ಅಂತರಾಷ್ಟ್ರೀಯ

ಮಧುಮೇಹ ತಡೆಗಟ್ಟಲು ಕಿತ್ತಳೆ ಹಣ್ಣು ತಿನ್ನಿ…!

Pinterest LinkedIn Tumblr

SONY DSC

ಹೃದ್ರೋಗ, ಯಕೃತ್ತಿನ ರೋಗ ಮತ್ತು ಮಧುಮೇಹದ ಹಾನಿಕಾರಕ ಪರಿಣಾಮಗಳನ್ನು ತಡೆಯುವ ಶಕ್ತಿ ಕಿತ್ತಳೆ ಹಣ್ಣಿನಲ್ಲಿದೆ. ಕಿತ್ತಳೆ ಮತ್ತು ನಿಂಬೆ ಹಣ್ಣುಗಳಂತಹ ಸಿಟ್ರಸ್ ಆಮ್ಲದ ಹಣ್ಣುಗಳನ್ನು ಸೇವಿಸುವುದರಿಂದ ಬಹಳಷ್ಟು ರೋಗಗಳು ನಿಯಂತ್ರಣಕ್ಕೆ ಬರುತ್ತವೆ ಎಂದು ಸಾಭೀತಾಗಿದೆ. ಈ ಹಣ್ಣುಗಳಿಂದ ಖಾಯಿಲೆಯ ನಿಯಂತ್ರಣ ಹೇಗೆ ಸಾಧ್ಯ ಎಂದು ಇಲ್ಲಿದೆ ನೋಡಿ.

ನಾವು ತಿನ್ನುವ ಆಹಾರದಲ್ಲಿ ಕೊಬ್ಬಿನ ಅಂಶಗಳು ಹೆಚ್ಚಿರುತ್ತವೆ. ದೇಹದಲ್ಲಿ ಸಂಗ್ರಹವಾದ ಕೊಬ್ಬಿನ ಕೋಶಗಳನ್ನು ನಾಶಮಾಡುವ ಆಮ್ಲವನ್ನು ಸಿಟ್ರಸ್ ಆಮ್ಲದ ಹಣ್ಣುಗಳು ಉತ್ಪಾದಿಸುತ್ತವೆ. ದೇಹದಲ್ಲಿ ಕೊಬ್ಬು ಶೇಖರವಾದರೆ ಉರಿಯೂತ ಸೇರಿದಂತೆ ಎಸಿಡಿಟಿ, ಒತ್ತಡ, ಹೃದಯ ಸಂಬಂಧೀ ಖಾಯಿಲೆಗಳು, ಯಕೃತ್ತಿನ ರೋಗ, ಮತ್ತು ಮಧುಮೇಹ ರೋಗಗಳು ಉಲ್ಬಣವಾಗುತ್ತವೆ. ಇದನ್ನು ತಡೆಯಲು ಇರುವ ಮಾರ್ಗ ಎಂದರೆ ಕಿತ್ತಳೆ ನಿಂಬೆಯಂತಹ ಹಣ್ಣುಗಳ ಸೇವನೆ ಎಂದು ಬ್ರೆಜಿಲ್ ನ UNESP ನ ಸಂಶೋಧಕರು ತಿಳಿಸುತ್ತಾರೆ.ಕಿತ್ತಳೆ ಹಣ್ಣುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಹೃದಯರೋಗದಂತಹ ಮಾರಣಾಂತಿಕ ಖಾಯಿಲೆಗಳು ನಿಯಂತ್ರಣಕ್ಕೆ ಬರುತ್ತವೆ ಎಂದು ಅಧ್ಯಯನದಿಂದ ಸಾಭೀತಾಗಿದೆ.

Comments are closed.