ಅಂತರಾಷ್ಟ್ರೀಯ

ಇಂಥ ಹುಚ್ಚಾಟ ನೀವು ಕಂಡಿರಲಿಕ್ಕಿಲ್ಲ…! ಕಾರು ಚಲಾಯಿಸುತ್ತಿದ್ದವನ ಶರ್ಟ್ ಒಳಗೆ ಹಾವನ್ನು ಹಾಕಿ ಆಟ ಆಡುತ್ತಿರುದು…ಈ ವೀಡಿಯೋ ನೋಡಿ…

Pinterest LinkedIn Tumblr

snake1

ರಿಯಾದ್: ಕೆಲವೊಮ್ಮೆ ಸ್ನೇಹಿತರ ಹುಚ್ಚಾಟ ಯಾವ ಮಟ್ಟಕ್ಕೆ ಇರುತ್ತದೆ ಎನ್ನುವುದಕ್ಕೆ ಈ ಸ್ನೇಹಿತರ ಹುಡುಗಾಟವೇ ಉತ್ತಮ ನಿದರ್ಶನವಾಗಿದೆ. ಸೌದಿ ಅರೆಬಿಯಾದಲ್ಲಿ ನಡೆದ ಈ ಘಟನೆ ಇಷ್ಟೊಂದು ಸುದ್ದಿಯಾಗಲು ಕಾರಣ ಏನು ಅಂತೀರಾ? ಈ ಸ್ಟೋರಿ ನೋಡಿ.

ಹೌದು. ಸೌದಿ ಅರೆಬಿಯಾದಲ್ಲಿ ಸ್ನೇಹಿತನೊಬ್ಬ ಕಾರನ್ನು ಓಡಿಸುತ್ತಿದ್ದ ಸ್ನೇಹಿತನ ಮೇಲೆ ಸರ್ಪವನ್ನು ಬಿಟ್ಟು ಚೆಲ್ಲಾಟ ಆಡಿದ್ದಾನೆ. ಇತ್ತ ವಿಷಕಾರಿ ಸರ್ಪ ದೇಹದ ಮೇಲೆ ಹರಿದಾಡುತ್ತಿದ್ದಂತೆಯೇ ಡ್ರೈವಿಂಗ್ ಮೇಲೆ ಗಮನ ಕಳೆದುಕೊಂಡ ಸ್ನೇಹಿತ ಮನಸ್ಸಿಗೆ ಬಂದ ಹಾಗೇ ಕಾರನ್ನು ಓಡಿಸಿದ್ದಾನೆ. ಇದರಿಂದ ರಸ್ತೆಯಲ್ಲಿ ಸಾಗುತ್ತಿದ್ದ ಬೇರೆ ಸವಾರರಿಗೆ ಕಸಿವಿಸಿಯಾಗಿದೆ. ಅದೃಷ್ಟವಶಾತ್ ಯಾವುದೇ ಅಪಘಾತ ಸಂಭವಿಸಿಲ್ಲ.

ಇದೆಲ್ಲಾ ದೃಶ್ಯವನ್ನು ಇನ್ನೊಬ್ಬ ಸ್ನೇಹಿತ ಸೆರೆಹಿಡಿದಿದ್ದಾನೆ. ಸದ್ಯ ಈ ವಿಡಿಯೋ ಇಲ್ಲಿನ ಸ್ಥಳೀಯ ಮಾಧ್ಯಮದಲ್ಲಿ ಪ್ರಸಾರವಾಗಿದ್ದು, ಯುವಕರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದೆ. ಸೌದಿ ಅರೇಬಿಯಾದಲ್ಲಿ ಪ್ರತಿದಿನ ನಿಮಿಷಕ್ಕೊಂದರಂತೆ ಅಪಘಾತಗಳು ನಡೆಯುತ್ತವೆ. ಇಂತಹ ಸ್ಥತಿಯಲ್ಲೂ ಯುವಕರು ಹೀಗೆ ಹುಚ್ಚಾಟ ಪ್ರದರ್ಶನ ಮಾಡಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

https://youtu.be/etYSOLwwOp0

Write A Comment