಬದುಕುವುದೇ ದುಸ್ತರವಾಗಿದೆ ಎನ್ನುತ್ತಾರವರು.

Write A Comment