ಅಂತರಾಷ್ಟ್ರೀಯ

ಈ 5 ವರ್ಷದ ಪೋರ ಮೊಸಳೆ ಹಿಡಿಯುವುದರಲ್ಲಿ ನಿಸ್ಸೀಮ ! ಈ ವಿಡಿಯೋ ನೋಡಿ…

Pinterest LinkedIn Tumblr

charlie parkar

ವಾಷಿಂಗ್ಟನ್: ದೊಡ್ಡವರೂ ಮೊಸಳೆ ಕಂಡರೆ ಭಯಪಡುತ್ತಾರೆ. ಆದರೆ ಅಮೆರಿಕದ ಪುಟ್ಟ ಪೋರ ಮೊಸಳೆ ಹಿಡಿಯುವುದರಲ್ಲಿ, ಅವುಗಳನ್ನು ಪಳಗಿಸುವುದರಲ್ಲಿ ಯಶಸ್ವಿಯಾಗಿದ್ದಾನೆ.

charlie parkar1

charlie parkar2

ಹೌದು. ಚಾರ್ಲಿ ಪಾರ್ಕರ್ ಮೊಸಳೆ ಹಿಡಿಯುವ ಹಂಟರ್ ಎನಿಸಿಕೊಂಡಿದ್ದಾನೆ. ಈತನ ತಂದೆ ತಾಯಿ ವಿಕ್ಟೋರಿಯಾದ ಬರ್ಲಾತ್ ವನ್ಯಜೀವಿ ಉದ್ಯಾನವನವನ್ನು ನಡೆಸುತ್ತಾರೆ. ಕೇವಲ 5 ವರ್ಷದ ಈತ ಪ್ರಾಣಿಗಳನ್ನು ಅದರಲ್ಲಿ ಮೊಸಳೆಗಳನ್ನು ಹಿಡಿದು ಅದರ ಬಗ್ಗೆ ತಿಳಿದುಕೊಳ್ಳುವುದೆಂದರೆ ಇಷ್ಟವಂತೆ. ಅಲ್ಲದೇ ಮೊಸಳೆಗಳನ್ನು ಹಿಡಿದುಕೊಂಡು ಸಕ್ಕತ್ತಾಗಿ ಪೋಸ್ ನೀಡುತ್ತಾನೆ. ಅಲ್ಲದೇ ಈತ ಆಮೆ, ರ್ಯಾಕೂನ್, ಅಳಿಲುಗಳಂತಹ ಪ್ರಾಣಿಗಳ ಜೊತೆ ಆಡುತ್ತಾ ತನ್ನ ಸಮಯವನ್ನು ಕಳೆಯುತ್ತಾನೆ.

ಉದ್ಯಾನವನದಲ್ಲಿ ಈತ ತನ್ನ ತಂದೆ, ತಾಯಿಗೆ ಸಹಾಯ ಮಾಡುತ್ತಾನೆ. ಹೀಗಾಗಿಯೇ ಈತನಿಗೆ ಪ್ರಾಣಿಗಳೊಂದಿಗೆ ಮೊಸಳೆಗಳೊಂದಿಗೆ ಒಡನಾಟ ಬೆಳೆದಿದೆ ಎನ್ನಬಹುದು. ಈತ ಪ್ರಾಣಿಗಳಿಗೆ ಆಹಾರವನ್ನು ತಿನಿಸುವುದರಿಂದ ಹಿಡಿದು ನೇರಪ್ರಸಾರದ ಕಾರ್ಯಕ್ರಮಗಳಲ್ಲಿಯೂ ಪ್ರವಾಸಿಗರಿಗೆ ಮಾಹಿತಿ ನೀಡುತ್ತಿದ್ದಾನೆ.

https://youtu.be/U-VPVw8BcJs

Write A Comment