ಅಂತರಾಷ್ಟ್ರೀಯ

ಎಸ್ಕಲೇಟರ್‌ನಲ್ಲಿ ಸಿಲುಕಿದ ಕ್ಲೀನರ್‌ನ ಕಾಲು ಕಟ್…ಈ ವೀಡಿಯೋ ನೋಡಿ..

Pinterest LinkedIn Tumblr

escalator

ಬೀಜಿಂಗ್: ಎಸ್ಕಲೇಟರ್‌ನಲ್ಲಿ ಸಿಲುಕಿಕೊಂಡ ಕಾಲನ್ನು ಕತ್ತರಿಸಿ ತೆಗೆಯಬೇಕಾದ ಪ್ರಸಂಗ ಚೀನಾದ ಶಾಂಘೈಯಲ್ಲಿರುವ ಮಾಲ್ ಒಂದರಲ್ಲಿ ನಡೆದಿದೆ.

ವಾರದ ಹಿಂದೆ ಮಹಿಳೆಯೊಬ್ಬಳ ಕಾಲು ಕೂಡ ಎಸ್ಕಲೇಟರಿನಲ್ಲಿ ಸಿಲುಕಿಕೊಂಡು ಇಂಥದ್ದೇ ದುರಂತ ಸಂಭವಿಸಿದ್ದು, ಯಾಂತ್ರಿಕ ಮೆಟ್ಟಿಲುಗಳ ಸುರಕ್ಷತೆ ಬಗ್ಗೆ ಆತಂಕ ಮೂಡಿದೆ.

ವಾರದಲ್ಲಿ ಇದು ಇಂತಹಾ ಮೂರನೇ ಘಟನೆಯಾಗಿದೆ. ಚೀನಾದಲ್ಲಿ ಪ್ರಸ್ತುತ 24 ಲಕ್ಷ ಎಸ್ಕಲೇಟರುಗಳು ಕಾರ್ಯಾಚರಿಸುತ್ತಿರುವುದರಿಂದ ಜನತೆ ಆತಂಕಕ್ಕೀಡಾಗಿದ್ದಾರೆ.

ಎಸ್ಕಲೇಟರ್ ಚಲಿಸುತ್ತಿರುವಾಗ ಅದನ್ನು ಸ್ವಚ್ಛಗೊಳಿಸುವುದು ಅಪಾಯಕಾರಿ ಎಂದು ತಜ್ಞರು ಸಲಹೆ ನೀಡಿದ್ದಾರೆ. ಕಳೆದ ತಿಂಗಳು, ಎಸ್ಕಲೇಟರ್ ಒಂದು ಕುಸಿದು ಬಿದ್ದ ಪರಿಣಾಮ 30ರ ಮಹಿಳೆಯೊಬ್ಬಳು ಸಾವನ್ನಪ್ಪಿದ್ದಳು. ಆಕೆ ತನ್ನ ಮಗುವನ್ನು ಉಳಿಸಲು ಸಫಲವಾಗಿದ್ದಳಾದರೂ, ಆಕೆಯನ್ನು ಎಸ್ಕಲೇಟರ್ ‘ನುಂಗಿ’ಬಿಟ್ಟಿತ್ತು. ನಂತರ, ಒಂದು ವರ್ಷದ ಹುಡುಗನ ಎಡಗೈಯು ಎಸ್ಕಲೇಟರ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದುದು ಸುದ್ದಿಯಾಗಿತ್ತು. 2014ರಲ್ಲಿ ಚೀನಾದಲ್ಲಿ ಒಟ್ಟು 49 ಎಸ್ಕಲೇಟರ್ ದುರಂತಗಳು ಸಂಭವಿಸಿದ್ದು, 37 ಜನ ಸಾವನ್ನಪ್ಪಿದ್ದಾರೆ.

Write A Comment