ಕರಾವಳಿ

ಕುಂದಾಪುರದಲ್ಲಿ ಕೋತಿರಾಜನ ಝಲಕ್- ಜನಜಾತ್ರೆಯ ನಡುವೆ ಕಟ್ಟಡ ಏರಿದ ದುರ್ಗದ ಸ್ಪೈಡರ್ ಮ್ಯಾನ್ (ವಿಡಿಯೋ)

Pinterest LinkedIn Tumblr

https://youtu.be/jmW8M5tGFTw

ಸಂದರ್ಶನ- ಯೋಗೀಶ್ ಕುಂಭಾಸಿ

ಕುಂದಾಪುರ: ಶನಿವಾರ ಸಂಜೆ ಕುಂದಾಪುರ ನಗರದ ಹೃದಯ ಭಾಗದಲ್ಲಿ ಜನಜಾತ್ರೆಯೇ ಏರ್ಪಟ್ಟಿತ್ತು. ವ್ಯಕ್ತಿಯೋರ್ವ ಜನರೆದುರಿಗೆ ಕೈ ಬೀಸುತ್ತಾ ಬಂದಿದ್ದೇ ನಗರದ ಜೆ.ಕೆ. ಟವರ್ ಹೋಟೇಲ್ ಬಿಲ್ಡಿಂಗನ್ನು ಯಾವುದೇ ಹಗ್ಗದ ಸಹಾಯವಿಲ್ಲದೇ ಏರಲಾರಂಭಿಸಿದ. ಹೌದು ಆತನೇ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಯಾನೆ ಕೋತಿರಾಮ. ಖಾಸಗಿ ಸಮಾರಂಭವೊಂದಕ್ಕೆ ಬಂದಿದ್ದ ಕೋತಿರಾಜ್ ಶನಿವಾರ ನೆರೆದಿದ್ದ ಸಾವಿರಾರು ಜನರ ಮೈನವಿರೇಳಿಸುವಂತೆ ಬಹುಮಹಡಿಯ ಕಟ್ಟಡವನ್ನು ಏರಿಯೇ ಬಿಟ್ಟಿದ್ದ.

ಕುಂದಾಪುರದ ಖಾಸಗಿ ಹೊಟೇಲ್‌ನಲ್ಲಿ ಮಾತಿಗೆ ಸಿಕ್ಕ ಕೋತಿರಾಜ್ ‘ಕನ್ನಡಿಗ ವರ್ಲ್ಡ್’ ಪ್ರತಿನಿಧಿ ಜೊತೆ ತನ್ನ ಲೈಫ್ ಸ್ಟೋರಿಯನ್ನು ಬಿಚ್ಚಿಟ್ಟಿದ್ದ.

Kothiraj_Stunt Programme_Kundapur (1) Kothiraj_Stunt Programme_Kundapur (2) Kothiraj_Stunt Programme_Kundapur (3) Kothiraj_Stunt Programme_Kundapur (4) Kothiraj_Stunt Programme_Kundapur (5) Kothiraj_Stunt Programme_Kundapur (6) Kothiraj_Stunt Programme_Kundapur (7) Kothiraj_Stunt Programme_Kundapur (8) Kothiraj_Stunt Programme_Kundapur (9) Kothiraj_Stunt Programme_Kundapur (10) Kothiraj_Stunt Programme_Kundapur (11) Kothiraj_Stunt Programme_Kundapur (12) Kothiraj_Stunt Programme_Kundapur (13) Kothiraj_Stunt Programme_Kundapur (14) Kothiraj_Stunt Programme_Kundapur (15) Kothiraj_Stunt Programme_Kundapur (16) Kothiraj_Stunt Programme_Kundapur (17) Kothiraj_Stunt Programme_Kundapur (18) Kothiraj_Stunt Programme_Kundapur (19) Kothiraj_Stunt Programme_Kundapur (20) Kothiraj_Stunt Programme_Kundapur (21) Kothiraj_Stunt Programme_Kundapur (22) Kothiraj_Stunt Programme_Kundapur (23) Kothiraj_Stunt Programme_Kundapur (24) Kothiraj_Stunt Programme_Kundapur (25) Kothiraj_Stunt Programme_Kundapur (26) Kothiraj_Stunt Programme_Kundapur (27) Kothiraj_Stunt Programme_Kundapur (28) Kothiraj_Stunt Programme_Kundapur (29) Kothiraj_Stunt Programme_Kundapur (30) Kothiraj_Stunt Programme_Kundapur (31) Kothiraj_Stunt Programme_Kundapur (32) Kothiraj_Stunt Programme_Kundapur (33) Kothiraj_Stunt Programme_Kundapur (34)

ಮೂಲತಃ ತಮಿಳುನಾಡಿನ ತೇನಿ ಜಿಲ್ಲೆಯವನಾದ ಈತ 5 ವರ್ಷ ಪ್ರಾಯದಲ್ಲಿ ತಪ್ಪಿಸಿಕೊಂಡು ಬಾಗಲಕೋಟೆ ಸೇರಿದ್ದ. ಅಲ್ಲಿ ಸ್ವೀಟ್ ಅಂಗಡಿಯೊಂದರಲ್ಲಿ ಹಲವು ವರ್ಷಗಳ ಕಾಲ ದುಡಿದ ಈತನಿಗೆ ಸಮಸ್ಯೆ ಕಾಡಿತೆಂದು ಆ ಕೆಲಸ ಬಿಟ್ಟು ಚಿತ್ರದುರ್ಗಕ್ಕೆ ಹೊರಟ. ಈ ವೇಳೆ ದಾರಿಯಲ್ಲಿ ನಡೆದು ಹೋಗುತ್ತಿದ್ದ ಈತನನ್ನು ಅಲ್ಲಿನ ನಿವಾಸಿ ಮಹಾದೇವಪ್ಪ ಮನೆಗೆ ಕರೆದುಕೊಂಡು ಹೋಗಿ ಸಾಕಿದರು. ಬಳಿಕ ಈತ ಚಿತ್ರದುರ್ಗದಲ್ಲಿ ಗಾರೆಕೆಲಸ ಮಾಡಿ ಜೀವನೋಪಾಯಕ್ಕೆ ಮಾರ್ಗ ಕಂಡುಕೊಂಡನಂತೆ.

ಜೀವನಕ್ಕೆ ತಿರುವು!
ಹೀಗೆ ಜೀವನ ನಿರ್ವಹಿಸುತ್ತಿದ್ದ ಜ್ಯೋತಿರಾಜನಿಗೆ ೧೮ ನೇ ವಯಸ್ಸಿನಲ್ಲಿ ಜೀವನವೇ ಬೇಡ ತಾನು ಬದುಕಬಾರದೆಂಬ ಆಲೋಚನೆ ಬಂದಿದ್ದು ಸಾಯಲು ಮುಂದಾಗಿದ್ದಾನೆ. ರಾತ್ರಿ ವಿಷ ಕುಡಿದು ಚಿತ್ರದುರ್ಗದ ಕೋಟೆಯಲ್ಲಿ ಮಲಗಿದ ಈತ ಬೆಳಗಾದರೂ ಹಾಗೆಯೇ ಮಲಗಿದ್ದ ಕಿಂಚಿತ್ತೂ ವಿಷ ಪ್ರಭಾವ ಬೀರಿರಲಿಲ್ಲ .ಬಳಿಕ ಬೆಳಿಗ್ಗೆ 10 ಗಂಟೆಗೆ ದೇಹಕ್ಕೆ ಕಲ್ಲು ಕಟ್ಟಿಕೊಂಡು ನೀರಿಗೆ ಹಾರಿದ ಆದರೆ ಆಯಸ್ಸು ಗಟ್ಟಿಯಿತ್ತು ಕಲ್ಲಿನ ಸಮೇತ ಮೇಲೆ ಬಂದು ಬದುಕಿದ, ಆದರೂ ಮರಳಿ ಯತ್ನವ ಮಾಡು ಎಂಬಂತೆ 100 ಅಡಿ ಎತ್ತರದ ಬಂಡೆಯ ಮೇಲಿನಿಂದ ಕೆಳಗೆ ದುಮುಕಬೇಕೆಂದು ಹೊರಟ ಆದರೆ ಬೆಟ್ಟ ಹತ್ತಲು ಯಾವುದೇ ಮೆಟ್ಟಿಲಿರಲಿಲ್ಲ ಹೇಗೆ ಹತ್ತಬೇಕೆಂದು ಆಲೋಚನೆ ಮಾಡುತ್ತಿರುವಾಗಲೇ ಕೋತಿಯೊಂದು ಬೆಟ್ಟವನ್ನು ತನ್ನ ಕಾಲಿನ ಮೂಲಕ ಹಾರಿ ಹಾರಿ ಹತ್ತಿಹೋಗುವುದನ್ನು ಕಂಡು ತಾನು ಹಾಗೆಯೇ ಪ್ರಯತ್ನಿಸಿ ಸಫಲನಾಗಿ ಬೆಟ್ಟ ಏರಿದ.

ಕೋತಿಯಾದ ಜ್ಯೋತಿ…..
ಆಗಲೇ ಹತ್ತಿರದಲ್ಲಿದ್ದ ನೂರಾರು ಪ್ರವಾಸಿಗರು ಈತ ಸಾಹಸ ಮಾಡುತ್ತಿದ್ದನೆಂದು ತಿಳಿದು ಚಪ್ಪಾಳೆಯ ಮಳೆಗೈದರು. ಆಗಲೇ ಜ್ಯೋತಿರಾಜನಿಗೆ ತಿಳಿದದ್ದು ತಾನೂ ಬದುಕಿ ಸಾಧಿಸಬೇಕು, ಈ ಚಪ್ಪಾಳೆಯನ್ನು ರಾಜ್ಯ ಹಾಗೂ ದೇಶಮಟ್ಟದಲ್ಲಿ ಸಂಪಾಧಿಸಬೇಕು ಎಂದುಕೊಂಡವನೇ ಸಾಯುವ ಆಲೋಚನೆ ಕೈಬಿಟ್ಟ. ಬಳಿಕ ಇದನ್ನೇ ತನ್ನ ಉದ್ಯೋಗವನ್ನಾಗಿಸಿಕೊಂಡ ಜ್ಯೋತಿರಾಜ ಕ್ರಮೇಣ ಕೋತಿರಾಜನೆಂಬ ಹೆಸರಿನಲ್ಲಿ ಪ್ರಖ್ಯಾತನಾಗಿ ಅಭಿಮಾನಿಗಳನ್ನು ಸಂಪಾದಿಸಿದ. ತನ್ನ ಜೀವನದ ಈ ಉತ್ಸಾಹ ಮತ್ತು ಸಾಧನೆಗೆ ಕೋತಿಯೇ ಸ್ಪೂರ್ತಿಯೆನ್ನುತ್ತಾನೆ ಜ್ಯೋತಿರಾಜ್.

ಸರಕಾರದ ಸಹಕಾರವಿಲ್ಲ:
ಜ್ಯೋತಿರಾಜ ಮಾಡುವ ಸಾಹಸಕ್ಕಾಗಲೀ ಅಥವಾ ಜೀವ ಉಳಿಸುವ ಕಾರ್ಯಕ್ಕಾಗಲೀ ಸರಕಾರ ಯಾವುದೇ ರೀತಿಯ ಸಹಕಾರ ಸ್ಪಂಧನೆ ನೀಡಿಲ್ಲ, ಆದರೆ ಜನರು ಹಾಗೂ ಮಾಧ್ಯಮದವರು ತನ್ನನ್ನು ಪ್ರೋತ್ಸಾಹಿಸಿ ಬೆಳೆಸಿದ್ದಾರೆ ಎಂದು ಕಣ್ತುಂಬಿಕೊಂಡು ಹೇಳುತ್ತಾನೆ ಕೋತಿರಾಜ್. ಈವರೆಗೂ ಇಷ್ಟು ಸಾಹಸಗಳನ್ನು ಮಾಡಿದ್ದರೂ ಲಿಮ್ಕಾ ಅಥವಾ ಗಿನ್ನೆಸ್ ದಾಖಲೆ ಮಾಡಲು ಸಾಧ್ಯವಾಗಿಲ್ಲ, ಅದರ ಹಿಂದೆ ಹೋಗಲೂ ನನಗೆ ಆಗಿಲ್ಲ. ಸರಕಾರ ನನ್ನ ಸಾಧನೆಗೆ ಬೆನ್ನೆಲುಬಾಗಿ ನಿಲ್ಲಲಿಲ್ಲ. ಸಾಧನೆ ಮಾಡುವ ವ್ಯಕ್ತಿಗೆ ಸಹಕಾರ ನೀಡದಿರುವುದು ನೋವಾಗಿದೆ. ಆದರೇ ಸಂಘಸಂಶೆಗಳು ಮಧ್ಯಮಗಳು ನನ್ನನು ಬೆಳೆಸಿದೆ ಎನ್ನುತ್ತಾರೆ ಕೋತಿರಾಜ್.

ಸದ್ಯ ಜೀವನವನ್ನೇ ಸಾಹಸದಲ್ಲಿ ತೊಡಗಿಸಿಕೊಂಡಿರುವ ಕೋತಿರಾಜ ಬರುವ ಅಲ್ಪ ಆದಾಯದಲ್ಲಿ ಇಂಡಿಯನ್ ಮಂಕಿ ಕ್ಲಬ್ ಎನ್ನುವ ಸಂಸ್ಥೆಯೊಂದನ್ನು ಸ್ಥಾಪಿಸಿ ಒಂದಷ್ಟು ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಭ್ಯಾಸವನ್ನು ನೀಡುವ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶದಲ್ಲಿನ ಎಲ್ಲಾ ದೊಡ್ಡ-ದೊಡ್ಡ ಕಟ್ಟಡಗಳನ್ನು ಏರಬೇಕು ಎನ್ನುವ ಹಂಬಲ ಹೊಂದಿರುವ ಕೋತಿರಾಜ್ ಸರಕಾರ ಯುವ ಪ್ರತಿಭೆಗಳನ್ನು ಬೆಳೆಸಿದಾಗ ಮಾತ್ರ ದೇಶಕ್ಕೆ ಹೆಸರು ತರಲು ಸಾಧ್ಯವಾಗುತ್ತದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾನೆ. ಸದ್ಯ ತನ್ನ ಅಣ್ಣನ ಮಗ ಅರ್ಜುನ್ ಅವರನ್ನು ಇದೇ ಸಾಹಸದಲ್ಲಿ ಮುಂದುವರಿಸುವ ಬಗ್ಗೆ ಕೆಲಸ ಮಾಡುತ್ತಿರುವ ಕೋತಿರಾಜ್ ಅಣ್ಣನ ಮಗ ಅರ್ಜುನ್ ಮುಂದಿನ ೨೦೨೦ರಲ್ಲಿನ ಒಲಂಪಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಲು ಸಕಲ ಅಭ್ಯಾಸವನ್ನು ಮಾಡುತ್ತಿದ್ದಾನೆ.

ಹುಟ್ಟಿದ್ದೆಲ್ಲಿಯಾದರೂ ನಾನು ಕನ್ನಡಿಗನಾಗಿಯೇ ಸಾಯುವೆ. ಸಾಯುವ ಕೊನೆ ಕ್ಷಣದವೆರೆಗೂ ಕನ್ನಡಿಗನಾಗಿ ರಾಜ್ಯ ಹಾಗೂ ದೇಶಕ್ಕೆ ಒಳಿತು ಮಾಡಿ ಹೆಸರು ಕೀರ್ತಿ ಸಂಪಾದಿಸಿ ಕೊಡುವ ಕೆಲಸ ಮಾಡುವೆ ಎನ್ನುತ್ತಾನೆ ಕೋತಿರಾಜ್. ಕೋತಿರಾಜ್ ತಾಯಿ ಆತ ಕಟ್ಟಡ ಏರುವ ಸಂಪೂರ್ಣ ಲೈವ್ ಶೋ ನೋಡಿದ್ದು ಶನಿವಾರ ಕುಂದಾಪುರದಲ್ಲಿ ಎನ್ನುವುದು ಇನ್ನೊಂದು ವಿಶೇಷ ಸಂಗತಿ.

ಕುಂದಾಪುರದ ಜನರ ಸಹಕಾರ ಮರೆಯಲ್ಲ…
ಎಲ್ಲಾ ಕಡೆ ಕರೆಸಿ ಕಾರ್ಯಕ್ರಮ ಮಾಡಿದ್ದಾರೆ. ಆದರೆ ಕುಂದಾಪುರದಜನರು ನನ್ನನ್ನು ಉತ್ತಮವಾಗಿ ಸ್ವಾಗತಿಸಿ ಉತ್ಸಾಹ ನೀಡುವುದರೊಂದಿಗೆ ಸಕಲ ಸೌಕರ್ಯಗಳನ್ನು ಮಾಡಿಕೊಟ್ಟು ಸಾಧನೆಗೆ ಸ್ಪೂರ್ತಿ ನೀಡಿದ್ದಾರೆ. ಜನರು ನನ್ನೊಂದಿಗೆ ಬೆರೆತು ಸಾವಿರಾರು ಸಂಖ್ಯೆಯಲ್ಲಿ ಪಾಲ್ಘೊಂಡಿದ್ದು ಇನ್ನಷ್ಟು ಖುಷಿ ನೀಡಿದೆ.
– ಕೋತಿರಾಜ್ ಚಿತ್ರದುರ್ಗ (ಸಾಹಸಿಗ)

Comments are closed.