ಮನೋರಂಜನೆ

ಸುಮಲತಾ ಅಂಬರೀಷ್ ಕಣ್ಣೀರಾಕುವಂತೆ ಮಾಡಿದ್ರಾ ಪುನೀತ್..?

Pinterest LinkedIn Tumblr

4004Sumalatha-Ambareesh-and-Puneeth-Rajkumarನಟಿ ಸುಮಲತಾ ಅಂಬರೀಷ್ ಕಣ್ಣೀರಾಕಿದ್ದಾರೆ. ಅವರು ಕಣ್ಣೀರಿಡುವ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಹ ಇದ್ದ ಕಾರಣ ಸುಮಲತಾ ಯಾಕಾಗಿ ಕಣ್ಣೀರಾಕಿದ್ದಾರೆಂಬ ವಿಚಾರ ಸ್ವಲ್ಪ ದಿನದಲ್ಲೇ ಬಹಿರಂಗವಾಗಲಿದೆ.

ಸುಮಲತಾ ಅಂಬರೀಷ್ ಕಣ್ಣೀರು ಹಾಕಿದ್ದಾರಾದರೂ ಅದು ನಿಜವಾಗಿಯೂ ಅಲ್ಲ ಬದಲಾಗಿ ಸಿನಿಮಾಗಾಗಿ. ಪುನೀತ್ ರಾಜಕುಮಾರ್ ಅವರ ‘ದೊಡ್ಮನೆ ಹುಡುಗ’ ಚಿತ್ರದಲ್ಲಿ ಸುಮಲತಾ ಅಂಬರೀಷ್ ಅವರೂ ಅಭಿನಯಿಸುತ್ತಿದ್ದು, ಈ ಚಿತ್ರದ ಚಿತ್ರೀಕರಣದ ಸ್ಟಿಲ್ ಒಂದು ಈಗ ಬಹಿರಂಗವಾಗಿದೆ. ಇದರಲ್ಲಿ ಸುಮಲತಾ ಕಣ್ಣೀರು ಹಾಕಿದ್ದರೆ ಪುನೀತ್ ರಾಜಕುಮಾರ್ ಸಹ ಜೊತೆಯಲ್ಲಿದ್ದಾರೆ.

ಚಿತ್ರದ ಸ್ಟಿಲ್ ನೋಡಿದರೆ ಆಸ್ಪತ್ರೆಯೊಳಗೆ ಈ ದೃಶ್ಯದ ಚಿತ್ರೀಕರಣ ನಡೆದಿರಬಹುದೆಂದು ಹೇಳಲಾಗಿದ್ದು, ಭಾವನಾತ್ಮಕ ಸನ್ನಿವೇಶದಲ್ಲಿ ಸುಮಲತಾ ಅಂಬರೀಷ್ ಹಾಗೂ ಪುನೀತ್ ರಾಜಕುಮಾರ್ ಇಬ್ಬರೂ ಕಾಣಿಸಿಕೊಂಡಿದ್ದಾರೆ. ‘ದೊಡ್ಮನೆ ಹುಡುಗ’ ದಲ್ಲಿ ರಾಧಿಕಾ ಪಂಡಿತ್, ಪುನೀತ್ ರಾಜಕುಮಾರ್ ಅವರಿಗೆ ನಾಯಕಿಯಾಗಿದ್ದು ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಶೀಘ್ರದಲ್ಲೇ ಈ ಚಿತ್ರ ತೆರೆ ಮೇಲೆ ಬರಲಿದ್ದು, ಸುಮಲತಾ ಅಂಬರೀಷ್ ಯಾಕಾಗಿ ಕಣ್ಣೀರಿಟ್ಟರೆಂಬುದು ‘ದೊಡ್ಮನೆ ಹುಡುಗ’ ಚಿತ್ರ ನೋಡಿದ ಬಳಿಕವಷ್ಟೇ ಗೊತ್ತಾಗಲಿದೆ.

1 Comment

Write A Comment