ಹೈದರಾಬಾದ್: ವಿಚಿತ್ರ ಸಾಧನೆ ಮಾಡಿ ಯಾರಾದ್ರೂ ಗಿನ್ನಿಸ್ ದಾಖಲೆ ಮಾಡಿರೋದನ್ನ ಕೇಳಿದ್ದೀರ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಒಂದೇ ನಿಮಿಷದಲ್ಲಿ ಹೆಚ್ಚು ಜನರನ್ನು ತಬ್ಬಿಕೊಳ್ಳುವ ಮೂಲಕ ದಾಖಲೆ ಮಾಡಿದ್ದಾರೆ.
ಹೌದು. ಒಂದು ನಿಮಿಷದಲ್ಲಿ ಬರೋಬ್ಬರಿ 79 ಮಂದಿ ಬಾಲಕರನ್ನು ತಬ್ಬಿಕೊಂಡು ಹೈದರಾಬಾದ್ ಮೂಲದ ಕೃಷ್ಣ ಕುಮಾರ್ ಗಿನ್ನಿಸ್ ದಾಖಲೆ ಮಾಡಿದ್ದಾರೆ. ಇವರ ಈ ವಿಚಿತ್ರ ಸಾಧನೆ ಗಿನ್ನಿಸ್ ಪುಟ ಸೇರಿದೆ.
ಈ ರೀತಿಯಾಗಿಯೂ ದಾಖಲೆ ಮಾಡಬಹುದು ಎಂದು ಯಾರು ಊಹಿಸಲು ಸಾಧ್ಯವೇ ಇಲ್ಲ. ಆದ್ರೆ ಕುಮಾರ್ ಇಂತಹ ಸಾಹಸಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ. ಒಂದು ನಿಮಿಷದಲ್ಲಿ 79 ಮಂದಿಯನ್ನ ತಬ್ಬಿಕೊಂಡು ಹೊಸ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ.
Comments are closed.