ಮುಂಬೈ

ಸಿನಿಮಾ ವೀಕ್ಷಣೆಯ ವೇಳೆ ರಾಷ್ಟ್ರಗೀತೆಗೆ ಅಗೌರವ ತೋರಿಸಿದ ಕುಟುಂಬವನ್ನು ಥಿಯೇಟರ್‌ನಿಂದಲೇ ಹೊರಕಳಿಸಿದ್ರು!

Pinterest LinkedIn Tumblr

1

ಮುಂಬೈ: ಮುಂಬೈ ಕುರ್ಲಾದ ಪಿವಿಆರ್ ಮಲ್ಟಿಪ್ಲೆಕ್ಸ್ ಒಂದರಲ್ಲಿ ರಣ್‌ಬೀರ್ ಮತ್ತು ದೀಪಿಕಾ ನಟಿಸಿರುವ ‘ತಮಾಷಾ’ ಸಿನಿಮಾ ನೋಡಲು ಕುಟುಂಬವೊಂದು ಬಂದಿತ್ತು. ಸಿನಿಮಾ ಆರಂಭವಾಗುವ ಮುನ್ನ ರಾಷ್ಟ್ರಗೀತೆ ಮೊಳಗಿದಾಗ ಆ ಕುಟುಂಬ ಮಾತ್ರ ಸೀಟು ಬಿಟ್ಟು ಎದ್ದು ನಿಲ್ಲಲಿಲ್ಲ. ಇನ್ನೇನು ರಾಷ್ಟ್ರಗೀತೆ ಮುಗಿಯುತ್ತಾ ಬಂದಾಗ ಜನರು ಸೀಟು ಬಿಟ್ಟೇಳದ ಆಲಸಿ ಕುಟುಂಬವನ್ನು ನೋಡಿದ್ದು, ಕೂಡಲೇ ಆ ಕುಟುಂಬವನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ.

ಸಿನಿಮಾ ಥಿಯೇಟರ್ ನಲ್ಲಿ ನೆರೆದಿದ್ದ ಜನರೆಲ್ಲರೂ ಆ ಕುಟುಂಬದವರನ್ನು ಬೈದಿದ್ದು, ಸಿಟ್ಟಿಗೆದ್ದ ವ್ಯಕ್ತಿಯೊಬ್ಬರು ಅವರಿಗೆ ಹೊಡೆಯುವುದಕ್ಕೂ ಮುಂದಾಗಿದ್ದಾರೆ. ರಾಷ್ಟ್ರಗೀತೆಗೆ ಅಗೌರವ ಸೂಚಿಸಿದ ಆ ಕುಟುಂಬವನ್ನು ಥಿಯೇಟರ್ ನಿಂದ ಹೊರ ಕಳಿಸಿ ಎಂದು ಎಲ್ಲರೂ ಬೊಬ್ಬೆ ಹಾಕಿದ್ದು, ಕೊನೆಗೆ ಥಿಯೇಟರ್ ನೌಕರು ಜನರ ಒತ್ತಾಯಕ್ಕೆ ಮಣಿದು ಆ ಕುಟುಂಬವನ್ನು ಥಿಯೇಟರ್ ನಿಂದ ಹೊರಕಳಿಸಲಾಯಿತು.

ರಾಷ್ಟ್ರಗೀತೆಗೆ ಅಗೌರವ ಸೂಚಿಸಿದರೆ ನಾವು ಸುಮ್ಮನಿರಲ್ಲ ಎಂಬುದನ್ನು ಮುಂಬೈಯ ಜನ ತೋರಿಸಿಕೊಟ್ಟಿರುವ ಈ ವೀಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಂಚಲನ ಸೃಷ್ಟಿಸಿದೆ.

Write A Comment