ಅಂತರಾಷ್ಟ್ರೀಯ

ವಿಚಿತ್ರ ಘಟನೆ ! ಮೊಸಳೆಯ ರೂಪದಲ್ಲಿ ಜನಿಸಿದ ಎಮ್ಮೆಯ ಕರು…

Pinterest LinkedIn Tumblr

CROCODILE

ಥೈಲ್ಯಾಂಡ್: ಒಂದು ಪ್ರಾಣಿಗೆ 6 ಕಾಲು, 2 ತಲೆ ಹೊಂದಿಕೊಂಡಂತೆ ವಿಚಿತ್ರವಾಗಿ ಜನಿಸುವುದನ್ನು ನೀವು ನೋಡಿರುತ್ತೀರಿ. ಆದರೆ ಎಲ್ಲಿಯಾದರೂ ಒಂದು ಪ್ರಾಣಿ ಇನ್ನೊಂದು ಪ್ರಾಣಿಯಂತೆ ಜನಿಸಿದ್ದನ್ನು ನೋಡಿದ್ದೀರಾ? ಆದರೆ ಇಂತಹದೊಂದು ವಿಲಕ್ಷಣ ಘಟನೆ ಥೈಲ್ಯಾಂಡ್‍ನಲ್ಲಿ ನಡೆದಿದೆ.

ಹೌದು. ಥೈಲ್ಯಾಂಡ್‍ನ ವಾಂಗಿನ್‍ನಲ್ಲಿನ ಥೈ ಗ್ರಾಮದಲ್ಲಿ ಇಂತಹದೊಂದು ವಿಚಿತ್ರ ಘಟನೆ ನಡೆದಿದೆ. ನೋಡಲು ಮೊಸಳೆ ರೀತಿಯಲ್ಲಿರುವ ಜೀವಿ ಜನಿಸಿದೆ. ವಿಚಿತ್ರವೆಂದರೆ ಎಮ್ಮೆಯ ಕರುವೊಂದು ಮೊಸಳೆಯ ರೀತಿಯಲ್ಲಿ ಜನನವಾಗಿರುವುದು ಇಲ್ಲಿನ ಜನರ ಆಶ್ಚರ್ಯಕ್ಕೆ ಕಾರಣವಾಗಿದೆ. ಈ ಹಿಂದೆ ಎಮ್ಮೆ ಆರೋಗ್ಯಕರ ಕರುಗಳಿಗೆ ಜನ್ಮನೀಡುತ್ತಂತೆ. ಇದೇ ಮೊದಲ ಬಾರಿಗೆ ಈ ರೀತಿಯ ಜೀವಿಗೆ ಎಮ್ಮೆ ಜನ್ಮನೀಡಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ನೋಡಲು ಹೇಗಿದೆ?: ವಿಚಿತ್ರವಾಗಿ ಜನಿಸಿರುವ ಎಮ್ಮೆಯ ಕರು ನೋಡಲು ಮಾತ್ರ ಮೊಸಳೆಯಂತೆ ಇದೆ. ಕಡು ಕಪ್ಪುದ ಬಣ್ಣ ಹೊಂದಿರುವ ಕರುವಿಗೆ ಮೊಸಳೆಯಂತಹ ತಲೆ, ದೇಹ, ಒರಟು ಚರ್ಮವಿದೆ. ಆದರೆ ಕರುವಿನಂತೆ ಕಾಲುಗಳನ್ನು ಹೊಂದಿದೆ. ಸದ್ಯ ಹೀಗೆ ಜನಸಿರುವ ಕರುವನ್ನು ನೋಡಿದ ಗ್ರಾಮದ ಜನರೆಲ್ಲಾ ನಮಗೆ ಇನ್ನು ಮುಂದೆ ನಮಗೆ ಅದೃಷ್ಟ ಒಲಿಯುತ್ತದೆ ಎನ್ನುವ ನಂಬಿಕೆ ಇಟ್ಟುಕೊಂಡಿದ್ದಾರೆ.

https://youtu.be/3h6jt3rmJls

Write A Comment