ಮನೋರಂಜನೆ

ಸಂಜಯ್ ದತ್ ಜತೆ ಪಾರ್ಟಿ ಮಾಡ್ತಾರಂತೆ ಸಲ್ಮಾನ್ ಖಾನ್ !

Pinterest LinkedIn Tumblr

4469salman-sanjay-friendshipತಮ್ಮ ಮೇಲಿನ ಪ್ರಕರಣಗಳಿಂದ ಕೊಂಚ ನಿರಾಳರಾಗಿ ಒಪ್ಪಿಕೊಂಡ ಚಿತ್ರಗಳ ಚಿತ್ರೀಕರಣದಲ್ಲಿ ಭಾಗವಹಿಸುತ್ತಿರುವ ಬಾಲಿವುಡ್​ ನಟ ಸಲ್ಮಾನ್ ಖಾನ್  ಇದೀಗ ಜೈಲಿನ ಕಂಬಿ ಎಣಿಸುತ್ತಿರುವ ಸಂಜಯ್ ದತ್ ಜತೆ ಪಾರ್ಟಿ ನಡೆಸಲು ಮುಂದಾಗಿದ್ದಾರೆ.

ಹೌದು. ಹಿಟ್ ಆಂಡ್ ರನ್ ಹಾಗೂ ಕೃಷ್ಣ ಮೃಗ ಬೇಟೆ ಗೆ ಸಂಬಂಧಿಸಿದ ಪ್ರಕರಣದಲ್ಲಿ ವಿಜಯಲಕ್ಷ್ಮಿ ಒಲಿಯುವಂತೆ ಕಂಡು ಬರುತ್ತಿರುವುದರಿಂದ ಸಂತಸದಿಂದಿರುವ ಸಲ್ಮಾನ್ ಖಾನ್  ಭಜರಂಗಿ ಬೈಜಾನ್ ಚಿತ್ರದ ಆಜ್ ಕಿ ಪಾರ್ಟಿ.. ಎಂಬ ಹಾಡಿನ ಬಿಡುಗಡೆ ಸಮಾರಂಭದ ಸಂದರ್ಭದಲ್ಲಿ ಮಾತನಾಡಿ 1993ರ ಮುಂಬೈ ಸರಣಿ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಸಂಜಯ್ ದತ್ ಜೈಲಿನಿಂದ ಬಿಡುಗಡೆಯಾದ ಬಳಿಕ ಭರ್ಜರಿ ಪಾರ್ಟಿ ಮಾಡುವ ಬಯಕೆಯನ್ನು ಹೊರ ಹಾಕಿದ್ದಾರೆ.

ಕಾರ್ಯಕ್ರಮದಲ್ಲಿ ಮನಬಿಚ್ಚಿ ಮಾತನಾಡಿದ ಸಲ್ಮಾನ್ ,ಸಂಜು ಬಾಬಾ ಸದ್ಯದಲ್ಲೇ ಸರಳುಗಳ ಎಣಿಕೆಯಿಂದ ರಜೆ ಪಡೆದು ಹೊರಬರಲಿದ್ದು ಅವರ ಮೇಲಿನ ಕಳಂಕವೆಲ್ಲ ನಿವಾರಣೆಯಾಗಿ ಹೊಸ ಮನುಷ್ಯರಾಗಿ ಹೊರ ಬರುತ್ತಾರೆ . ಆಗ ಹಕ್ಕಿಯಂತೆ ಸ್ವಚ್ಛಂದವಾಗಿ ವಿಹರಿಸಲು ಯಾವುದೇ ಅಡ್ಡಿ ಆತಂಕಗಳಿರುವುದಿಲ್ಲ.ಹಾಗಾಗಿ ಆ ಸಮಯದಲ್ಲಿ ತಾವು ಸಂಜಯ್ ದತ್ ಅವರ ಜತೆ ಸೇರಿ ಭರ್ಜರಿ ಪಾರ್ಟಿ ಮಾಡುವುದಾಗಿ ತಿಳಿಸಿದ್ದಾರೆ.

ಏನೇ ಇರಲಿ, ಅದೃಷ್ಟವೋ ಎಂಬಂತೆ ಕಾನೂನು ಕಕ್ಷೆಯಿಂದ ತಪ್ಪಿಸಿಕೊಳ್ಳುತ್ತಿರುವ ಸಲ್ಮಾನ್ ಖಾನ್ ಅವರ ಈ ಮಾತು ಅವರಿಗೆ ಇದೀಗ ಮತ್ತಷ್ಟು ಆತ್ಮವಿಶ್ವಾಸ ಬಂದಿದೆ ಎಂಬುದಂತೂ ಸ್ಪಷ್ಟ.

Write A Comment