ಅಂತರಾಷ್ಟ್ರೀಯ

ಇದು ವಿಶ್ವದ ಅತ್ಯಂತ ಅಪಾಯಕಾರಿ ಮರ, ಮುಟ್ಟಿದ್ರೆ ನಿಮಗೆ ಸಾವು ಖಚಿತ!

Pinterest LinkedIn Tumblr


ಫ್ಲೋರಿಡಾ : ನೋಡಲು ಈ ಮರ ಅತ್ಯಂತ ಆಕರ್ಷಕವಾಗಿದೆ; ಹಿತಕಾರಿಯಾಗಿದೆ; ನಿರಪಾಯಕಾರಿ ಎಂದೂ ಕಾಣುತ್ತದೆ – ಆದರೆ ಜೋಕೆ – ಇದು ವಿಶ್ವದ ಅತ್ಯಂತ ಅಪಾಯಕಾರಿ ಮರ; ಇದನ್ನು ಮುಟ್ಟಿದರೆ ನೀವು ಸಾಯುತ್ತೀರಿ!

ಅತ್ಯಂತ ಮಾರಣಾಂತಿಕ ವಿಷಕಾರಿ ಆಗಿರುವ ಈ ಮರದ ಹೆಸರು ಮ್ಯಾಂಚಿನೀಲ್‌. ಈ ಮರವನ್ನು ಕ್ಯಾರಿಬಿಯನ್‌ ದೇಶದಲ್ಲಿ, ಫ್ಲೋರಿಡಾ, ಬಹಾಮಾಸ್‌, ಮೆಕ್ಸಿಕೋ ಮತ್ತು ಮಧ್ಯ ಹಾಗೂ ದಕ್ಷಿಣ ಅಮೆರಿಕದಲ್ಲಿ ಸಾಮಾನ್ಯವಾಗಿ ಕಾಣಬಹುದಾಗಿದೆ.

ಈ ಮರ ಸಾಮಾನ್ಯವಾಗಿ ಸಮುದ್ರ ತೀರದಲ್ಲಿ , ಹಿನ್ನೀರ ಪ್ರದೇಶದಲ್ಲಿ ಕಾಣ ಸಿಗುತ್ತದೆ. ಇದು ನೋಡಲು ಆ್ಯಪಲ್‌ ಮರದಂತೆ ಇದೆ. ಆ್ಯಪಲ್‌ ಗಾತ್ರದ ಫ‌ಲವನ್ನೂ ಈ ಮರ ನೀಡುತ್ತದೆ. ಆದರೆ ಇದನ್ನು ತಿಂದವರು ನೇರವಾಗಿ ಸ್ವರ್ಗಕ್ಕೇ ಹೋಗುತ್ತಾರೆ. ಆದುದರಿಂದಲೇ ಇದನ್ನು ಸ್ಥಳೀಯರು “ಲಿಟ್ಲ ಆ್ಯಪಲ್‌ ಆಫ್ ಡೆತ್‌’ ಎಂದೇ ಕರೆಯುತ್ತಾರೆ.

ಮ್ಯಾಂಚಿನೀಲ್‌ ಮರ ಬೆಳೆಯುವಲ್ಲಿ ಸಮುದ್ರ ತಟದ ಮರಳು ಕೊರೆದು ಹೋಗುವುದಿಲ್ಲ; ಬದಲು ದೃಢವಾಗಿರುತ್ತದೆ. ಹಾಗಾಗಿ ಈ ಮರಗಳು ಸಮುದ್ರ ಕೊರೆತವನ್ನು ಬಹುಮಟ್ಟಿಗೆ ತಡೆಯುತ್ತವೆ.

ಅತ್ಯಂತ ವಿಚಿತ್ರವೆಂದರೆ ಮಳೆಗಾಲದಲ್ಲಿ ಈ ಮರದ ಎಲೆಗಳಿಂದ ತೊಟ್ಟಿಕ್ಕುವ ನೀರು ಅತ್ಯಂತ ಕುದಿ ಬಿಂದುವಾಗಿರುತ್ತದೆ ಮತ್ತು ಮರದ ಕೆಳಗೆ ನಿಂತವರ ದೇಹದ ಚರ್ಮವನ್ನು ಅದು ಸುಟ್ಟು ಬಿಡುತ್ತದೆ ! ಈ ಮರದ ಎಲೆಗಳು ವಿಷಕಾರಿ ದ್ರವವನ್ನು ಸ್ರವಿಸುವುದೇ ಇದಕ್ಕೆ ಕಾರಣವಾಗಿದೆ.

ಹಾಗೆ ನೋಡಿದರೆ ಈ ಮರದ ಎಲ್ಲ ಭಾಗಗಳೂ ಅತ್ಯಂತ ವಿಷಕಾರಿಯಾಗಿವೆ. ಈ ಮರದಿಂದ ಹೊಮ್ಮುವ ಬೆಳ್ಳನೆಯ ಹಾಲು ಹಲವು ಬಗೆಯ ಚರ್ಮ ರೋಗಗಳನ್ನು ತರುತ್ತದೆ. ಮರದ ಹಾಲಿನ ಒಂದು ಸಣ್ಣ ಹನಿ ನಿಮ್ಮ ಚರ್ಮಕ್ಕೆ ತಾಗಿತೆಂದರೆ ಮತ್ತೆ ನೀವು ದಿನಪೂರ್ತಿ ಮೈ ತುರಿಸಿಕೊಳ್ಳುತ್ತಲೇ ಇರಬೇಕಾಗುತ್ತದೆ. ಈ ಹಾಲಿನ ಒಂದು ಬಿಂದುವನ್ನು ಕಾರಿನ ಮೇಲೆ ಹಾಕಿದರೂ ಕಾರಿನ ಪೇಂಟ್‌ ಕೊರೆದು ಹೋಗುತ್ತದೆ.

ವಿಜ್ಞಾನಿಗಳ ಪ್ರಕಾರ ಈ ಮರಣ ವೃಕ್ಷದಲ್ಲಿ ಹಲವು ಬಗೆಯ ವಿಷಕಾರಿ ಅಂಶಗಳಿರುವುದು ಕಂಡು ಬಂದಿದೆ : ಅವೆಂದರೆ 12 ಡಿಆಕ್ಸಿ, 5 ಹೈಡ್ರಾಕ್ಸಿಫೋರ್ಬಲ್‌, 6 ಗಾಮಾ, 7 ಆಲ್ಫಾ ಆಕ್ಸೆ„ಡ್‌, ಹಿಪೋಮ್ಯಾನಿನ್ಸ್‌, ಮ್ಯಾನ್ಸಿನೆಲಿನ್‌ ಮತ್ತು ಸ್ಯಾಪೋಜೆನಿನ್‌, ಫ್ಲೋರೋಸೆಟೋಫಿನೋನ್‌-2, 4 ಡೈಮಿಥಿಲೆದರ್‌. ಮರದ ಹಣ್ಣಿನಲ್ಲಿ ಫಿಸೋಸ್ಟಿಗ್‌ಮಿನ್‌ ವಿಷ ಇದೆ.

ಅಂದ ಹಾಗೆ ಇಲ್ಲಿರುವ ವಿಡಿಯೋ ನೋಡಿ – ಮಾರಣಾಂತಿಕವಾಗಿರುವ ಈ ಮ್ಯಾಂಚಿನೀಲ್‌ ಮರದ ಬಗ್ಗೆ ನಿಮಗೆ ಇನ್ನಷ್ಟು ವಿಷಯಗಳು ಗೊತ್ತಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಈ ಮಾರಣಾಂತಿಕ ಮರ ಈಗಾಗಲೇ ಗಿನ್ನೆಸ್‌ ಬುಕ್‌ ಆಫ್ ರೆಕಾರ್ಡ್‌ ಸೇರಿಕೊಂಡಿದೆ!
-ಉದಯವಾಣಿ

Comments are closed.