ಅಂತರಾಷ್ಟ್ರೀಯ

ವಯಸ್ಸಾದಂತೆ ಲೈಂಗಿಕಾಸಕ್ತಿ ಹೆಚ್ಚುತ್ತದೋ…ಕಡಿಮೆ ಆಗುತ್ತದೋ ? ಅಧ್ಯಯನ ಹೇಳಿರುದು ಏನು..?

Pinterest LinkedIn Tumblr

2

ನ್ಯೂಯಾರ್ಕ್: ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪಲ್ಲ ಎಂಬ ಗಾದೆ ಮಾತನ್ನು ಪುಷ್ಠೀಕರಿಸುವ ಅಧ್ಯಯನವೊಂದು ಇಲ್ಲಿದೆ. ಹಿರಿಯ ವಯಸ್ಕರ ಲೈಂಗಿಕ ಜೀವನ ವಯಸ್ಸಾದಂತೆ ಕುಂದುತ್ತದೆ ಎಂಬ ಜನಪ್ರಿಯ ನಂಬಿಕೆಗೆ ತದ್ವಿರುದ್ಧವಾಗಿ, ಹಿರಿಯ ವಯಸ್ಕರ ಜೀವನದ ಇಳಿ ವಯಸ್ಸಿನಲ್ಲಿ ಸಂಭೋಗವೇ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುತ್ತದೆ ನೂತನ ಅಧ್ಯಯನವೊಂದು.

ವಯಸ್ಸಾದಂತೆ ಕ್ಷೀಣಿಸುವ ಬದಲು ಹಿರಿಯರ ಲಿಬಿಡೊ ಮತ್ತು ಲೈಂಗಿಕ ಕ್ರಿಯೆ ಅವರಿಗೆ ಇಳಿ ವಯಸ್ಸಿನಲ್ಲಿ ಸಿಗುವ ಹೆಚ್ಚು ವಿರಾಮ ಸಮಯದಿಂದ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ ಎನ್ನುತ್ತದೆ ಅಧ್ಯಯನ.

ಈ ಜೀವನೋತ್ಸಾಹಿ ಹಿರಿಯರು ತಮ್ಮ ಇಳಿ ವಯಸ್ಸಿನಲ್ಲಿ, ಲೈಂಕಿಕ ಜೀವನದ ಹೊಸ ಆಯಾಮಗಳ ಸುವರ್ಣ ವರ್ಷಗಳನ್ನು ಕಾಣುತ್ತಾರೆ ಎಂದು ತಿಳಿಸುತ್ತಾರೆ ಶಿಕಾಗೋದಾ ಇಲಿನಾಯ್ ವಿಶ್ವವಿದ್ಯಾಲಯದ ಪ್ರೊಫೆಸರ್ ಲೀಸಾ ಬರ್ದಿಶೆವ್ಸ್ಕಿ.

ಹಿರಿಯ ವಯಸ್ಸಿನಲ್ಲಿ ಸಂಭೋಗಕ್ಕೆ ಇರುವ ಮಹತ್ವ ಮತ್ತು ಅಡೆತಡೆಗಳನ್ನು ಪರೀಕ್ಷಿಸಿರುವ ಸಂಶೋಧಕರು, ಈ ವರ್ಷಗಳಲ್ಲಿ ಸಕ್ರಿಯ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಜನರ ತಂತ್ರಗಳನ್ನು ಪತ್ತೆ ಹಚ್ಚಿದ್ದಾರೆ.

50 ವರ್ಷದ ಮೇಲ್ಪಟ್ಟ ವಯಸ್ಕರಿರುವ 14 ಪ್ರಮುಖ ಅಂತರ್ಜಾಲ ಸಮುದಾಯಗಳಲ್ಲಿ ಇಡೀ ವರ್ಷ ನಡೆದಿರುವ ಸಂವಾದ ಚರ್ಚೆಗಳನ್ನು ಸಂಶೋಧಕರು ಪರಿಶೀಲಿಸಿದ್ದಾರೆ. ಆಸ್ಟ್ರೇಲಿಯಾ, ಕೆನಡಾ, ಬ್ರಿಟನ್ ಮತ್ತು ಅಮೆರಿಕಾದಲ್ಲಿ ಇಂಗ್ಲಿಷ್ ಮಾತನಾಡುವ ಜನರ ಸಮುದಾಯದ ಅಂತರ್ಜಾಲ ತಾಣಗಳನ್ನು ಸಂಶೋಧನೆಗೆ ಒಳಪಡಿಸಲಾಗಿದೆ.

ಕೆಲವು ಹಿರಿಯರು ಸಂಭೋಗದಿಂದ ನಿವೃತ್ತಿ ಪಡೆದಿರುವುದಕ್ಕೆ ಸಂತಸದಿಂದಿದ್ದರೆ, ಬಹುತೇಕರು ಲೈಂಗಿಕ ಆಸಕ್ತಿ ಉಳಿಸಿಕೊಂಡು ಸಕ್ರಿಯವಾಗಿರುವುದರ ಮಹತ್ವವನ್ನು ಒತ್ತಿ ಹೇಳಿದ್ದಾರೆ ಎಂದು ಸಂಶೋಧಕರು ಪತ್ತೆ ಹಚ್ಚಿದ್ದಾರೆ.

Comments are closed.