ಆರೋಗ್ಯ

ಸೂರ್ಯನ ತಾಪ ನಿಗಿಸಲು ಇಲ್ಲಿದೆ ಸುಲಭೋಪಾಯ

Pinterest LinkedIn Tumblr

hot_summer_pic

ಆರೋಗ್ಯ : ಬಿಸಿಲಿನ ತಾಪಕ್ಕೆ ಜನರು ತತ್ತರಿಸಿ ಹೋಗುತ್ತಿದ್ದಾರೆ. ಎಲ್ಲೆಡೆ ಬರಗಾಲ ಹಾಗೂ ನೀರಿಗಾಗಿ ಹಾಹಾಕಾರ ಉಂಟಾಗಿ ಪರಾದಾಡುವ ಸ್ಥಿತಿ ಎದುರಾಗಿದೆ. ಇಂತಹ ಸಮಯದಲ್ಲಿ ಆರೋಗ್ಯ ಬಹುಬೇಗ ಕೈಕೊಡುತ್ತದೆ. ಹಾಗಾಗಿ ಸಾಧ್ಯವಾದಷ್ಟು ಎಚ್ಚರ ವಹಿಸುವುದು ಅಗತ್ಯವಾಗಿದೆ.

ಈ ಸಮಯದಲ್ಲಿ ನಿಮ್ಮ ಆರೋಗ್ಯದ ಕಡೆಗೆ ನೀವು ಗಮನ ನೀಡಿದಷ್ಟೂ ಅಪಾಯವನ್ನು ತಪ್ಪಿಸಿಕೊಳ್ಳಬಹುದಾಗಿದೆ. ತ್ವಚೆಗೆ ತೀವ್ರ ಹಾನಿಯನ್ನುಂಟು ಮಾಡುವ ಈ ಬಿಸಿಲು ದೇಹದಲ್ಲಿ ಅನಾರೋಗ್ಯವನ್ನು ಉಂಟುಮಾಡುವುದು ನಿಶ್ಚಿತ.

ತೀವ್ರ ಬಿಸಿಲು ಹೀಟ್ ಸ್ಟ್ರೋಕ್ ತೊಂದರೆಗಳನ್ನು ನಿಮ್ಮಲ್ಲಿ ಉಂಟುಮಾಡಲಿದ್ದು ಆದಷ್ಟು ಮಧ್ಯಾಹ್ನ ೧ ರಿಂದ ೩ ಗಂಟೆಯ ಸಮಯದಲ್ಲಿ ಹೊರಗೆ ಹೋಗುವುದನ್ನು ನೀವು ನಿಲ್ಲಿಸಬೇಕು. ಈ ಸಮಯದಲ್ಲಿ ಸೂರ್ಯನ ಕಿರಣವು ಹೆಚ್ಚು ಹಾನಿಕರವಾಗಿರುವುದರಿಂದ ರಕ್ಷಣೆಯನ್ನು ನೀವು ಪಡೆದುಕೊಳ್ಳಲೇಬೇಕು. ತಲೆನೋವು, ತಲೆತಿರುಗುವುದು, ಬಿಳಿಚಿಕೊಂಡ ಚರ್ಮ, ಹೆಚ್ಚಿನ ದೇಹದ ಉಷ್ಣತೆ, ಆಯಾಸ, ವಾಕರಿಕೆ, ಸೆಳೆತ ಇತ್ಯಾದಿಗಳು ಹೀಟ್ ಸ್ಟ್ರೋಕ್ನ ಲಕ್ಷಣವಾಗಿದೆ. ಈ ತೊಂದರೆಗಳು ನಿಮ್ಮನ್ನು ಹೆಚ್ಚು ಕಾಡುತ್ತಿದೆ ಎಂದಾದಲ್ಲಿ ಆದಷ್ಟು ಬೇಗನೇ ನೀವು ವೈದ್ಯರನ್ನು ಹೋಗಿ ಕಾಣುವುದು ಅತ್ಯುತ್ತಮ ಸಲಹೆಯಾಗಿದೆ.

ವೃದ್ಧರು, ದುರ್ಬಲರು, ಅನಾರೋಗ್ಯ ಪೀಡಿತರು, ಸಾಕು ಪ್ರಾಣಿಗಳು, ಹೊರಾಂಗಣದಲ್ಲಿ ಕೆಲಸ ಮಾಡುವವರು ಯುವ ಜನಾಂಗ ಹೀಟ್ ಸ್ಟ್ರೋಕ್‌ಗೆ ಬೇಗನೇ ಬಲಿಯಾಗುತ್ತಾರೆ. ಬಿಸಿಲಿಗೆ ಹೋಗುವ ಮುನ್ನ ಕೆಲವೊಂದು ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ತೊಂದರೆಯನ್ನು ನೀಗಿಸಿಕೊಳ್ಳಬಹುದಾಗಿದೆ.

ಬಿಸಿ ಜಾಸ್ತಿಯಾದಾಗ, ಬೆವರು ಸುರಿಯಲು ಆರಂಭವಾಗಿ ತಂಪಿನ ಅನುಭವವನ್ನು ಉಂಟುಮಾಡುತ್ತದೆ. ನೀವು ಬೆವರಿಲ್ಲ ಎಂದಾದಲ್ಲಿ, ಏನೋ ದೋಷವಿದೆ ಎಂಬುದು ಖಂಡಿತ. ಇದು ಹೀಟ್ ಸ್ಟ್ರೋಕ್ ಉಂಟು ಮಾಡಲಿದೆ. ನಿಮ್ಮನ್ನು ನೀವು ಆದಷ್ಟು ಹೈಡ್ರೇಟ್ ಆಗಿ ಇರಿಸಿಕೊಳ್ಳಲು ಸಾಕಷ್ಟು ನೀರು ಕುಡಿಯಲೇಬೇಕು. ಸಲಾಡ್ಸ್, ತಾಜಾ ತರಕಾರಿಗಳನ್ನು ಮತ್ತು ಸೊಪ್ಪು ತರಕಾರಿಗಳ ಸೇವನೆಯನ್ನು ಬೇಸಿಗೆಯಲ್ಲಿ ನೀವು ಮಾಡಿದಷ್ಟೂ ಒಳ್ಳೆಯದು. ನೀರಿನಂಶ ಹೆಚ್ಚಿರುವ ತರಕಾರಿಗಳು ಮತ್ತು ಹಣ್ಣುಗಳನ್ನು ಈ ಸಮಯದಲ್ಲಿ ಮಾಡಿ ಅಂದರೆ ಸೌತೆಕಾಯಿ, ಕಲ್ಲಂಗಡಿ ಹಣ್ಣುಗಳನ್ನು ಆದಷ್ಟು ಬೇಸಿಗೆಯಲ್ಲಿ ಸೇವಿಸಿ.

ಹೊಟ್ಟೆಯ ಸೆಳೆತವನ್ನು ತಂಪು ಪಾನೀಯಗಳು ಉಂಟುಮಾಡುವ ಸಾಧ್ಯತೆ ಇರುವುದರಿಂದ ಐಸ್ ಹಾಕಿದ ಶೀತಲ ಪಾನೀಯಗಳ ಸೇವನೆ ಮಾಡಬೇಡಿ. ನಿಮ್ಮ ಬಾಯಾರಿಕೆಯನ್ನು ಇದು ಸ್ವಲ್ಪ ಹೊತ್ತು ನೀಗಿಸಿದರೂ ನಿಮ್ಮನ್ನು ಅಪಾಯಕ್ಕೆ ತಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಬೇಸಿಗೆಯಲ್ಲಿ ಮದ್ಯ ಸೇವನೆಯನ್ನು ನೀವು ಆದಷ್ಟು ಕಡಿಮೆ ಮಾಡಿದಷ್ಟೂ ಒಳ್ಳೆಯದು. ಕಡಿಮೆ ಸಕ್ಕರೆ ಮತ್ತು ಉಪ್ಪು ಇರುವ ಪಾನೀಗಳನ್ನು ಹೆಚ್ಚು ಸೇವಿಸಿ. ಎಳನೀರು ದೇಹವನ್ನು ತಂಪಾಗಿರಿಸುವಲ್ಲಿ ಸಹಕಾರಿಯಾಗಿದ್ದು ನೈಸರ್ಗಿಕ ಇಲೆಕ್ಟ್ರೊಲೈಟ್ ಅನ್ನು ದೇಹಕ್ಕೆ ಒದಗಿಸುತ್ತದೆ. ಮತ್ತು ಇದು ತಂಪು ಪಾನೀಯಗಳಿಂದ ಅತ್ಯುತ್ತಮ ಆಯ್ಕೆ. ಲಿಂಬೆ ರಸಕ್ಕೆ ಎರಡು ಚಿಟಿಕೆ ಉಪ್ಪು, ಸ್ವಲ್ಪ ಸಕ್ಕರೆ ಚಿಟಿಕೆ ಸೋಡಿಯಂ ಬೈಕಾರ್ಬೊನೇಟ್ ಅಥವಾ ಬೇಕಿಂಗ್ ಸೋಡಾ ಬೆರೆಸಿ ಕುಡಿಯುವುದು ಉತ್ತಮ.

ತೀವ್ರ ಬಿಸಿಲು ಇರುವ ಸಂದರ್ಭದಲ್ಲಿ ಆದಷ್ಟು ಹೊರಗೆ ಹೋಗುವುದನ್ನು ನಿಲ್ಲಿಸಿ. ಇದು ಸಾಧ್ಯವಿಲ್ಲ ಎಂದಾದಲ್ಲಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವ ಮಾರ್ಗಗಳನ್ನು ಹುಡುಕಿ ಅಂದರೆ ಛತ್ರಿ ಬಳಸುವುದು, ಹಗುರವಾದ ಉಡುಪು ಧರಿಸುವುದು ಅಂತೆಯೇ ಸನ್ ಸ್ಕ್ರೀನ್ ಲೋಶನ್ ಅನ್ನು ಬಳಸುವುದನ್ನು ರೂಡಿಸಿಕೊಳ್ಳಿ

Write A Comment