ಅಂತರಾಷ್ಟ್ರೀಯ

ಅನಿಯಮಿತ ಋತುಚಕ್ರಕ್ಕೆ ಕಾರಣವಾಗಿರುವ 5 ಮುಖ್ಯ ಕಾರಣವನ್ನು ನೀವು ತಿಳಿದುಕೊಳ್ಳಿ….

Pinterest LinkedIn Tumblr

periods

ಋತುಚಕ್ರದ ಸಮಯದಲ್ಲಿ ಎಲ್ಲಾ ಮಹಿಳೆಯರಿಗೂ ಕಾಳಜಿ ಅವಶ್ಯಕ. ಈ ಅವಧಿಯಲ್ಲಿ ಮತ್ತು ನಂತರ ಕೂಡಾ ಕಾಳಜಿ ಅನಿವಾರ್ಯ. ಅನಿಯಮಿತವಾಗಿ ಋತುಸ್ರಾವ ಉಂಟಾಗುತ್ತಿದ್ದರೆ ಅದನ್ನು ಹಗುರವಾಗಿ ಪರಿಗಣಿಸಬಾರದು. ಅದರಲ್ಲಿಯೂ ಮದುವೆಯಾದ ಮಹಿಳೆಯರು ಇದನ್ನು ನಿರ್ಲಕ್ಷಿಸಿದರೆ ಗರ್ಭಧಾರಣೆಗೆ ತೊಂದರೆಯಾಗುವ ಸಂಭವವಿದೆ. ಅನಿಯಮಿತ ಋತುಚಕ್ರಕ್ಕೆ 5 ಮುಖ್ಯ ಕಾರಣಗಳಿವೆ. ಆ 5 ಕಾರಣಗಳು ಇಲ್ಲಿವೆ ನೋಡಿ.

ಅತೀಯಾದ ತೂಕ ಮತ್ತು ತೂಕ ನಷ್ಟ: ಅತಿಯಾದ ತೂಕ ಮತ್ತು ತೂಕ ನಷ್ಟ ಅನುಭವಿಸುತ್ತಿರುವ ಮಹಿಳೆಯರಲ್ಲಿ ದೇಹದಲ್ಲಿ ಕೊಬ್ಬು ಸಂಗ್ರಹವಾಗುವುದು. ಇದರಿಂದ ಅನಿಯಮಿತ ಋತುಚಕ್ರ ಸಂಭವಿಸುತ್ತದೆ.

ಹಾರ್ಮೋನುಗಳ ಅಸಮತೋಲನ: ಋತುಚಕ್ರಕ್ಕೆ ಕಾರಣವಾಗುವ ಹಾರ್ಮೋನುಗಳ ಅಸಮತೋಲನ ಋತುಸ್ರಾವದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದ ಚಕ್ರದ ಪುನರಾವರ್ತನೆಯಲ್ಲಿ ತೀವ್ರ ಬದಲಾವಣೆಯಾಗಬಹುದು.

ಹೆಚ್ಚುವರಿ ವ್ಯಾಯಾಮ: ಬಹಳಷ್ಟು ಮಹಿಳೆಯರು ದೇಹದ ತೂಕ ಇಳಿಸಿಕೊಳ್ಳಲು ಹೆಚ್ಚು ವ್ಯಾಯಾಮ ಮಾಡುತ್ತಾರೆ. ಅತೀ ಹೆಚ್ಚಿನ ದೇಹ ದಂಡನೆ ಕೂಡ ಅನಿಯಮಿತ ಮುಟ್ಟಿಗೆ ಕಾರಣವಾಗುತ್ತದೆ.

ಹೆಚ್ಚಿನ ಒತ್ತಡ: ಮಾನಸಿಕ ಒತ್ತಡದಿಂದ ಬಳಲುತ್ತಿರುವ ಮಹಿಳೆಯರಲ್ಲಿ ಋತುಚಕ್ರದ ಸಮಸ್ಯೆ ಉಂಟಾಗುತ್ತದೆ.

ಆಹಾರದ ವ್ಯತ್ಯಾಸದಿಂದ: ಮಹಿಳೆಯರು ಸರಿಯಾದ ಸಮಯಕ್ಕೆ ಆಹಾರ ಸೇವಿಸದೇ ಇರುವುದು, ಸಮತೋಲನ ಆಹಾರ ಸೇವಿಸದಿರುವುದು, ಕೊಬ್ಬಿನ ಅಂಶಗಳು ಹೆಚ್ಚಿರುವ ಆಹಾರಗಳನ್ನು ಸೇವಿಸುವುದು ಇದೆಲ್ಲದರಿಂದ ಋತುಚಕ್ರದಲ್ಲಿ ವ್ಯತ್ಯಾಸಗಳಾಗುತ್ತವೆ.

Comments are closed.