ರಾಷ್ಟ್ರೀಯ

ಆನೆಯ ಪುಂಡಾಟಿಕೆಗೆ 100 ಮನೆ ಧ್ವಂಸ

Pinterest LinkedIn Tumblr

https://youtu.be/ntMsnOJ1DBI

ಕೋಲ್ಕತ್ತಾ: ಕಾಡಾನೆಯೊಂದು 100 ಕ್ಕೂ ಹೆಚ್ಚು ಮನೆಗಳನ್ನ ಹಾಳುಮಾಡಿ ಜನರಲ್ಲಿ ಆತಂಕ ಸೃಷ್ಟಿಸಿರುವ ಘಟನೆ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದಿದೆ. ಬೈಕುಂತಪುರ್ ಕಾಡಿನ ಆನೆಯೊಂದು ಇಲ್ಲಿನ ನಿವಾಸಿಗಳ ಮನೆಯಂಗಳಕ್ಕೆ ನುಗ್ಗಿ 100 ಕ್ಕೂ ಹೆಚ್ಚು ಮನೆಗಳ ಕಾಂಪೌಂಡ್ ಮತ್ತು ಶೆಡ್ಡುಗಳನ್ನು ನೆಲಕ್ಕುರುಳಿಸಿದೆ.

ಆನೆಯನ್ನು ತಡೆಯಲು ಸ್ಥಳೀಯರು ಎಷ್ಟು ಪ್ರಯತ್ನಪಟ್ಟರೂ ಸಾಧ್ಯವಾಗದಿದ್ದಾಗ ಅವರೆಲ್ಲ ಅಸಹಾಯಕರಾಗಿ ಆನೆ ಮನೆ ಉರುಳಿಸುವುದನ್ನು ನೋಡುತ್ತಾ ನಿಂತಿದ್ದರು. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಜನರಿಗೆ ಆತಂಕ ಪಡದಂತೆ ಸೂಚಿಸಿದರು. ಅರಣ್ಯ ಸಿಬ್ಬಂದಿ ಆನೆಗೆ ಮತ್ತು ಬರುವ ಗುಂಡಿನಿಂದ ಹೊಡೆದರೂ ಆನೆ ಇನ್ನೂ ತನ್ನ ಪುಂಡಾಟಿಕೆಯನ್ನು ನಿಲ್ಲಿಸಿರಲಿಲ್ಲ.

ಆನೆಯನ್ನು ನೋಡಲು ನೂರಾರು ಜನ ಸ್ಥಳದಲ್ಲಿ ಜಮಾಯಿಸಿದ್ದರಿಂದ ಸಂಚಾರ ಅಸ್ತವ್ಯಸ್ತವಾಗಿದ್ದು ಆನೆಗೆ ಕೊಟ್ಟಿರುವ ಮದ್ದು ಕೆಲಸ ಮಾಡಲು ಆರಂಭಿಸಿದ ನಂತರ ಅದನ್ನು ಹಿಡಿದು ಕಾಡಿಗೆ ಕೊಂಡೊಯ್ಯಲು ಅರಣ್ಯ ಸಿಬ್ಬಂದಿ ಸ್ಥಳದಲ್ಲೇ ಕಾಯುತ್ತಿದ್ದಾರೆ.

ಕಳೆದ ಕೆಲವು ದಿನಗಳಿಂದ ಪಶ್ಚಿಮ ಬಂಗಾಳದ 3 ಜಿಲ್ಲೆಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು 300 ಕ್ಕೂ ಹೆಚ್ಚಿನ ಗ್ರಾಮಗಳ ಜನರು ಇದರಿಂದ ಆತಂಕಕ್ಕೀಡಾಗಿದ್ದಾರೆ. ಮಿಡ್ನಾಪುರ್, ಬಂಕುರ ಮತ್ತು ಪುರುಲಿಯಾದಲ್ಲಿ ಕಾಡಾನೆಗಳಿಗೆ ಅಂಕುಶ ಹಾಕುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

Write A Comment