ಪ್ರಮುಖ ವರದಿಗಳು

ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗಳಿಸಿದ್ದ ಭಾರತದ ಕುಸ್ತಿ ಪಟು ಯೋಗೇಶ್ವರ್ ದತ್ ಗೆ ಸಿಕ್ಕಿತು ಬೆಳ್ಳಿ !!!

Pinterest LinkedIn Tumblr

yogeshwar-dutt_reuters_m

ನವದೆಹಲಿ: ಬ್ರೆಜಿಲ್‍ನಲ್ಲಿ ನಡೆದ ರಿಯೋ ಒಲಿಂಪಿಕ್ಸ್ ನಲ್ಲಿ ಅರ್ಹತಾ ಸುತ್ತಿನಲ್ಲೇ ನಿರ್ಗಮಿಸಿ ನಿರಾಸೆ ಮೂಡಿಸಿದ್ದ ಭಾರತದ ಕುಸ್ತಿ ಪಟು ಯೋಗೇಶ್ವರ್ ದತ್ ಭಾರತಕ್ಕೆ ಬೆಳ್ಳಿ ಪದಕ ತಂದಿದ್ದಾರೆ.

ಹೌದು. ಸೋತ್ರು ಹೇಗಪ್ಪ ಬೆಳ್ಳಿ ಬಂತು ಅಂದ್ರೆ, 2012ರಲ್ಲಿ ನಡೆದಿದ್ದ ಲಂಡನ್ ಒಲಿಂಪಿಕ್ಸ್ ನಲ್ಲಿ ಯೋಗೇಶ್ವರ್ ದತ್ ಕಂಚಿನ ಪದಕ ಗೆದ್ದಿದ್ದರು. ಆದ್ರೆ ಅಂದು ಬೆಳ್ಳಿ ಪದಕ ಜಯಿಸಿದ್ದ ರಷ್ಯಾದ ಆಟಗಾರ ಬೆಸಿಕಿ ಕುಡುಕೌವ್ ಉದ್ದೀಪನಾ ಪರೀಕ್ಷೆಯಲ್ಲಿ ಫೇಲ್ ಆಗಿದ್ದುಮ ಅವರು ಉದ್ದೀಪಾನ ಮದ್ದನ್ನು ಸೇವಿಸಿರುವುದು ದೃಢಪಟ್ಟಿದೆ. ಹೀಗಾಗಿ ಮೂರನೇ ಸ್ಥಾನ ಪಡೆದಿದ್ದ ದತ್‍ಗೆ ಬೆಳ್ಳಿ ಪದಕ ನೀಡಲಾಗಿದೆ.

ಇನ್ನೊಂದು ದುರಂತ ಅಂದ್ರೆ ಬೆಳ್ಳಿ ಪದಕ ಜಯಿಸಿದ್ದ ಕುಡುಕೌವ್ ಇದೀಗ ಬದುಕಿಲ್ಲ. 2014ರಲ್ಲಿ ನಡೆದ ಅಪಘಾತದಲ್ಲಿ ನಿಧನ ಹೊಂದಿದ್ದಾರೆ. ಆದ್ರೆ ಕಾನೂನು ರೀತಿ ಪದಕ ವಶಪಡಿಸಿಕೊಂಡು ಪದಕ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ. ಈ ಮೂಲಕ ಲಂಡನ್ ಗೇಮ್ಸ್ ನಲ್ಲಿ 66 ಕೆಜಿ ಫ್ರೀಸ್ಟೈಲ್‍ನಲ್ಲಿ ಸಿಲ್ವರ್ ಪದಕ ಗೆದ್ದಿದ್ದ ಸುಶೀಲ್ ಕುಮಾರ್ ನಂತರ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಎರಡನೇ ಆಟಗಾರನಾಗಿ ಹೊರಹೊಮ್ಮಿದ್ದಾರೆ.

Comments are closed.