ಅಂತರಾಷ್ಟ್ರೀಯ

ಪಾರ್ಕ್ ನಲ್ಲಿ ತಿನ್ನಲು ಆಹಾರವಾಗಿ ನೀಡಿದ್ದ ಮೇಕೆಯೊಂದಿಗೆ ಗೆಳೆತನ ಬೆಳೆಸಿಕೊಂಡ ಹುಲಿ ! ಎಂಥ ಸ್ನೇಹ ….ಈ ವೀಡಿಯೋ ನೋಡಿ…

Pinterest LinkedIn Tumblr

tiger-1

ರಷ್ಯಾ: ಪುಣ್ಯಕೋಟಿಯ ಪ್ರಾಮಾಣಿತೆಗೆ ಮೆಚ್ಚಿ ವ್ಯಾಘ್ರ ಅದನ್ನು ತಿನ್ನದೇ ಕೊನೆಗೆ ತಾನೇ ಪ್ರಾಣ ಬಿಟ್ಟದ್ದು ಕತೆ. ಆದರೆ ಈ ಕಲಿಯುಗದಲ್ಲಿ ಮೇಕೆಯಂತಹ ಸಾಧು ಪ್ರಾಣಿಯನ್ನು ನೋಡಿಯೂ ಅದನ್ನು ಬೇಟೆಯಾಡದೆ ಸುಮ್ಮನಿರುವ ವ್ಯಾಘ್ರವನ್ನು ಎಲ್ಲಿಯೂ ನೋಡಿರಲಾರೆವು. ಆದರೆ ಇದಕ್ಕೆ ಅಪವಾದವಾಗಿ ರಷ್ಯಾದ ಈಸ್ಟರ್ನ್ ಸಫಾರಿ ಪಾರ್ಕ್‍ನಲ್ಲಿ ಇಂತದ್ದೊಂದು ಅಪರೂಪದ ಘಟನೆ ನಡೆದಿದೆ.

ಸಫಾರಿ ಪಾರ್ಕಿನಲ್ಲಿ ಹುಲಿ ಮತ್ತು ಮೇಕೆ ಒಟ್ಟಿಗೆ ಸ್ನೇಹಿತರಂತೆ ಓಡಾಡುತ್ತಿರುವುದು ಈಗ ಸಾಮಾನ್ಯ ದೃಶ್ಯವಾಗಿದೆ. ಹಾಗಂತ ಈ ಮೇಕೆ ಮತ್ತು ಹುಲಿ ಚಿಕ್ಕಂದಿನಿಂದ ಒಟ್ಟಿಗೆ ಬೆಳೆದ ಪ್ರಾಣಿಗಳೇನಲ್ಲ. ಇಲ್ಲಿನ ಆಮುರ್ ಎಂಬ ಹುಲಿಗೆ ಪ್ರತಿ ವಾರ ನೀಡುವಂತೆ ಜೀವಂತ ಮೇಕೆಯನ್ನು ಆಹಾರವಾಗಿ ನೀಡಲಾಗಿತ್ತು. ಆದರೆ ಹುಲಿ ಅದೇಕೋ ಆ ಮೇಕೆಯನ್ನು ತಿನ್ನದೆ ಸುಮ್ಮನಾಗಿಬಿಟ್ಟಿದೆ.

ಹುಲಿಗೆ ಆಹಾರವಾಗಬೇಕಿದ್ದ ಮೇಕೆ ಈಗ ಆ ಹುಲಿ ಜೀವಿಸುತ್ತಿದ್ದ ಪ್ರದೇಶವನ್ನೇ ಆಕ್ರಮಿಸಿಕೊಂಡಿದೆ. ಅಲ್ಲದೆ ಕಳೆದ ಮೂರು ದಿನಗಳಿಂದ ಮೇಕೆ ಹುಲಿಯ ಜಾಗದಲ್ಲಿ ಮಲಗುತ್ತಿದ್ದರೆ ಹುಲಿ ಮಾತ್ರ ತನ್ನ ಜಾಗವನ್ನು ಮೇಕೆಗೆ ಬಿಟ್ಟುಕೊಟ್ಟು ಹೊರಗಡೆ ಮಲಗುತ್ತಿದೆ.

ಅಷ್ಟೆ ಅಲ್ಲ ಈ ಮೇಕೆ, ಆಮುರ್(ಹುಲಿ) ಎಲ್ಲೇ ಹೋದರೂ ಅದನ್ನು ಹಿಂಬಾಲಿಸಿ ಹೋಗುತ್ತಿದೆ. ಮೇಕೆ ಮತ್ತು ಹುಲಿಯ ಈ ಅಪರೂಪದ ಸ್ನೇಹವನ್ನು ನೋಡಿ ಪಾರ್ಕಿನ ಸಿಬ್ಬಂದಿಗಳೂ ಸಹ ಬೆರಗಾಗಿದ್ದಾರೆ. ಇದೀಗ ಮೇಕೆಯೂ ಹುಲಿಯೊಂದಿಗೆ ಪಾರ್ಕಿನಲ್ಲಿ ಜೀವಿಸುತ್ತಿದ್ದು ಅದಕ್ಕೆ ತೀಮೂರ್ ಎಂದು ಹೆಸರಿಡಲಾಗಿದೆ.

Write A Comment